ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಘಟಕದ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 20

ಹುದ್ದೆಗಳ ವಿವರ

ಶೀಘ್ರಲಿಪಿಗಾರರ ಹುದ್ದೆಗಳು

ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿಉತ್ತೀರ್ಣರಾಗಿರಬೇಕು.

RELATED ARTICLES  ಚುನಾವಣೆಗೆ ಮುಹೂರ್ತ ಫಿಕ್ಸ್.

ವಯೋಮಿತಿ : ಕನಿಷ್ಠ 18 ವರ್ಷ ನಿಗದಿಮಾಡಲಾಗಿದ್ದು, ಗರಿಷ್ಠ ವಯಸನ್ನು ಸಾಮಾನ್ಯ ವರ್ಗದವರಿಗೆ 35 ವರ್ಷ, ಇತರ ಹಿಂದುಳಿದ 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷ, ಪ.ಜಾ, ಪ.ಪಂ, ಪ್ರವರ್ಗ – 1 ರ ವರ್ಗಕ್ಕೆ 40 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಸರ್ಕಾರಿ ಸೇವೆಯಲ್ಲಿ ಇರುವವರಿಗೆ, ವಿಧವೆಯರಿಗೆ, ಮಾಜಿಸೈನಿಕರಿಗೆ, ಅಂಗವಿಕಲರಿಗೆ ನಿಯಮಾನುಸಾರ ಸಡಿಲಿಕೆ ಮಾಡಲಾಗಿದೆ.
ಶುಲ್ಕ : ಸಾಮಾನ್ಯ, 2ಎ, 2ಬಿ, 3ಎ, 3ಬಿ ವರ್ಗದವರಿಗೆ 200 ರೂ, ಪ.ಜಾ, ಪ.ಪಂ, ಪ್ರವರ್ಗ – 1 ಮತ್ತು ಅಂಗವಿಕಲರಿಗೆ 100 ರೂ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ : 25-09-2018

RELATED ARTICLES  ಇಸ್ರೋದಲ್ಲಿ ಜೂನಿಯರ್ ಪರ್ಸ್‍ನಲ್ ಅಸಿಸ್ಟೆಂಟ್ ಮತ್ತು ಶೀಘ್ರಲಿಫಿಕಾರ ಹುದ್ದೆಗಳಿಗೆ ನೇಮಕಾತಿ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.districts.ecourts.gov.in ಗೆ ಭೇಟಿ ನೀಡಿ.