ಕುಮಟಾ : ಸಿ.ಇ.ಟಿ ಪರೀಕ್ಷೆ ಬರೆಯುವ ಹಿಂದೂ ಸಮಾಜದ ಮಕ್ಕಳಿಗೆ ಓಲೆ ತೆಗೆಸುವುದು, ಮೂಗುತಿ ತೆಗಿಸುವುದು, ಜನಿವಾರ ತೆಗೆಸುವುದನ್ನು ಹಿಂದೂ ಸಮಾಜ ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಜನಪರ ಹೋರಾಟ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ. ಜಿ. ಭಟ್ಟವರು ಸರ್ಕಾರದ ಈ ನಡೆಯನ್ನ ಉಗ್ರವಾಗಿ ಖಂಡಿಸಿದ್ದಾರೆ.
ಮೂಗುತಿ ಧರಿಸುವುದು, ಕಿವಿಯೋಲೆ ಧರಿಸುವುದು, ಸಮಸ್ತ ಹಿಂದೂ ಸಮಾಜದ ಹೆಣ್ಣು ಮಕ್ಕಳ ಸಂಪ್ರದಾಯ. ಪರೀಕ್ಷೆ ಬರೆಯುವಾಗ ಇಲ್ಲದ ಸಲ್ಲದ ನೆಪ ಹೇಳಿ ಇವುಗಳನ್ನು ತೆಗೆಸಿದ್ದು, ಹಿಂದೂ ಸಮಾಜ ಇದನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಇಡೀ ಹಿಂದೂ ಸಮಾಜ ಒಕ್ಕೋರಲಿಂದ ವಿರೋದಿಸುತ್ತದೆ. ಈ ರೀತಿ ವರ್ತನೆಯನ್ನು ತಕ್ಷಣವೇ ನಿಲ್ಲಿಸಿ ಹಿಂದೂ ಹೆಣ್ಣು ಮಕ್ಕಳ ಓಲೆ ಮೂಗುತಿ ತೆಗೆಸುವ ಕ್ರಮವನ್ನು ತಕ್ಷಣದಿಂದ ನಿಲ್ಲಿಸಬೇಕು.

ಇನ್ನೊಂದು ಕಡೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಬುರ್ಖಾ ಧರಿಸಲು ಅವಕಾಶ ಕೊಟ್ಟಿದ್ದು ನಮ್ಮ ಸಮಾಜವನ್ನು ನೇರವಾಗಿ ಚಾಲೆಂಜ್ ಮಾಡ್ತಾ ಇರುವಂತಿದೆ. ಜೊತೆಗೆ ಜನಿವಾರ ಧರಿಸುವುದು ಕೂಡ ಬ್ರಾಹ್ಮಣರ ಸಂಪ್ರದಾಯ. ಹಾಗಾಗಿ ಈಗಾಗಲೇ ಎರಡು ವಿದ್ಯಾರ್ಥಿಗಳನ್ನು ಜನಿವಾರ ಧರಿಸಿರುವುದರಿಂದ ಪರೀಕ್ಷೆ ಬರೆದಂತೆ ತಡೆಯಲಾಗಿದ್ದು, ಆ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು. ಸೂಕ್ತ ತನಿಖೆ ನಡೆಸಿ ಅವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇದರ ವಿರುದ್ದ ಅವಿರತವಾದ ಹೋರಾಟ ನಡೆಸಲಾಗುವುದು ಎಂದು ಎಂ. ಜಿ ಭಟ್ಟ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.