Home ಜಿಲ್ಲೆಮಹಿಳೆಗೆ ಪರಿವರ್ತನಾ ಚಾರಿಟೇಬಲ್‌ ಟ್ರಸ್ಟನಿಂದ ಆರ್ಥಿಕ ನೆರವು.

ಮಹಿಳೆಗೆ ಪರಿವರ್ತನಾ ಚಾರಿಟೇಬಲ್‌ ಟ್ರಸ್ಟನಿಂದ ಆರ್ಥಿಕ ನೆರವು.

by Editor
0 comments

ಕುಮಟಾ : ತಾಲೂಕಿನ ಮಿರ್ಜಾನ ಖಂಡಗಾರ ಮೂಲದ ನೀತಾ ನಿಲೇಶ್‌ ಭೋಸ್ಲೆ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದು ಅವರ ಹೆಚ್ಚಿನ ಚಿಕಿತ್ಸೆಗೆ ಪರಿವರ್ತನಾ ಚಾರಿಟೇಬಲ್‌ ಟ್ರಸ್‌ ಗೋಕರ್ಣದ ವತಿಯಿಂದ ಮೆನೆಜಿಂಗ್‌ ಟ್ರಸ್ಟಿ ಗೋವಿಂದ ಗೌಡರವರು ಹದಿನೈದು ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದರು.

ಕುಮಟಾದ ಡಾ. ಮಣಕಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಕುಟುಂಬದವರು ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದು ಕ್ಯಾನ್ಸರ್‌ ಸೌಲಭ್ಯಹೊಂದಿರುವ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದನ್ನು ಮನಗಂಡು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದ ಅಸಹಾಯಕ ಪರಿಸ್ಥಿತಿಯನ್ನು ವೈದ್ಯರಾದ ಡಾ. ಪ್ರಶಾಂತ ಮಣಕಿಕರರವರು ಟ್ರಸ್ಟ್‌ ಸಂಪರ್ಕಿಸಿ ನೆರವು ನೀಡಲು ವಿನಂತಿಸಿದ್ದರು.

ಅದರಂತೆ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಬಂದು ರೋಗಿ ಪರವಾಗಿ ಅವರ ತಾಯಿ ಪ್ರೇಮಾ ನಾಯ್ಕರವರಿಗೆ ಚೆಕ್‌ ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಶ್ರೀಧರ ಗೌಡ, ವಿಕ್ಟೋರಿಯಾ ಹಾಗೂ ಆಸ್ಪತ್ರೆಯ ಶ್ರೇಯಾ ಪ್ರಶಾಂತ ಮಣಕಿಕರರವರು ಉಪಸ್ಥಿತರಿದ್ದರು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".