ಕುಮಟಾ – ಬೈಕ್ ಗೆ ನಾಯಿ ಅಡ್ಡಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದು ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಾಡದ ಮಾದರಿರಸ್ತೆ ಎಂಬಲ್ಲಿ ನಡೆದಿದೆ.

ಮರಿಯಂಭೆ ಶೇಖ್ ಮೃತಪಟ್ಟ ದುರ್ದೈವಿಯಾಗಿದ್ದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಈತನನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಗ್ರಾಮದ ನೂರಾರು ಜನರ ಸಮ್ಮುಖದಲ್ಲಿ ನಡೆದರೂ ಜೀವ ವಿಮೆಯ ಆಸೆಗಾಗಿ ಬಸ್ ಅಪಘಾತದಲ್ಲಿ ಈಕೆ ಮೃತಪಟ್ಟಿದ್ದಾಳೆ ಎಂದು ಮೃತಳ ಸಂಬಂಧಿಕರು ದೂರು ನೀಡಿದ್ದು ಗೊಂದಲಕ್ಕೆ ಕಾರಣವಾಗಿದೆ.

RELATED ARTICLES  ಉತ್ತರ ಕನ್ನಡದಲ್ಲಿ ಮುಂದುವರೆದ ಕೊರೋನಾ ಆರ್ಭಟ..!

ಬೈಕ್ ಗೆ ಸಿಲುಕಿ ಮೃತ ಪಟ್ಟಳು ಎಂಬುದಾಗಿಯೇ ವರದಿಯಾಗಿತ್ತಾದರೂ ಈಗ ಹಂತ ಹಂತವಾಗಿ ಮಾಹಿತಿ ಲಭ್ಯವಾಗುತ್ತಿದೆ ಎನ್ನಲಾಗಿದೆ.

“ಒಂದೊಮ್ಮೆ ಬಸ್ಸ್ ಅಪಘಾತದಲ್ಲಿ ಈಕೆ ಮೃತಪಟ್ಟಿದ್ದರೆ ಮೃತಳ ಶರೀರ ಸಂಪೂರ್ಣ ಚಿದ್ರವಾಗುತ್ತಿರಲಿಲ್ಲವೇ..?” ಎಂದು ಪ್ರತ್ಯಕ್ಷ ದರ್ಶಿಗಳು ಹಾಗೂ ಬಸ್ಸ್ ಪ್ರಯಾಣಿಕರು ಈಗ ಪ್ರಶ್ನೆಮಾಡುತಿದ್ದಾರೆ. ಆದರೆ ಅಲ್ಲಿಯೇ ಇದ್ದ ಹಲವರು ಬಸ್ ನಿಂದಾಗಿಯೇ ಅಪಘಾತವಾಗಿದೆ ಎಂದು ನಿಖರವಾಗಿ ಹೇಳಿರುವುದು ಹಲವಾರು ಗೊಂದಲಕ್ಕೆ ಕಾರಣವಾಗಿದೆ.

RELATED ARTICLES  ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಮೂವರನ್ನು ಬಂಧಿಸಿದ ಕುಮಟಾ ಪೊಲೀಸರು.

“ಗ್ರಾಮಸ್ಥರೆಲ್ಲ ಸೇರಿ ಮೃತಳ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರಕ್ಕಾಗಿ ಒತ್ತಾಯಿಸಬಹುದೇ ಹೊರತು ಜೀವ ವಿಮೆಯ ಹಣಕ್ಕಾಗಿ ಬಸ್ಸ್ ಚಾಲಕನಿಗೆ ಅನ್ಯಾಯವಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ” ಎಂಬ ಮಾತು ಗ್ರಾಮಸ್ಥರಿಂದ ಕೇಳಿಬಂತೆಂಬ ಮಾತು ವರದಿಯಾಗಿದೆ. ಅದರ ಜೊತೆಗೆ ಬಸ್ ಅಪಘಾತವೇ ಆಗಿದೆ ಎಂದು ವಾದಿಸುವವರೂ ಇದ್ದಾರೆ. ಸ್ಥಳೀಯವಾಗಿ ಸಿಕ್ಕ ಮಾಹಿತಿ ಆಧರಿಸಿ ಈ ವರದಿ ನೀಡಲಾಗಿದೆ.

ಈ ಬಗ್ಗೆ ಪ್ರಕರಣದ ತನಿಖೆ ನಂತರವೇ ಪೂರ್ಣ ಸತ್ಯಾಂಶ ಹೊರ ಬರಬೇಕಾಗಿದೆ.