ಬೆಂಗಳೂರು: ಬೆಂಗಳೂರು ಮೂಲದ ಕಾನೂನು ತಂತ್ರಜ್ಞಾನ ಕಂಪನಿ ಲೀಗಲ್‍ಡೆಸ್ಕ್.ಕಾಂ, ಬೆಂಗಳೂರು ಒನ್
ಸಹಯೋಗದಲ್ಲಿ ಹೊಸ ಆನ್‍ಲೈನ್ ಬಾಡಿಗೆ ಒಪ್ಪಂದ ಸೇವೆಯನ್ನು ಪ್ರಾರಂಭಿಸಿದೆ. ನಗರದ ನಿವಾಸಿಗಳು ಈಗ ಬಾಡಿಗೆ
ಕರಾರು ಪತ್ರಗಳು ಮತ್ತು ಇತರೆ ದಾಖಲೆಗಳನ್ನು ನಗರದಾದ್ಯಂತ ಬೆಂಗಳೂರು ಒನ್ ಕೇಂದ್ರಗಳಲ್ಲಿ
ಸಿದ್ಧಪಡಿಸಬಹುದು.

ಗ್ರಾಹಕರು ತಮಗೆ ಹತ್ತಿರದ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಬಹುದು, ಒಪ್ಪಂದದ ಕರಡಿಗೆ ಅಗತ್ಯವಾದ
ವಿವರಗಳನ್ನು ನೀಡಿ, ಹಣ ಪಾವತಿಸಿ ದಾಖಲೆ ವಿಲೇವಾರಿಯಾಗಬೇಕಾದ ವಿಳಾಸ ನೀಡಬೇಕು. ಲೀಗಲ್‍ಡೆಸ್ಕ್
ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಒಪ್ಪಂದ ಸೃಷ್ಟಿಸಲು, ಮುದ್ರಾಂಕ ಶುಲ್ಕ ಪಾವತಿಸಲು ಮತ್ತು ಗ್ರಾಹಕರ ಮನೆಬಾಗಿಲಿಗೆ
ಒಪ್ಪಂದದ ಪ್ರತಿಯನ್ನು ಪೂರೈಸಲು ನೆರವಾಗುತ್ತದೆ.

ಈ ಸೇವೆಗೆ ಮಲ್ಲೇಶ್ವರಂನ ಬೆಂಗಳೂರು ಒನ್ ಕೇಂದ್ರದಲ್ಲಿ ಖ್ಯಾತ
ನಟ ದಿಗಂತ್ ಮಂಚಾಲೆ ಹಾಗೂ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಚಾಲನೆ ನೀಡಿದರು.
ಐಸ್ಪಿರಿಟ್‍ನ ಕಾರ್ತಿಕ್ ಕೆ. ಎಸ್. ಮತ್ತು ಕರ್ನಾಟಕ ಸರ್ಕಾರದ ಡೈರೆಕ್ಟೊರೇಟ್ ಆಫ್ ಎಲೆಕ್ಟ್ರಾನಿಕ್ ಡೆಲಿವರಿ ಆಫ್
ಸಿಟಿಜûನ್ ಸರ್ವೀಸಸ್ ಹೇಮಂತ್ ಕುಮಾರ್ (ಇ.ಡಿ.ಸಿ.ಎಸ್.) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಲೀಗಲ್‍ಟೆಕ್ ಸ್ಟಾರ್ಟಪ್ ಶ್ರೀಸಾಮಾನ್ಯರಿಗೆ ಕಾನೂನು ದಾಖಲೀಕರಣ ಸುಲಭವಾಗಿ ಲಭ್ಯವಾಗುವಂತೆ ಮಾಡುವ
ಬಯಕೆ ಹೊಂದಿದೆ ಮತ್ತು ಈ ಹೊಸ ಸೇವೆಯ ಪರಿಚಯವು ಈ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ.
ಲೀಗಲ್‍ಡೆಸ್ಕ್ ಸಂಸ್ಥಾಪಕ ಕೃಪೇಶ್ ಭಟ್, `ನಮ್ಮ ರೆಂಟಲ್ ಅಗ್ರಿಮೆಂಟ್ ಸೇವೆಯು ಬೆಂಗಳೂರು ಒನ್ ಕೇಂದ್ರಗಳಲ್ಲಿ
ದೊರೆಯಲಿರುವ ಇತರೆ ಹಲವಾರು ದಾಖಲೆ ಸೇವೆಗಳಲ್ಲಿ ಮೊದಲನೆಯದಾಗಿದೆ. ನಾವು ಇತರೆ ಆನ್‍ಲೈನ್ ದಾಖಲೆಯ
ಸೇವೆಗಳಾದ ಆಧಾರ್-ಆಧಾರಿತ ಇ-ಸೈನ್, ಉಯಿಲು, ಪವರ್ ಆಫ್ ಅಟಾರ್ನಿ, ಹೆಸರು ಬದಲಾವಣೆ, ಸಾಮಾನ್ಯ
ಒಪ್ಪಂದಗಳು ಇತ್ಯಾದಿಗಳನ್ನು ಒದಗಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಈ ಸೇವೆಗಳನ್ನು ಇತರೆ ನಗರಗಳ ನಾಗರಿಕ
ಸೇವಾ ಕೇಂದ್ರಗಳಿಗೆ ವಿಸ್ತರಿಸಲಿದ್ದೇವೆ” ಎಂದರು.

