ಶಿರಸಿ: ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುಣಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ರಾಜಕೀಯದ ಕೇಂದ್ರ ಬಿಂದು ಎಂದೇ ಗುರುತಿಸಿಕೊಂಡಿರುವ ಶಿರಸಿಯಲ್ಲಿ ಒಮ್ಮಿಂದೊಮ್ಮೆಲೆ ಬಾರೀ ಬದಲಾವಣೆಯ ಗಾಳಿ ಬೀಸಿದೆ. ಭಾರತೀಯ ಜನತಾ ಪಾರ್ಟಿಗೆ ಒಲಿದಿರುವ ಶಿರಸಿ ನಗರ ಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿಯಲ್ಲಿ ಬದಲಾವಣೆಯಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಹಾಗೂ ಇದು ಒಂದು ಪಕ್ಷವನ್ನು/ವ್ಯಕ್ತಿಯನ್ನು ಹಣಿಯುವ ತಂತ್ರವೇ ಎಂಬ ಪ್ರಶ್ನೆಗಳೂ ಮೂಡಿವೆ.

RELATED ARTICLES  ಲೈಫ್ ಲೈನ್ ಸೇವೆಗೆ ಉತ್ತಮ ಪ್ರತಿಕ್ರಿಯೆ

ಈ ಹಿಂದೆ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ‘ಅ’ ವರ್ಗ ಬಂದಿದ್ದು, ಬಿಜೆಪಿ ನಗರ ಘಟಕಾಧ್ಯಕ್ಷ ಹಾಗು ಅನುಭವಿ, ಹಿರಿಯ ನಗರ ಸಭಾ ಸದಸ್ಯರಾಗಿದ್ದ ಗಣಪತಿ ನಾಯ್ಕ ಅವರ ಹೆಸರು ಬಹುತೇಕ ಖಚಿತಗೊಂಡಿತ್ತು. ಆದರೆ ಈಗಿನ ಬದಲಾದ ಸರಕಾರದ ಸೂಚನೆಯಂತೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಯ ಮಹಿಳಾ ಸ್ಥಾನಕ್ಕೆ ಒಲಿದಿದೆ.

ಅದಕ್ಕೆ ಸಂಬಂಧಿಸಿದಂತೆ 13 ನೇ ವಾರ್ಡಿನಿಂದ ನಗರ ಸಭೆಗೆ ಆಯ್ಕೆಗೊಂಡಿರುವ ನಾಗರತ್ನ ಜೋಗಳೆಕರ ಅವರ ಹೆಸರು ಈಗ ಕೇಳಿ ಬರುತ್ತಿದೆ. ಆದರೆ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಬಂದಿಲ್ಲ. ಈ ಕುರಿತಾಗಿ ಸಾಮಾಜಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಪಕ್ಷದ ಹಾಗು ಗೆದ್ದ ಅಭ್ಯರ್ಥಿಗಳ ಅನಿಸಿಕೆ ಹಾಗು ಮುಂದಿನ ನಡೆಯನ್ನು ಗಮನಿಸಬೇಕಿದೆ.

RELATED ARTICLES  ಲಯನ್ಸ್ ಕ್ಲಬ್ ಕುಮಟಾದಿಂದ ಅರ್ಥಪೂರ್ಣ ಕಾರ್ಯಕ್ರಮ.

ಒಂಮ್ಮಿಂದೊಮ್ಮೆಲೇ ಈ ಬದಲಾವಣೆಗೆ ಕಾರಣೌಎಣೂ ಏನು ಎಂಬುದು ಮಾತ್ರವೇ ಈಗ ಉಳಿದಿರುವ ಪ್ರಶ್ನೆಯಾಗಿದೆ.