Home ಜಿಲ್ಲೆವಿಧಾತ್ರಿ ಸಹಯೋಗದ ಸರಸ್ವತಿ ಪಿ.ಯು ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ.

ವಿಧಾತ್ರಿ ಸಹಯೋಗದ ಸರಸ್ವತಿ ಪಿ.ಯು ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ.

ರಾಜ್ಯಮಟ್ಟದ ರ್ಯಾಂಕ್ - 151 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

by News Desk
0 comments

ಕುಮಟಾ : ವಿಧಾತ್ರಿ ಅಕಾಡೆಮಿಯ ಸಹಯೋಗದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ಪಿ.ಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಗುರುವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶದಲ್ಲಿ ಅತ್ಯಮೋಘ ಸಾಧನೆ ತೋರುವುದರ ಜೊತೆಗೆ, ಈ ಹಿಂದಿನಂತೆಯೇ ಈ ಬಾರಿಯೂ ರಾಜ್ಯಮಟ್ಟದ ಸ್ಥಾನ ಪಡೆದುಕೊಂಡಿದ್ದು ಒಟ್ಟೂ 151 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ಶೇ. 98 ಕ್ಕಿಂತ ಹೆಚ್ಚಿಗೆ ಅಂಕ ಪಡೆದವರು ಒಟ್ಟೂ 5 ವಿದ್ಯಾರ್ಥಿಗಳು ಇದ್ದು, ಶೇ. 95 ಕ್ಕಿಂತ ಹೆಚ್ಚು 32 ವಿದ್ಯಾರ್ಥಿಗಳು, ಶೇ. 90 ಕ್ಕಿಂತ ಅಧಿಕ ಅಂಕ ಪಡೆದವರು 96 ವಿದ್ಯಾರ್ಥಿಗಳು ಹಾಗೂ 151 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದ ಸಂಸ್ಥೆ ಎಂಬ ಹೆಗ್ಗಳಿಕೆಯನ್ನೂ ‘ಸರಸ್ವತಿ ಪಿ.ಯು ಕಾಲೇಜು’ ಪಡೆದುಕೊಂಡಿದೆ.

ದಿಶಾ ಮಂಜುನಾಥ ಶೆಟ್ಟಿ ಒಟ್ಟೂ 600 ಅಂಕಗಳಿಗೆ 592 ಅಂಕ (98.66 ಶೇ.) ಪಡೆಯುವ ಮೂಲಕ ಕಾಲೇಜಿಗೆ ಮೊದಲ ಸ್ಥಾನ ಪಡೆದು ರಾಜ್ಯಮಟ್ಟದ 7 ನೇ ರ್ಯಾಂಕ್ ಅನ್ನು ತನ್ನದಾಗಿಸಿಕೊಂಡಿರುತ್ತಾಳೆ. ಈಕೆಯು ಭೌತಶಾಸ್ತ್ರ -99, ರಸಾಯನ ಶಾಸ್ತ್ರ – 99, ಗಣಿತ 99, ಜೀವ ಶಾಸ್ತ್ರ – 99, ಇಂಗ್ಲೀಷ್ 96, ಸಂಸ್ಕೃತ 100 ಅಂಕಗಳನ್ನು ಪಡೆದಿರುತ್ತಾಳೆ.

ಕನ್ನಿಕಾ ಆರ್. ಭಟ್ಟ 600 ಕ್ಕೆ 591 ಅಂಕ (98.5 ಶೇ.) ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದ 8 ನೇ ಸ್ಥಾನ ಪಡೆದಿರುತ್ತಾಳೆ. ಭೌತಶಾಸ್ತ್ರ -100, ರಸಾಯನ ಶಾಸ್ತ್ರ – 97, ಗಣಿತ 100, ಗಣಕ ಶಾಸ್ತ್ರ – 100, ಇಂಗ್ಲೀಷ್ 94, ಸಂಸ್ಕೃತ 100 ಅಂಕಗಳನ್ನು ಪಡೆದಿರುತ್ತಾಳೆ.

ವೈಷ್ಣವಿ ವಿಷ್ಣು ಹೆಗಡೆ 600 ಕ್ಕೆ 591 ಅಂಕ (98.5 ಶೇ.) ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ 8 ನೇ ಸ್ಥಾನ ಪಡೆದಿರುತ್ತಾಳೆ. ಭೌತಶಾಸ್ತ್ರ -98, ರಸಾಯನ ಶಾಸ್ತ್ರ – 99, ಗಣಿತ 100, ಗಣಕ ಶಾಸ್ತ್ರ – 99, ಇಂಗ್ಲೀಷ್ 95, ಸಂಸ್ಕೃತ 100 ಅಂಕಗಳನ್ನು ಪಡೆದಿರುತ್ತಾಳೆ.

ದೀಪಿಕಾ ಭಟ್ಟ ಹಾಗೂ ತ್ರಿಷಾ ನಾಯ್ಕ 600 ಕ್ಕೆ 588 (98.0 ಶೇ.) ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ವಿಧಾತ್ರಿ ಅಕಾಡೆಮಿ ಸಹಭಾಗಿತ್ವದಲ್ಲಿ ಸರಸ್ವತಿ ಪಿ.ಯು ಕಾಲೇಜು ಕಳೆದ 6 ವರ್ಷಗಳಿಂದ ಅತ್ಯಮೋಘ ಸಾಧನೆ ಮಾಡುತ್ತಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ಆಡಳಿತ ಮಂಡಳಿಯವರು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಚಾರ್ಯ ಜಿ.ಎಸ್. ಹೆಗಡೆ ಕಣ್ಣಿ ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".