ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2018-19ನೇ ಸಾಲಿನ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರು ಅರ್ಜಿ ಹಾಕಬಹುದಾಗಿದೆ. ಪುಸ್ತಕಗಳ ಸಂಖ್ಯೆಗನುಗುಣವಾಗಿ ಪ್ರತಿ ವಿಷಯಕ್ಕೆ ಗರಿಷ್ಠ 2 ಪ್ರಶಸ್ತಿಗಳನ್ನು ನೀಡಲಾಗುವುದು. ಆಯ್ಕೆಯಾದ ಲೇಖಕರಿಗೆ ರೂ.25 ಸಾವಿರ ಹಾಗೂ ಪ್ರಶಸ್ತಿಪತ್ರವನ್ನು ನೀಡಿ ಸನ್ಮಾನಿಸಲಾಗುವುದು.

RELATED ARTICLES  ನ.15 ಮತ್ತು ನ.30ರಂದು ಬಂದೂಕು ಪರವಾನಗೆ ನವೀಕರಣ ಆಂದೋಲನ: ಡಿಸಿ ಎಸ್.ಎಸ್.ನಕುಲ್

ಜನವರಿ 2017ರಿಂದ ಡಿಸೆಂಬರ್ 2018ರೊಳಗೆ ಪ್ರಕಟಗೊಂಡನ ಪುಸ್ತಕಗಳನ್ನು ಪ್ರಶಸ್ತಿಗೆ ಅರ್ಹವಾಗಿವೆ. ಲೇಖಕರು ನಿಗದಿತ ಅರ್ಜಿ ನಮೂನೆಗಳನ್ನು ಪುಸ್ತಕದ ನಾಲ್ಕು ಪ್ರತಿಗಳೊಂದಿಗೆ ಜನವರಿ 5, 2019ರೊಳಗೆ ಸದಸ್ಯ ಕಾರ್ಯದರ್ಶಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಭವನ, 24/2, 21ನೇ ಮುಖ್ಯರಸ್ತೆ, ಬಿ.ಎಸ್.ಎನ್.ಎಲ್. ಕಚೇರಿ ಹತ್ತಿರ, ಬನಶಂಕರಿ 2ನೇ ಹಂತ, ಬೆಂಗಳೂರು-560070 ಇಲ್ಲಿಗೆ ಸಲ್ಲಿಸಬಹುದಾಗಿದೆ.

RELATED ARTICLES  ಜು. 23 ಕ್ಕೆ ಗಂಧರ್ವ ಕಲಾಕೇಂದ್ರದ ವಾರ್ಷಿಕೋತ್ಸವ

ಅರ್ಜಿ ನಮೂನೆಗಳು ಹಾಗೂ ಇತರೆ ವಿವರಗಳಿಗೆ ಅಕಾಡೆಮಿಯ ವೆಬ್ಸೈಟ್ www.kstacademy.in ಇಲ್ಲಿ ವೀಕ್ಷಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 080-26711160 ಇಲ್ಲಿ ಸಂಪರ್ಕಿಸಬಹುದಾಗಿದೆ.