ಹೊನ್ನಾವರ: ಜಿಲ್ಲಾಡಳಿತ ಉತ್ತರ ಕನ್ನಡ,ಜಿಲ್ಲಾ ಪಂಚಾಯತ ಉತ್ತರ ಕನ್ನಡ ,ತಾಲೂಕು ಪಂಚಾಯತ್ ಹೊನ್ನಾವರ,ಜನಶಿಕ್ಷಣ ಸಂಸ್ಥಾನ ಉತ್ತರ ಕನ್ನಡ ಇವರ ಸಹಯೋಗದಲ್ಲಿ ಇಂದು ಶನಿವಾರ ಅಂತರಾಷ್ಟ್ರೀಯ ಸಾಕ್ಷರ ದಿನಾಚರಣೆ ನಡೆಯಿತು. ಮಾರಥೋಮ ಹೈಸ್ಕೂಲ್ ಹೊನ್ನಾವರದಲ್ಲಿ ನಡೆದ ಜಿಲ್ಲಾ ಮಟ್ಟದ ಅದ್ದೂರಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರ ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ತಂಡದವರಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
IMG 20180908 WA0007
ಅನೇಕ ಭಾವಗೀತೆಗಳು, ದೇಶ ಭಕ್ತಿಗೀತೆ ಜಾನಪದ ಗೀತೆಗಳ ಜೊತೆ ಮುಂಡಳ್ಳಿ ಅವರ ಸ್ವರಚಿತ ಗೀತೆಗಳು ಮತ್ತು ಇವರು ವಿಶೇಷ ವಾಗಿ ಹಾಡಿದ ಸಾಕ್ಷರ ಗೀತೆಗಳು ಎಲ್ಲರ ಮನತಣಿಸಿತು. ವೇದಿಕೆಯಲ್ಲಿದ್ದ ಶಾಸಕ ದಿನಕರ ಶೆಟ್ಟಿಯವರು ಮುಂಡಳ್ಳಿಯವರ ಹಾಡುಗಳನ್ನು ಮೆಚ್ಚಿಕೊಂಡರು.ಮತ್ತು ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂಬ ಪ್ರಶಂಸನೀಯ ಮಾತುಗಳನ್ನಾಡಿದರು.

RELATED ARTICLES  ಚಂದ್ರಯಾನ - ೩ ಕಣ್ತುಂಬಿಕೊಂಡ ಮಕ್ಕಳು : ಸರಸ್ವತಿ ವಿದ್ಯಾಕೇಂದ್ರದಲ್ಲಿ ಲೈವ್ ವೀಕ್ಷಣೆ : ನಾವೂ ವಿಜ್ಞಾನಿಗಳಾಗುತ್ತೇವೆಂದ ಮಕ್ಕಳು.

ಹರಿಶ್ ದಾರೇಶ್ವರ ತಬಲ ಮತ್ತು ವಿನೋದ ಗೌಡ ಹಾರ್ಮೋನಿಯಂ ಸಾಥ್ ನೀಡಿದರು.