Home ಅಪರಾಧಬೆಳಗಿನ ಜಾವ ದನ ಕದ್ದು ಪರಾರಿಯಾದವರು ಅರೆಸ್ಟ್..!

ಬೆಳಗಿನ ಜಾವ ದನ ಕದ್ದು ಪರಾರಿಯಾದವರು ಅರೆಸ್ಟ್..!

ಕುಮಟಾದ ಬಗ್ಗೋಣದಲ್ಲಿ ಗೋ ಕಳ್ಳತನ ಪ್ರಕರಣ : ನಾಲ್ಕೇ ದಿನದಲ್ಲಿ ಓರ್ವ ಅರೆಸ್ಟ್

by Editor
0 comments

 

ಕುಮಟಾ : ಪಟ್ಟಣದ ಬಗ್ಗೋಣದ ರೈಸ್ ಮಿಲ್ ಬಳಿ ರಸ್ತೆಯಲ್ಲಿ ಮಲಗಿದ್ದ ಗೋವನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳಲ್ಲಿ ಓರ್ವನನ್ನು ಬಂಧಿಸುವಲ್ಲಿ ಕುಮಟಾ ಪೋಲೀಸರು ಯಶಸ್ವಿಯಾಗಿದ್ದಾರೆ. ಬೆಳಗಿನ ಜಾವದ ಸಮಯದಲ್ಲಿ ಬಿಳಿಯ ಬಣ್ಣದ ಕಾರಿನಲ್ಲಿ ಬಂದ ಅಪರಿಚಿತರು ರಸ್ತೆಯ ಸಮೀಪ ಮಲಗಿದ್ದ ಗೋವನ್ನು ಇಬ್ಬರು ವ್ಯಕ್ತಿಗಳು ಕಾರಿನ ಡಿಕ್ಕಿಯಲ್ಲಿ ತುಂಬಿಕೊಂಡು ಸಾಗಿದ ದೃಶ್ಯ ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಗೋವಿಗೆ ತಿನಿಸು ನೀಡಿ ಬಳಿಕ ಹಗ್ಗದ ಸಹಾಯದಿಂದ ಬಲವಂತವಾಗಿ ಎಳೆದುಕೊಂಡು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದರು. ಈ ಕುರಿತು ಕುಮಟಾ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡು 60 ಕ್ಕೂ ಅಧಿಕ ಸಿ.ಸಿ.ಟಿ.ವಿ. ಗಳನ್ನು ಪರಿಶೀಲಿಸಿ, ತಾಂತ್ರಿಕ ಸಾಕ್ಷಾಧಾರಗಳ ಜಾಡನ್ನು ಹಿಡಿದು, ಪ್ರಕರಣ ದಾಖಲಾದ 4 ದಿನಗಳೊಳಗಾಗಿ ಆರೋಪಿತನಾದ ಮಂಗಳೂರು ಬೈಕಂಪಾಡಿ ನಿವಾಸಿ ಮಹಮ್ಮದ ಶಚೀರ ಸಮೀರ ಗುರ್ಕಾ ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಜತೆಯಲ್ಲಿ ವಶಕ್ಕೆ ಪಡೆದು, ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸುಝುಕಿ ಎರ್ಟಿಗಾ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಇನ್ನಿಬ್ಬರು ಆರೋಪಿತರಾದ ಮಹಮ್ಮದ ಅಜೀಮ ಸಾಬ್ ಹಾಗೂ ಜುಲ್ಫಾನ್ ಮಾಲಿಕ್ ಸಾಬ್ ಎನ್ನುವವರು ತಲೆಮರೆಸಿಕೊಂಡಿದ್ದು ಇವರ ಪತ್ತೆ ಕಾರ್ಯ ಮುಂದುವರೆದಿದೆ. ಈ ಪ್ರಕರಣದಲ್ಲಿ ಆರೋಪಿ ಪತ್ತೆಗೆ ಶ್ರಮಿಸಿದ ಯೋಗೇಶ ಕೆ.ಎಂ. ಪೊಲೀಸ್ ನಿರೀಕ್ಷಕರು ಕುಮಟಾ ಪೊಲೀಸ್ ಠಾಣೆ ಹಾಗೂ ಪಿ.ಎಸ್.ಐ.ರವರಾದ ಖಾದರ ಬಾಷಾ ರವಿ ಗುಡ್ಡಿ, ವಿಠಲ ಮಲವಡಕರ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ ದಯಾನಂದ ನಾಯ್ಕ ಗುರು ನಾಯಕ, ಕಿರಣ ನಾಯ್ಕ ಹಾಗೂ ಉಡುಪಿ ಜಿಲ್ಲೆಯ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ದೀಷನ್ ಎಂ. ಎನ್. ಮಾನ್ಯ ಪೊಲೀಸ್ ಅಧೀಕ್ಷಕರು ಉ.ಕ. ಕಾರವಾರ ಹಾಗೂ ಕೃಷ್ಣಮೂರ್ತಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಉ.ಕ. ಕಾರವಾರ ಹಾಗೂ ರಾನು ಗುಪ್ತ ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರು, ಭಟ್ಕಳ ಉಪ-ವಿಭಾಗ ರವರು ಕುಮಟಾ ಪೊಲೀಸರನ್ನು ಅಭಿನಂದಿಸಿರುತ್ತಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಹ ಮೆಚ್ಚುಗೆ ವ್ಯಕ್ತವಾಗಿರುತ್ತದೆ.

You may also like

Leave a Comment

Latest news