ಗೋಕರ್ಣ : ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಸದ್ಯ ಶ್ರೀರಾಮಚಂದ್ರಾಪುರಮಠವೇ ಮುಂದುವರಿಸಲಿದೆ. ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ತೀರ್ಮಾನ ಆಗುವವರೆಗೂ ದೇವಾಲಯದ ಆಡಳಿತವನ್ನು ಶ್ರೀಮಠವೇ ನಿರ್ವಹಿಸಲಿದೆ ಎಂದು ಕೋರ್ಟ್ ಇಂದು ತಿಳಿಸಿದೆ.
ಮೊದಲು ನಡೆದಿದ್ದೇನು?
ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಸರ್ಕಾರಕ್ಕೆ ವಹಿಸುವ ಕುರಿತು ರಾಜ್ಯ ಉಚ್ಚ ನ್ಯಾಯಾಲಯ ಕಳೆದ ಅಕ್ಟೋಬರ್ 10 ರಂದು ತೀರ್ಪು ನೀಡಿತ್ತು ಹಾಗೂ ಅದೇ ದಿನ ಮಧ್ಯಂತರ ಆದೇಶವನ್ನು ನೀಡಿ, ತೀರ್ಪಿನಲ್ಲಿ ಉಲ್ಲೇಖಿಸಿರುವ ಡಿಸಿ ನೇತೃತ್ವದ ಸಮಿತಿ ಸೆಪ್ಟೆಂಬರ್ 10 ನಂತರ ಕಾರ್ಯ ನಿರ್ವಹಿಸಲಿದೆ, ಸೆಪ್ಟೆಂಬರ್ 10 ವರೆಗೆ ಮಠವೇ ಆಡಳಿತವನ್ನು ಸಡೆಸಲಿದೆ ಎಂದು ಮಧ್ಯಂತರ ಆದೇಶದಲ್ಲಿ ನೀಡಿತ್ತು.
ಶ್ರೀ ಮಠದ ಆಡಳಿತ ಮುಂದುವರಿಕೆಗೆ ಆದೇಶ
ಈ ಪ್ರಕರಣದ ಕುರಿತಾಗಿ ಸುಪ್ರೀಂ ಕೋರ್ಟಿನ್ ಇಂದು ವಿಚಾರಣೆ ನಡೆದಿದ್ದು, ಶ್ರೀಮಠದ ಅರ್ಜಿಯನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್ ರಾಜ್ಯ ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಮುಂದುವರಿಸುವಂತೆ ಸೂಚಿಸಿದೆ. ಅಂದರೆ ಸೆಪ್ಟೆಂಬರ್ 10 ರ ನಂತರ ಡಿಸಿ ನೇತೃತ್ವದ ಸಮಿತಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ತಡೆನೀಡಿದ್ದು, ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ತೀರ್ಮಾನ ಆಗುವವರೆಗೂ ದೇವಾಲಯದ ಆಡಳಿತವನ್ನು ಶ್ರೀಮಠವೇ ನಿರ್ವಹಿಸಲಿದೆ ಎಂದು ಕೋರ್ಟ್ ತಿಳಿಸಿದೆ. ಅಲ್ಲದೆ ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಮುಂದೂಡಿದೆ.