ಹಾಸನ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿಯನ್ನು ಮೈಸೂರು ಯುವರಾಜ ಯದುವೀರ್‌ ಅವರು ತಳ್ಳಿ ಹಾಕಿದ್ದು ಸದ್ಯ ರಾಜಕೀಯದ ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ.
ಹಾಸನದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಶನಿವಾರ ಆಯೋಜನೆ ಮಾಡಿದ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ದಿನಾಚರಣೆಯಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
ರಾಜಪರಂಪರೆಯಿಂದಾಗಿ ಹಿಂದಿನಿಂದಲೂ ಜನರ ನಂಟು ಇದೆ. ಜನರೊಂದಿಗೆ ಉತ್ತಮ ಸಂಬಂಧ ಮುಂದುವರಿಸಿಕೊಂಡು ಹೋಗುವುದು ನನ್ನ ಜವಾಬ್ದಾರಿ ಎಂದರು.

RELATED ARTICLES  ಕಳ್ಳತನಕ್ಕೆ ಇಳಿದವರು ಮಹಿಳೆಗೆ ಬೆದರಿಸಿ ಹಣ ಕಿತ್ತರು ನೋಡಿ ಈ ವೀಡಿಯೋ

ಮಂಡ್ಯದಿಂದ ಸ್ಪರ್ಧಿಸುವುದು ಬರೀ ಉಹಾಪೋಹ,ಅಂಥಹ ಪ್ರಸ್ತಾವನೆ ನನ್ನ ಮುಂದಿಲ್ಲ. ಸಮಾಜಸೇವೆ ಮುಂದುವರಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ.