ಕುಮಟಾ : ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯ 8ನೇ ವರ್ಗದ ವಿದ್ಯಾರ್ಥಿ, ಹೊನ್ನಾವರದ ಕೊಂಡದಕುಳಿ ಬೇರಂಕಿಯ ಕಲಾಧರ ಹಾಗೂ ಮುಕ್ತಾ ದಂಪತಿಗಳ ಸುಪುತ್ರ ಕೆ.ಬಿ.ಅನೀಶ್, ಮಲೇಶಿಯಾದ ಕೋಲಾಲಂಪುರದಲ್ಲಿ ನಡೆದ ವರ್ಲ್ಡ್ ಯೋಗಾ ಎಂಡ್ ಸ್ಪೋರ್ಟ್ಸ್ ಎಜ್ಯುಕೇಶನ್ ಕೌನ್ಸಿಲ್ ಇಂಡೋ-ಮಲೇಶಿಯಾ ಯೂಥ್ ಚಾಂಪಿಯನ್‌ಶಿಪ್‌ನ, ಆರ್ಟಿಸ್ಟಿಕ್ ಹಾಗೂ ಟ್ರೆಡಿಶನ್ ಈ ಎರಡೂ ವಿಭಾಗಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತಕ್ಕೆ ಚಿನ್ನದ ಪದಕವನ್ನು ಗಳಿಸಿಕೊಟ್ಟಿರುತ್ತಾನೆ.
ಕೇವಲ ನಮ್ಮ ರಾಜ್ಯ ಮಾತ್ರವಲ್ಲದೆ, ಇಡೀ ದೇಶದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಈತನ ಸಾಧನೆಯಿಂದಾಗಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿದ್ದ ಕೊಂಕಣದ ಸಿವಿಎಸ್‌ಕೆ ಪ್ರೌಢಶಾಲೆಯು, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆಯ ದಾಪುಗಾಲನ್ನಿಟ್ಟಂತಾಗಿದೆ.

ವಿದ್ಯಾರ್ಥಿಯ ಈ ಅಭೂತಪೂರ್ವ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯ ಶಿಕ್ಷಕರು, ಸಮಸ್ತ ಬೋಧಕ-ಬೋಧಕೇತರ ಸಿಬ್ಬಂದಿ, ಪಾಲಕರು, ಉಪನಿರ್ದೇಶಕರು, ಕ್ಷೇತ್ರಶಿಕ್ಷಣಾಧಿಕಾರಿಗಳು, ಹಾಗೂ ಕಚೇರಿ ಸಿಬ್ಬಂದಿಗಳು ಅತೀವ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.