ಹೊನ್ನಾವರ: ತಾಲ್ಲೂಕಿನ ಮಂಕಿಯಲ್ಲಿ ಯುವತಿಯೊಬ್ಬಳು ರೈಲ್ವೆ ಹಳಿಯ ಮೇಲೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಮಂಕಿಯ ವಡಿಗೇರಿಯ ಯುವತಿ ಮಾಲಿನಿ ಗೌಡ (23) ಆತ್ಮಹತ್ಯೆ ಮಾಡಿಕೊಂಡವಳು. ಮಂಕಿ– ಮುರ್ಡೇಶ್ವರದ ನಡುವಿನ ರೈಲ್ವೆ ಹಳಿಯ ಮೇಲೆ ಈಕೆ‌ ಆತ್ಮಹತ್ಯೆಗೆ ಶರಣಾಗಿದ್ದಾಳೆ.

RELATED ARTICLES  ಯಕ್ಷರಂಗದಲ್ಲಿ ಸ್ತ್ರೀ ವೇಶದಲ್ಲಿ ಮಿಂಚಿದ ಮೂರೂರು ವಿಷ್ಣು ಭಟ್ಟ ಇನ್ನಿಲ್ಲ.

ಸಂಜೆಯ ಸುಮಾರು 4 ಗಂಟೆಯ ವೇಳೆಗೆ ಎರ್ನಾಕುಲಂ– ಪುಣೆ ಪೂರ್ಣಾ ಎಕ್ಸ್‌ಪ್ರೆಸ್‌ ರೈಲಿಗೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಳು ಎಂಬ ಬಗ್ಗೆ ಪೂರ್ಣ ಮಾಹಿತಿ ಸಿಕ್ಕಿಲ್ಲವಾದರೂ ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

RELATED ARTICLES  ಕುಮಟಾಕ್ಕೆ ಬರಲಿದೆ ಲೈಫ್ ಲೈನ್ ಎಕ್ಸಪ್ರೆಸ್ : ಯೋಜನೆಯ ಉಪಯೋಗ ಪಡೆಯುವಂತೆ ವಿನಂತಿಸಿದ ಸಚಿವರು.