Home ಜಿಲ್ಲೆಸಮುದಾಯ ಭವನದ ಬೆಳ್ಳಿ ಹಬ್ಬ ಸಂಪನ್ನ

ಸಮುದಾಯ ಭವನದ ಬೆಳ್ಳಿ ಹಬ್ಬ ಸಂಪನ್ನ

by Editor
0 comments

ಕುಮಟಾ : ತಾಲೂಕಿನ ಹೆಗಡೆಯ ಚಿಟ್ಟೆಕಂಬಿಯಲ್ಲಿ ಮುಕ್ರಿ ಸಮಾಜದ ಸಮುದಾಯ ಭವನ ನಿರ್ಮಾಣವಾಗಿ 25 ವರ್ಷ ಪೂರೈಸಿದ ಸವಿನೆನಪಿಗಾಗಿ ಇದರ ಬೆಳ್ಳಿ ಹಬ್ಬದ ಕಾರ್ಯಕ್ರಮ ಶ್ರೀ ದುರ್ಗಾಂಬಾ ಗೆಳೆಯರ ಬಳಗ ಮತ್ತು ಶ್ರೀ ದುರ್ಗಾಂಬಾ ಮಹಿಳಾ ಸ್ವಸಹಾಯ ಸಂಘ ಹಾಗೂ ಊರ ನಾಗರಿಕರ ವತಿಯಿಂದ ತುಂಬಾ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಮುದಾಯಭವನದ ಸ್ಥಳ ದಾನಿಗಳಾದ ಡಾ. ರಾಮ ಶಾನಭಾಗ್ ಇವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಮುದಾಯ ಭವನದ ಸ್ಥಳ ದಾನಿಗಳಾದ ಡಾ. ರಾಮ ಶಾನಭಾಗ್ ಮತ್ತು ಅರಣ್ಯ ಇಲಾಖೆಯಲ್ಲಿ ಪದೋನ್ನತಿ ಹೊಂದಿ ಉನ್ನತ ಹುದ್ದೆಯನ್ನು ಅಲಂಕರಿಸಿದ ವಿದ್ಯಾ ಮಂಜುನಾಥ್ ಮುಕ್ರಿ ಹಾಗೂ ಸಮುದಾಯ ಭವನದ ನಿರ್ಮಾಣಕ್ಕೆ ಹೋರಾಟ ಮಾಡಿದ ಮಾಳು ಜಟ್ಟಿ ಮುಕ್ರಿ , ಮಾಸ್ತಿ ಮಾಸ್ತಿ ಮುಕ್ರಿ, ನಾರಾಯಣ ಹೊನ್ನಾ ಮುಕ್ರಿ, ಹುಲಿಯಪ್ಪ ಮಾರು ಮುಕ್ರಿ ,ನಾಗು ಮಾಸ್ತಿ ಮುಕ್ರಿ ಮತ್ತು ಊರಿನ ರಕ್ತದಾನಿ ಯುವಕರುಗಳಾದ ಶ್ರೀಕಾಂತ್ ,ಸಂಜಯ್, ವಿನಾಯಕ್, ಮಹಾದೇವ,ದೀಪಕ್ ,ಗಣೇಶ್ ಹಾಗೂ ಕೂಜಳ್ಳಿಯ ನಾಟಕದ ತಂಡದವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮನಾಥ ದೀರೂ ಶಾನಭಾಗ್ ಮತ್ತು ಮುಖ್ಯ ಅತಿಥಿಗಳಾಗಿ ಸೂರಜ್ ನಾಯ್ಕ ಸೋನಿ ,ಮಂಜುನಾಥ್ ನಾಯ್ಕ, ವಿನಾಯಕ್ ಪಟಗಾರ್ , ಸತೀಶ್ ಮಹಾಲೆ, ವಿಜಯ್ ಕುಮಾರ್ ,ಮರನಾಥ್ ಭಟ್, ವಿಘ್ನೇಶ್ ಮುಕ್ರಿ, ಎಸ್ ಎನ್ ಮುಕ್ರಿ, ಮಂಜುನಾಥ್ ಮುಕ್ರಿ, ಕನ್ನೆ ಮುಕ್ರಿ ಉಪಸ್ಥಿತರಿದ್ದರು.

ಮನರಂಜನೆ ಕಾರ್ಯಕ್ರಮ ಮತ್ತು ಕೂಜಳ್ಳಿಯ ಶ್ರೀ ಶಾಂತಿಕಾಪರಮೇಶ್ವರಿ ನಾಟ್ಯ ಸಂಘದವರಿಂದ ನಡೆದ ರತ್ನ ಮಾಂಗಲ್ಯ ಎಂಬ ಸುಂದರ ಸಾಮಾಜಿಕ ನಾಟಕ ಗಮನ ಸೆಳೆಯಿತು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".