RELATED ARTICLES  ಎಸ್.ಬಿ.ಐನಲ್ಲಿ ಪರೀಕ್ಷಣಾಧಿಕಾರಿ ಹುದ್ದೆಗಳಿಗೆ ನೇಮಕಾತಿ.

IMG 20180906 WA0008

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿಡ ಇ.ಡಿ.ಸಿ.ಎಸ್.ನ ಹೇಮಂತ್ ಕುಮಾರ್, ಕರ್ನಾಟಕದಲ್ಲಿರುವ ಎಲ್ಲಾ
750 ಬ್ಯಾಂಗಲೋರ್‍ಒನ್ ಕೌಂಟರ್‍ಗಳಲ್ಲೂ ರೆಂಟಲ್ ಅಗ್ರಿಮೆಂಟ್ ಸೇವೆ ಲಭ್ಯವಿದ್ದು, ಈ ಸೇವೆ ರಾಜ್ಯದ
ನಾಗರಿಕರಿಗೆ ಬಹಳ ಉಪಯುಕ್ತವಾಗಲಿದೆ ಎಂದರು.

ಈ ಹೊಸ ಸೇವೆ ಕುರಿತು ಡಾ.ಸಿ.ಎನ್.ಅಶ್ವತ್ಥನಾರಾಯಣ್, “ಬೆಂಗಳೂರು ಒನ್ ಕೇಂದ್ರಗಳ ಮೂಲಕ ಈ ಸೇವೆ
ಲಭ್ಯವಾಗಿರುವಂತೆ ಮಾಡಿರುವುದರಿಂದ ಸಮುದಾಯದ ಎಲ್ಲಾ ವರ್ಗಗಳ ನಾಗರಿಕರಿಗೆ ಸೂಕ್ತ ರೀತಿಯಲ್ಲಿ
ಸಿದ್ಧಪಡಿಸಿದ ಬಾಡಿಗೆ ಪತ್ರಗಳು ಮತ್ತು ಕಾನೂನು ದಾಖಲೆಗಳು ಕೈಗೆಟುಕುವ ದರಗಳಲ್ಲಿ ಲಭ್ಯವಾಗುವಂತಾಗಲಿ” ಎಂದರು.

ನಟ ದಿಗಂತ್ ಮಂಚಾಲೆ, “ಲೀಗಲ್ ಡೆಸ್ಕ್ ಇದೊಂದು ಅದ್ಭುತ ಉಪಕ್ರಮವಾಗಿದೆ. ಭಾರತದಾದ್ಯಂತ ಇತರೆ
ಪಟ್ಟಣಗಳು ಮತ್ತು ನಗರಗಳಲ್ಲೂ ಇಂತಹ ಸೇವೆಗಳನ್ನು ಪರಿಚಯಿಸುವುದನ್ನು ಎದುರು ನೋಡುತ್ತಿದ್ದೇನೆ” ಎಂದರು.

ಏನಿದು ಬೆಂಗಳೂರು ಒನ್ ಸೇವೆ.

