ಭಟ್ಕಳ: ಮುಠ್ಠಳ್ಳಿ-ಮೂಢಭಟ್ಕಳದ ಉತ್ಸಾಹಿ ಯುವಕರೆಲ್ಲ ಸೇರಿ 1994ರಂದು ಸಂಘಟಿಸಿ ಆರಂಭಗೊಂಡ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯೂ ಈ ಬಾರಿ 25 ವರ್ಷ ತುಂಬಿದ್ದು ಈ ಹಿನ್ನೆಲೆ ಸೆಪ್ಟೆಂಬರ 13 ರಿಂದ 17ರ ವರೆಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮುಠ್ಠಳ್ಳಿ-ಮೂಢಭಟ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉತ್ಸವ ನಡೆಸಲಿದ್ದೇವೆ ಎಂದು ಸಮಿತಿಯ ಕಾರ್ಯದರ್ಶಿ ವೆಂಕಟೇಶ ನಾಯ್ಕ ಹೇಳಿದರು.

ಅವರು ಬುಧವಾರದಂದು ಇಲ್ಲಿನ ಖಾಸಗಿ ಹೋಟೆಲನಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.
‘ಗ್ರಾಮದಲ್ಲಿ ಗಣೇಶ ಉತ್ಸವವನ್ನು ಮಾಡುವ ಮೂಲಕ ಗ್ರಾಮಸ್ಥರಲ್ಲಿ ಸಾಮರಸ್ಯ ಬೆಸೆಯಬೇಕು, ಸಾಂಘಿಕ ಶಕ್ತಿ ವೃದ್ಧಿಯಾಗಬೇಕು, ಊರಿಗೆ ಒಳಿತಾಗಬೇಕು ಎಂದು ಸದುದ್ದೇಶದಿಂದ ಮುಠ್ಠಳ್ಳಿ ಯುವಕ ಮಂಡಳದ ನೇತೃತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚಿಸಿ ಅಂದಿನಿಂದ ಇಂದಿನವರೆಗೆ ವಿಜೃಂಭಣೆಯಿಂದ ಶ್ರದ್ದಾ ಭಕ್ತಿಯಿಂದ ಉತ್ಸವವನ್ನು ನಡೆಸಿಕೊಂಡು ಬಂದಿದ್ದೇವೆ. ಈ ಹಿನ್ನೆಲೆ ಈ ಬಾರಿ 25ನೇ ವರ್ಷ ರಜತ ಮಹೋತ್ಸವದ ಪ್ರಯುಕ್ತ ಮೂರು ದಿನದ ಉತ್ಸವವನ್ನು ಐದು ದಿನಗಳ ಕಾಲ ಗ್ರಾಮಸ್ಥರೆಲ್ಲ ಸೇರಿ ನಡೆಸಲು ತೀರ್ಮಾನಿಸಿ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಎರಡು ಗ್ರಾಮದ ಯುವಕರು ಜಿಲ್ಲೆ,ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ಕಬಡ್ಡಿಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿರುವುದು ಊರಿಗೆ ಹಮ್ಮೆ ಸಂಗತಿಯಾಗಿದೆ ಎಂದ ಅವರು ಈ ಬಾರಿ ರಜತ ಮಹೋತ್ಸವದ ಸವಿನೆನಪಿಗಾಗಿ ವಿಘ್ನೇಶ್ವರನಿಗೆ ಚಿನ್ನದ ಕಿರೀಟವನ್ನು ಅರ್ಪಿಸಲಿದ್ದೇವೆ. ಸೆಪ್ಟೆಂಬರ್ 13ರಂದು ಗಣೇಶ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಿ ಶಾಸ್ತ್ರೋಕ್ತವಾಗಿ ಪೂಜೆ ಪುನಸ್ಕಾರ ಸಲ್ಲಿಸಿ ನಾಲ್ಕು ದಿನವೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿ ಸೆಪ್ಟೆಂಬರ್ 17ರಂದು ಸಂಜೆ ಗಣೇಶ ಮೂರ್ತಿಯನ್ನು ವಿರ್ಸಜಿಸಲಿದ್ದೇವೆ ಎಂದು ಹೇಳಿದರು.
ಉತ್ಸವದಲ್ಲಿ ಹಳೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 4 ಮಂದಿ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಗುವದು. 15 ವರ್ಷದಿಂದ ಉತ್ಸವದಲ್ಲಿ ಅನ್ನ ಸಂತರ್ಪಣೆ ಸೇವೆ ನೀಡಿದ 11 ಮಂದಿ ದಾನಿಗಳಿಗೆ ಹಾಗೂ 9ಮಂದಿ ಮುಖ್ಯ ಅತಿಥಿಗಳಿಗೆ ಸನ್ಮಾನಿಸಲಾಗುವುದು ಎಂದು ಸಮಿತಿ ಕಾರ್ಯದರ್ಶಿ ವೆಂಕಟೇಶ ನಾಯ್ಕ ತಿಳಿಸಿದರು.
ಈ ಸಂಧರ್ಭದಲ್ಲಿ ಸಮಿತಿ ಪದಾದಿಕಾರಿಗಳು ಹಾಗೂ ಸದಸ್ಯರು ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

RELATED ARTICLES  ಹಿಲ್ಲೂರು ಯಕ್ಷಮಿತ್ರ ಬಳಗದಿಂದ ವಿದ್ವಾನ್ ಸಮ್ಮಾನ ಕಾರ್ಯಕ್ರಮ

ಈ ಸಂಧರ್ಭದಲ್ಲಿ ಮುಠ್ಠಳ್ಳಿ-ಮೂಢಭಟ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶನಿಯಾರ ನಾಯ್ಕ, ಉಪಾಧ್ಯಕ್ಷ ವೆಂಕಟೇಶ ಮಾಸ್ತಪ್ಪ ನಾಯ್ಕ, ಸದಸ್ಯ ಶ್ರೀಧರ ನಾಯ್ಕ, ರಾಘು ನಾಯ್ಕ, ಶೇಷಗಿರಿ ನಾಯ್ಕ, ಗಣೇಶ ನಾಯ್ಕ, ಗೋವಿಂದ ನಾಯ್ಕ, ರಾಮ ನಾಯ್ಕ, ಚಂದ್ರು ನಾಯ್ಕ, ನಾಗೇಶ ನಾಯ್ಕ, ಯುವ ಶಕ್ತಿಸಂಘದ ಅಧ್ಯಕ್ಷ ಹನುಮಂತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಹೊಸ್ತೋಟಾ ಭಾಗವತ್ ಚಿಂತಾಜನಕ : ಅರವಿಂದ ಕರ್ಕಿಕೋಡಿ ಭೇಟಿ