Home ಜಿಲ್ಲೆದೃಷ್ಠಿಕೋನ ಬದಲಾದರೆ ಸಮಾಜ ಬದಲಾವಣೆ ಸಾಧ್ಯ : ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಶ್ರೀ

ದೃಷ್ಠಿಕೋನ ಬದಲಾದರೆ ಸಮಾಜ ಬದಲಾವಣೆ ಸಾಧ್ಯ : ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಶ್ರೀ

by Editor
0 comments

ಕುಮಟಾ : ನಮ್ಮ ದೃಷ್ಠಿಕೋನ ಬದಲಾದರೆ ಸಮಾಜ ಬದಲಾವಣೆ ಸಾಧ್ಯ. ಹಾಗಾಗಿ ಇಂದೇ ವಿಚಾರ, ಚಿಂತನೆ ಬದಲಾಯಿಸಿಕೊಂಡು ಒಳ್ಳೆಯ ಚಿಂತನೆ ಮಾಡಿದರೆ ಮುಂದೆ ಸಮಾಜ ಅಷ್ಟೆ ಅಲ್ಲದೇ ಕುಟುಂಬ ಕೂಡ ಪರಿವರ್ತನೆಯಾಗಲು ಸಾಧ್ಯ ಎಂದು ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ನುಡಿದರು.

ಅವರು ಪಟ್ಟಣದ ಹಳೇಹೆರವಟ್ಟಾದ ದೈವಜ್ಞ ಬ್ರಾಹ್ಮಣ ಶ್ರೀ ಲಕ್ಷ್ಮೀನಾರಾಯಣ ದೇವ ಬಗ್ಗೋಣ ಮಠದಲ್ಲಿ ಉಕ ಜಿಲ್ಲಾ ದೈವಜ್ಞ ವಾಹಿನಿ, ಮಾತೃವಾಹಿನಿ, ಕುಮಟಾದ ಶ್ರೀ ಲಕ್ಷ್ಮೀನಾರಾಯಣ ಮಠ, ದೈವಜ್ಞ ಸಮಾಜ, ಮಹಿಳಾ ಮಂಡಳಿ ಇವರ ಆಶ್ರಯದಲ್ಲಿ ನಡೆದ ದೈವಜ್ಞ ಸಮಾಜೋತ್ಸವದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಹಿರಿಯರ ಸಂಕಲ್ಪ, ಪ್ರಾರ್ಥನೆ, ವಿಚಾರಗಳಿಂದ ಸತ್ಕಾರ್ಯಗಳು ನಡೆಯುತ್ತಿದೆ. ಶಿಕ್ಷಣ, ಅಧಿಕಾರ, ಅಂತಸ್ತು ಕ್ಷಣಿಕ. ಪ್ರೀತಿ, ವಿಶ್ವಾಸ ಮುಖ್ಯ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸುವ ಜೊತೆಗೆ ಕುಟುಂಬದಲ್ಲಿ ಅನ್ಯೋನ್ಯತೆ ಬೆಳೆಸಿಕೊಳ್ಳಬೇಕು. ಅಲ್ಲದೇ ದೈವಜ್ಞ ಸಮಾಜೋತ್ಸವ ಇದು ವಾಹಿನಿಯ ಉತ್ಸವವಾಗಿದೆ. ಉತ್ಸವ ಜನರಿಗೆ ಶಕ್ತಿ ನೀಡುತ್ತಿದ್ದು, ಶ್ರೀ ಮಠದ ಸಹಯೋಗದಲ್ಲಿ ವಾಹಿನಿಯ ಉತ್ಸವದಲ್ಲಿ ಎಲ್ಲರೂ ಉಲ್ಲಾಸದಿಂದಿರಿ. ವಾಹಿನಿ ಎಂದರೆ ಹರಿಯುವ ನದಿ, ಸೇನಾ ಅರ್ಥವಿದೆ. ವಾಹಿನಿ ಇರುವಲ್ಲಿ ಸುಭಿಕ್ಷೆ, ಅಭಿವೃದ್ಧಿ ಸಾಧ್ಯ ಎಂದು ನುಡಿದರು.

ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯ ಶಿಗ್ಗಾವಿಯ ಬಿ. ಕೆ. ಭಾರತಿ ದೈವಜ್ಞ ಚಿಂತನ ಮಂಥನದಲ್ಲಿ ಮಾತನಾಡಿ, ಮಕ್ಕಳನ್ನು ಸಮಾಜದ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲು ಪಾಳಕರು ಕಳಿಸುವ ಜೊತೆಗೆ ಸಮಾಜದಲ್ಲಿ ಜೀವನ ಹೇಗೆ ಮಾಡಬೇಕು ಎಂದು ಕಲಿಸಭೆಕು. ಹೆಣ್ಣು ಮಕ್ಕಳಿಗೆ ಸಂಸ್ಕಾರ, ಪ್ರೀತಿ ನೀಡಿ ಬದುಕಲು ಕಲಿಸಿಕೊಟ್ಟರೆ ಪಾಲಕರು ವೃದ್ಯಾಶ್ರಮಕ್ಕೆ ಸೇರುವುದು ತಪ್ಪುತ್ತದೆ ಎಂದರು.

ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್ಯಕ್ಷ ರವಿ ಎಸ್. ಗಾವಂಕರ ಮಾತನಾಡಿ, ಸಮಾಜ ಎಲ್ಗೆಗೆ ಇಂತಹ ಕಾರ್ಯಕ್ರಮ ಅವಶ್ಯ. ಸಮಾಜದ ವಾಹಿನಿ ಬಹುದೊಡ್ಡ ಸಾಧನೆಗೆ ನಾಂದಿಯಾಗಿ ಸಮಾಜ ಉನ್ನತಿಗೆ ಕಾರಣವಾಗಿದೆ. ಸಮಾಜದ ಜನಗಣತಿ ಮಾಡಬೇಕು ಎಂಬ ಶ್ರೀಗಳ ಆಣತಿಯಂತೆ ಶೇ ೪೦ ರಷ್ಟು ಜನಗಣತಿ ಪೂರ್ತಿಯಾಗಿದ್ದು, ಇಡೀ ಕರ್ನಾಟಕದ ಜನಗಣತಿ ಪೂರ್ತಿಯಾದರೆ ಸಮಾಜಕ್ಕೆ ಅನೇಕ ಅನುಕೂಲವಾಗುತ್ತದೆ. ನಾವು ಒಂದಾಗಿ ಸಮಾಜಕ್ಕಾಗಿ ಹೋರಾಡಬೇಕು. ರಾಜ್ಯ ಸಂಘದಿಂದ ಎಲ್ಲ ಸಹಕಾರ ನೀಡುತ್ತೇವೆ ಎಂದರು.

ಮಾಜಿ ಶಾಸಕ ಗಂಗಾಧರ ಭಟ್ಟ ಮಾತನಾಡಿ ಸಮಾಜದ ಒಳಿತಿಗಾಗಿ ಎಲ್ಲ ಕಮಿಟಿಯ ಚಿಂತನಾ ಸಮಾಲೋಚನೆ ಮಾಡುವ ಕುರಿತು ಶ್ರೀಗಳವರ ಬಳಿ ತಿಳಿಸಿದಾಗ, ಶ್ರೀಗಳು ಒಳ್ಳೆಯ ಕೆಲಸ ಮಾಡುವಾಗ ಮುಹೂರ್ತ ನೋಡಬೇಡಿ. ಕೆಟ್ಟ ಕೆಲಸ ಮಾಡುವಾಗ ನೋಡಿ ಎಂದು ಕಿವಿ ಮಾತು ಹೇಳಿದ್ದರು. ಒಳ್ಳೆಯ ಕಾರ್ಯಕ್ಕೆ ಎಲ್ಲರ ಸಹಕಾರ ಬೇಕು. ಅಲ್ಲದೇ ಮಕ್ಕಳಿಗೆ ಬಾಲ್ಯದಲ್ಲೇ ಕೃತಜ್ಞತಾಭಾವ ಹೊಂದಲು ಕಲಿಸಿ ಎಂದರು.

ಜಿಲ್ಲಾ ದೈವಜ್ಞ ವಾಹಿನಿಯ ಅಧ್ಯಕ್ಷ ಸತ್ಯನಾರಾಯಣ ಶೇಟ್ ಮಾತನಾಡಿ, ಎಲ್ಲ ತಾಲ್ಲೂಕಾ ವಾಹಿನಿ ಜೀವ ನದಿಯಾಗಿದೆ. ಅದು ಸಮುದ್ರವಾಗಬೇಕು. ಶ್ರೀಗಳ ಮಾರ್ಗದರ್ಶದಲ್ಲಿ ಜಿಲ್ಲಾ ವಾಹಿನಿಯಾಗಲು ಸಾಧ್ಯವಾಯಿತು. ನಮ್ಮ ವಾಹಿನಿ ಇಡೀ ನಾಡಿಗೆ ಮಾದರಿಯಾಗಬೇಕು ಎಂದರು.

ದೈವಜ್ಞ ಬ್ರಾಹ್ಮಣ ಮಠದ ಉಪಾಧ್ಯಕ್ಷ ಆರ್ ಎಸ್ ರಾಯ್ಕರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಮಾತೃವಾಹಿನಿ ಅಧ್ಯಕ್ಷೆ ಶಕುಂತಲಾ ಶೇಟ್, ಜಿಲ್ಲಾ ದೈವಜ್ಞ ವಾಹಿನಿ ಸಂಚಾಲಕ ಸುರೇಶ ರಾಯ್ಕರ್, ಜಿಲ್ಲಾ ದೈವಜ್ಞ ವಾಹಿನಿ ಗೌರವಾಧ್ಯಕ್ಷ ಸುಧಾಕರ ಎನ್ ರಾಯ್ಕರ್, ಶ್ರೀ ಬಗ್ಗೋಣ ಮಠದ ಅಧ್ಯಕ್ಷ ರಾಜೇಶ ಎನ್ ಶೇಟ್, ದೈವಜ್ಞ ಸಮಾಜ ಸಂಘದ ಅಧ್ಯಕ್ಷ ಮಧುಸೂದನ್ ಜೆ ಶೇಟ್, ಕುಮಟಾ ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ನೀಲಾ ಆರ್ ಶೇಟ್ ಮಾತನಾಡಿದರು.

ಈ ಸಂದರ್ಭದಲ್ಲಿ ದೈವಜ್ಞ ಸಾಧಕ ಸಂಘದ ವಿನಾಯಕ ಶೇಟ್ ಹಾಗೂ ಜಿಲ್ಲೆಯ ವಾಹಿನಿ ಸಂಘ, ಮಹಿಳಾ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".