ಬೆಂಗಳೂರು ಒನ್ ನಾಗರಿಕ ಸೇವಾ ಕೇಂದ್ರವಾಗಿದ್ದು ಸರ್ಕಾರ, ಉದ್ಯಮಗಳು ಮತ್ತು ಗ್ರಾಹಕರ ನಡುವೆ ಸೇವೆಗಳು
ಮತ್ತು ಮಾಹಿತಿಯನ್ನು ಪೂರೈಸುತ್ತದೆ. ಅಲ್ಲಿ ನೀಡಲಾಗುವ ಸೇವೆಗಳಲ್ಲಿ ಆಸ್ತಿ ತೆರಿಗೆ, ಯುಟಿಲಿಟಿ ಬಿಲ್‍ಗಳು, ಟ್ರಾಫಿಕ್
ದಂಡಗಳು, ಸಾರಿಗೆ ಬುಕಿಂಗ್‍ಗಳು, ಸರ್ಕಾರದ ಉದ್ಯೋಗ ನೇಮಕಾತಿ, ಕೌಶಲ್ಯಾಭಿವೃದ್ಧಿ, ಮತದಾರರ ಗುರುತಿನ
ಚೀಟಿ ನೀಡಿಕೆ ಇತ್ಯಾದಿ ಒಳಗೊಂಡಿವೆ. ಬಾಡಿಗೆ ಕರಾರು ಪತ್ರ ಸೇವೆ ಬೆಂಗಳೂರು ಒನ್‍ನಲ್ಲಿ ನೀಡಲಾಗುತ್ತಿರುವ ಹೊಸ
ಸೇವೆಯಾಗಿದೆ.

RELATED ARTICLES  ಈ ನಾಲ್ಕು ತಾಲೂಕುಗಳಿಗೆ ನಾಳೆಯೂ ರಜೆ

ಲೀಗಲ್‍ಡೆಸ್ಕ್.ಕಾಂ(LeaglDesk.com)

ಇದೊಂದು ತಂತ್ರಜ್ಞಾನ ಪ್ಲಾಟ್‍ಫಾರಂ ಆಗಿದ್ದು ದಾಖಲೆ ಪ್ರಕ್ರಿಯೆಗಳನ್ನು ಡಿಜಿಟಲೀಕರಣಕ್ಕೆ
ನೆರವಾಗುತ್ತದೆ. ಈ ಸ್ಟಾರ್ಟಪ್ ಡಿಐವೈ ಪ್ಲಾಟ್‍ಫಾರಂ ಆಗಿದ್ದು ಗ್ರಾಹಕರು ಮತ್ತು ಕಾಪೊರೇಟ್‍ಗಳಿಗೆ ಆನ್‍ಲೈನ್‍ನಲ್ಲಿ
100ಕ್ಕೂ ಹೆಚ್ಚು ಕಾನೂನು ದಾಖಲೆಗಳನ್ನು ಸಿದ್ಧಪಡಿಸಲು ಮತ್ತು ಅವುಗಳನ್ನು ಆಧಾರ್ ಬಳಸಿ ಡಿಜಿಟಲಿ ಸಹಿ ಮಾಡಲು
ನೆರವಾಗುತ್ತದೆ. ಈ ಲೀಗಲ್-ಟೆಕ್ ಕಂಪನಿಯ ಮುಖ್ಯ ಕಛೇರಿ ಬೆಂಗಳೂರಿನಲ್ಲಿದ್ದು ಚೆನ್ನೈ, ಕೊಲ್ಕತಾ, ಮುಂಬೈ ಮತ್ತು
ದೆಹಲಿಗಳಲ್ಲಿ ಕಛೇರಿಗಳನ್ನು ಹೊಂದಿದೆ.

ದಾಖಲೆಗಳ ಡಿಜಿಟೈಸ್ ಮಾಡುವ ಈ ಸ್ಟಾರ್ಟಪ್‍ನ ಪ್ರಯತ್ನಗಳನ್ನು ಬ್ಲೂಮ್‍ಬರ್ಗ್ ಟೆಲಿವಿಷನ್, ಗೂಗಲ್
ಲಾಂಚ್‍ಪ್ಯಾಡ್, ಫೋಬ್ರ್ಸ್ ಏಷ್ಯಾ ಮತ್ತು ಇಂಡಿಯಾ ಟುಡೇ ಮಾನ್ಯತೆ ಮಾಡಿವೆ. ಹೆಚ್ಚು ಆರ್ಡರ್ ಪಡೆಯುವ
ದಾಖಲೆಗಳು ಸಾಲದ ದಾಖಲೆಗಳು, ಬಾಡಿಗೆ ಕರಾರು ಪತ್ರಗಳು, ಉಯಿಲು, ಗಿಫ್ಟ್ ಡೀಡ್, ಹೆಸರು ಬದಲಾವಣೆ
ದಾಖಲೆಗಳು ಇತ್ಯಾದಿಗಳಾಗಿವೆ.

ವಿವರಕ್ಕಾಗಿ ಈ ವಿಡಿಯೋ ನೋಡಿ.
https://youtu.be/jw4N0FR7Kfc