ಕುಮಟಾ : ನಾರಾಯಣ ಎಚ್ ನಾಯಕರವರು ಹಿರೇಗುತ್ತಿ ಊರಿನವರಾಗಿದ್ದು ಅತ್ಯಂತ ಕ್ರೀಯಾಶೀಲ ಶಿಕ್ಷಕರಾಗಿದ್ದು ಉತ್ತಮ ಸಂಘಟನಾ ಸಾಮಥ್ರ್ಯ ಹೊಂದಿದ ಸಹೃದಯವಂತರು. ಅವರು ಉತ್ತಮ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತ ಜಿಲ್ಲೆಯ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮಿಸುತ್ತಿರುವುದರಿಂದ ಶಿಕ್ಷಕರ ಸಮೂಹಕ್ಕೆ ತುಂಬ ಪ್ರೀತಿ ಪಾತ್ರದವರಾಗಿದ್ದಾರೆ. ಆದ್ದರಿಂದಲೇ ಅನೇಕ ವರ್ಷಗಳಿಂದ ಶಿಕ್ಷಕರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುಮಾರು 10 ವರ್ಷಗಳ ಕಾಲ ಯಲ್ಲಾಪುರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾರೆ ಅಲ್ಲದೇ ಹೊಸದಾಗಿ ರಚನೆಗೊಂಡ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಪ್ರಥಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಕೆನರಾ ಡಿಸ್ಟ್ರಿಕ್ಟ್ ಟೀಚರ್ಸ್ ಸೊಸೈಟಿ ಅಂಕೋಲಾ ಉ.ಕ ಇದರ ಅಧ್ಯಕ್ಷರಾಗಿ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಆಯ್ಕೆಯು ಅವರ ಸಂಘಟನಾ ಚಾತುರ್ಯಕ್ಕೆ ಸಂದ ಜಯ. ಇವರ ಆಯ್ಕೆಗೆ ಜಿಲ್ಲೆಯ ಶಿಕ್ಷಕರ ಸಂಘದವರು. ಶ್ರೀಬ್ರಹ್ಮಜಟಕ ಯುವಕ ಸಂಘ ಹಿರೇಗುತ್ತಿ ಅಧ್ಯಕ್ಷರು ರಾಜು ಗಾಂವಕರ ಹಾಗೂ ಪದಾಧಿಕಾರಿಗಳು ಗ್ರಾಮ ಪಂಚಾಯತ್ ಆಧ್ಯಕ್ಷರಾದ ಸಣ್ಣಪ್ಪ ನಾಯಕ, ಗುರುರಾಜ ನಾಯಕ ಕೃಷ್ಣಮೂರ್ತಿ ನಾಯಕ ಕಮಲಾಕ್ಷ ಗಾಂವಕರ, ರಾಜು ಸಣ್ಣಪ್ಪ ನಾರ್ಣುಮನೆ, ಮನೋಹರ ನಾಯಕ, ಪಪ್ಪು ನಾಯಕ, ಪ್ರಶಾಂತ ನಾಯಕ, ರಾಮದಾಸ್.ಎಸ್.ನಾಯಕ, ರಾಮು ಕೆಂಚನ್, ಚಂದ್ರಕಾಂತ ಗಾಂವಕರ, ಚಂದ್ರಹಾಸ ನಾಯಕ, ಉಮೇಶ ಗಾಂವಕರ, ಹರೀಶ. ಬಿ.ನಾಯಕ, ಎನ್.ರಾಮು.ಹಿರೇಗುತ್ತಿ ಸಂಘದ ಸರ್ವ ಸದಸ್ಯರು ಊರಿನ ಹಿರಿಯ ನಾಗರಿಕರು ಇವರಿಗೆ ಇನ್ನು ಹೆಚ್ಚಿನ ಸ್ಥಾನಮಾನಗಳು ಲಭಿಸಲಿ ಎಂದು ಅಭಿನಂದಿಸಿ ಶುಭ ಕೋರಿದ್ದಾರೆ.
ವರದಿ:ಎನ್.ರಾಮು.ಹಿರೇಗುತ್ತಿ