ಭಟ್ಕಳ: 2026-27ನೇ ಸಾಲಿನ ಅಖಿಲ ಭಾರತ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಫುಟ್ಬಾಲ್ ಟೂರ್ನಮೆಂಟ್‌ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ತಂಡವನ್ನು ಪ್ರತಿನಿಧಿಸಲು ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (AITM) ಕಾಲೇಜಿನ ಪ್ರಥಮ ವರ್ಷದ CSE (AI & ML) ವಿದ್ಯಾರ್ಥಿ ಮೊಹಮ್ಮದ್ ಅಮಾನ್ ಕೋಲಾ ಆಯ್ಕೆಯಾಗಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ.
ಅಮಾನ್ ಕೋಲಾ ಅವರ ಈ ಸಾಧನೆಗೆ ಕಾಲೇಜು ವಲಯದಲ್ಲಿ ಹರ್ಷ ವ್ಯಕ್ತವಾಗಿದ್ದು, ಅವರ ಸಮರ್ಪಣೆ, ಶಿಸ್ತು ಮತ್ತು ಆಟದ ಮೇಲಿನ ಅಪಾರ ಆಸಕ್ತಿ ಈ ಮಟ್ಟದ ಸಾಧನೆಗೆ ದಾರಿಯಾಗಿದೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ AITM ಮ್ಯಾನೇಜ್‌ಮೆಂಟ್, ಪ್ರಾಂಶುಪಾಲ ಡಾ. ಕೆ. ಫಜ್ಲೂರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಕರೂರಿ, ಪ್ರಥಮ ವರ್ಷದ ಮುಖ್ಯಸ್ಥ ಡಾ. ವಸೀಮ್ ಅಹ್ಮದ್ ಹಲ್ವೆಗರ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಭಾಸ್ಕರ್ ಬೆಳೆಗದ್ದೆ ಸೇರಿದಂತೆ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಮಾನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿ, ಮುಂದಿನ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಲೆಂದು ಶುಭ ಹಾರೈಸಿದ್ದಾರೆ.
ಅಮಾನ್ ಕೋಲಾ ಅವರ ಈ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ.