ಬೆಂಗಳೂರು: ಚಿನ್ನದ ಬೆಲೆಯಲ್ಲಿ ಮತ್ತೆ ಭರ್ಜರಿ ಹೆಚ್ಚಳ ಆಗಿದೆ. ಒಂದೇ ದಿನಕ್ಕೆ ಗುರುವಾರ ಸಾವಿರ ರೂಪಾಯಿ ಮೇಲ್ಪಟ್ಟು ಏರಿಕೆ ಆಗಿತ್ತು, ಇದೀಗ ಗುಡ್‌ಫ್ರೈಡೆ ಹಾಲಿಡೇ ದಿನದಲ್ಲೂ 250 ರೂ ಹೆಚ್ಚಳ ಆಗಿದೆ. ಇಂದು ಪ್ರಮುಖ ನಗರದಲ್ಲಿ ಎಷ್ಟೆಷ್ಟಿದೆ ಚಿನ್ನದ ದರ, ಇಲ್ಲಿದೆ ಮಾಹಿತಿ ನೋಡಿ.
ಇಂದಿನ ಬೆಲೆ ಎಷ್ಟಿದೆ?
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು ಗ್ರಾಂ ಒಂದಕ್ಕೆ ಬರೋಬ್ಬರಿ 25 ರೂಪಾಯಿ ಹೆಚ್ಚಳ ಆಗಿದೆ. ಇಂದಿನ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂ ಗೆ 8,945 ರೂ ಇದ್ದು, 24 ಕ್ಯಾರೆಟ್ 1 ಗ್ರಾಂ ಬೆಲೆ 27 ರೂ ಹೆಚ್ಚಳ ಆಗಿ, 1 ಗ್ರಾಂ ಬೆಲೆ 9,758 ಕ್ಕೆ ಏರಿಕೆ ಆಗಿದೆ.

10 ಗ್ರಾಂ ಬೆಲೆ ಎಷ್ಟು?
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ 250 ರೂ ಏರಿಕೆ ಆಗಿ, ಇಂದಿನ ಬೆಲೆ 89,450 ರೂ ಇದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 270 ರೂ ಹೆಚ್ಚಳ ಆಗಿ, ಇಂದಿನ ಬೆಲೆ 97,580 ರೂ ಆಗಿದೆ.
ಬೆಂಗಳೂರಿನ ಚಿನ್ನದ ಬೆಲೆ
ಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 8945 ರೂ ಇದೆ. ಬೆಳ್ಳಿಯ ಬೆಲೆ 10 ಪೈಸೆ ಇಳಿಕೆಯಾಗಿದ್ದು,ಕೆ.ಜಿ ಬೆಳ್ಳಿ ಬೆಲೆ 99,900 ರೂ ಇದೆ.