ಬೆಂಗಳೂರು: ರಾಜ್ಯದಲ್ಲಿ ಜಿ ಎಸ್ ಟಿ ಕಾಯ್ದೆ ಜಾರಿಗೆ ಬಂದ ಬಳಿಕ ಮೊದಲನೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಇದರ ಬಗ್ಗೆ ಇಂದು ಮಾಹಿತಿ ನೀಡಿರುವ ಬೆಂಗಳೂರು ಸೌತ್ ಜೋನ್ ಅಡಿಷಿನಲ್ ಕಮೀಷನರ್ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ನಿತೀಶ್ ಕೆ.ಪಾಟೀಲ್ ನೀಡಿದ್ದಾರೆ.
ಅಲ್ಲದೇ, ಅವರು ಜಿಎಸ್ ಟಿ ಕಾಯ್ದೆ ಜಾರಿಗೆಬಂದ ನಂತರ ಕರ್ನಾಟಕದಲ್ಲಿ ಇದೇ ಮೊದಲು ಆರೋಪಿ ಬಂಧನವಾಗಿದ್ದು, ಎಆರ್ಎಸ್ ಎಂಟರ್ಪ್ರೈಸಸ್ ಮಾಲೀಕ ಇಸ್ಮಾಯಿಲ್ ಬಂಧಿತ ಆರೋಪಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅವರು ಬಂಧಿತ ಆರೋಪಿ ಇಸ್ಮಾಯಿಲ್ 45 ಕೋಟಿ ಮೌಲ್ಯದ ನಕಲಿಬಿಲ್ ಗಳನ್ನು ವರ್ತಕರಿಗೆ ನೀಡಿದ್ದ ಎನ್ನಲಾಗಿದ್ದು, ಈ ಮೂಲಕ ಒಟ್ಟೂ ಸುಮಾರು 26 ಕೋಟಿ ಆದಾಯ ವಂಚನೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಈಗ ಸದ್ಯಕ್ಕೆ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.