735
ಕುಮಟಾ : ಜನಿವಾರ ತೆಗೆದು ಪರೀಕ್ಷೆ ಬರೆಯುವಂತೆ ಒತ್ತಡ ಹಾಕಿದ್ದು, ಜನಿವಾರ ಕತ್ತರಿಸುವಂತೆ ಹೇಳಿದ ಘಟನೆ ಬೀದರ್ ಮತ್ತು ಶಿವಮೊಗ್ಗದಲ್ಲಿ ನಡೆದಿದ್ದು, ಇದು ವಿಷಾದನೀಯ.
ಎಲ್ಲರಿಗೂ ಸಂವಿಧಾನವು ಅವರವರ ಸ್ವಾತಂತ್ರ್ಯವನ್ನು ನಿಯಮಗಳಿಗೆ ಧರ್ಮಾಚರಣೆಗಳಿಗೆ ಕೊಟ್ಟಿದೆ. ಪರೀಕ್ಷಾ ನಿಯಮಕ್ಕೆ ಜನಿವಾರದಿಂದ ಯಾವುದೇ ಉಲ್ಲಂಘನೆಯಾಗುವುದಿಲ್ಲ. ಹಾಗಿರುವಾಗ ಎಲ್ಲರನ್ನೂ ಸರಿಸಮವಾಗಿ ನೋಡಬೇಕಾದ ಅಧಿಕಾರಿಗಳೇ ಜನಿವಾರವನ್ನೇ ಮುಂದಿಟ್ಟುಕೊಂಡು ಪರೀಕ್ಷೆಗೆ ಅಡ್ಡಿಪಡಿಸಿದ್ದು ಸರಿಯಲ್ಲ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ.

ಪರೀಕ್ಷೆಗಳು ಮಕ್ಕಳ ಹಣೆಬರಹವನ್ನು ನಿರ್ಧರಿಸುವಂಥದ್ದು, ವಿದ್ಯಾರ್ಥಿಗಳು ಪರೀಕ್ಷೆಯ ಮಾನಸಿಕ ಒತ್ತಡದಲ್ಲಿರುವಾಗ ಅಧಿಕಾರಿಗಳು ಈ ರೀತಿಯಾಗಿ ನಡೆದುಕೊಂಡಿರುವುದು ಸರಿಯಲ್ಲ. ಇಂತಹ ಕೃತ್ಯವನ್ನು ನಾನು ಖಂಡಿಸುತ್ತೇನೆ ಎಂದು ಶಾಸಕರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.