ಕುಮಟಾ: ಹಿರಿಯ ಕವಿ ಡಾ.ಬಿ.ಎ.ಸನದಿಯವರ ಮಕ್ಕಳ ಕವಿತಾ ಸಂಕಲನ ‘ಧಾರವಾಡ ಪೇಡೆ’ ಬಿಡುಗಡೆ ಸಮಾರಂಭ ಮತ್ತು ಮಕ್ಕಳ ಕವಿಗೋಷ್ಠಿಯನ್ನು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಪಿ.ಆರ್.ನಾಯಕ ಸಭಾಭವನದಲ್ಲಿ ಸಂಭ್ರಮದಿಂದ ನಡೆಸಲಾಯಿತು.

ಮಕ್ಕಳು, ಸನದಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದು, ಅಮುಪ ಪ್ರಕಾಶನ ಧಾರವಾಡದಿಂದ ಪುಸ್ತಕ ಕೃತಿ ಪಡೆಯುವುದರ ಜತೆಗೆ ಧಾರವಾಡ ಪೇಡೆಯನ್ನೂ ಸವಿಯುವ ಸುಯೋಗ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿ ಅಭಿಮಾನಿ ಸಮುದಾಯದವರಿಗೆ ಲಭಿಸಿತು. ಹಿರಿಯ ಸಾಹಿತಿಗಳಾದ ಪ್ರೊ.ಮೋಹನ ಹಬ್ಬು ಅವರು ಧಾರವಾಡ ಪೇಡೆ ಕೃತಿ ಲೋಕಾರ್ಪಣೆಗೊಳಿಸಿ ಮಕ್ಕಳಿಗಾಗಿ ಕವಿತೆ ಸತತ ಬರೆಯುತ್ತಿರುವ ಸನದಿಯ ಮಗುಮನಸ್ಸನ್ನು ಕೊಂಡಾಡಿದರು. ಮಕ್ಕಳು ಓದಬೇಕು, ಬರೆಯಬೇಕು, ಬೆಳೆಯಬೇಕು ಎಂದು ಆಶಿಸಿದರಲ್ಲದೇ ತಾವೇ ಸ್ವತಃ ಸನದಿ ಕುರಿತು ಬರೆದ ಕವಿತೆ ವಾಚಿಸಿ ಗಮನಸೆಳೆದರು.

ವಿದ್ಯಾರ್ಥಿ ಕವಿಗಳಾದ ರಕ್ಷಿತಾ ಪಟಗಾರ, ವಿಶ್ವಾಸ ಪೈ, ಸುಬ್ರಹ್ಮಣ್ಯ ಗುನಗಾ, ಹರ್ಷಿತಾ ನಾಯ್ಕ, ಮುಕ್ತಾ ಭಟ್ಟ, ದರ್ಶನ್ ನಾಯ್ಕ ಸ್ವರಚಿತ ಕವಿತೆಗಳನ್ನು ವಾಚಿಸಿ ನೆರೆದ ಸಮೂಹದಲ್ಲಿ ಸೈ ಎನಿಸಿಕೊಂಡು ಹಿರಿಯರಿಂದ ಪ್ರಶಂಸೆಗೆ ಪಾತ್ರರಾದರು. ಕವಿ ಬೀರಣ್ಣ ನಾಯಕ ಕವಿಗೋಷ್ಠಿಗೆ ಸ್ವರಚಿತ ಕವನ ವಾಚಿಸುವ ಮೂಲಕ ಚಾಲನೆ ನೀಡಿದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ ಸನದಿ, ಪಠ್ಯಪೂರಕ ಸಾಹಿತ್ಯ ಕೃಷಿ ವಿದ್ಯಾರ್ಥಿ ದೆಸೆಯಲ್ಲಿಯೇ ಬೆಳೆದು ಬಂದರೆ, ಬದುಕಿನ ಆನಂದ ತಂತಾನೆ ಲಭಿಸಬಲ್ಲದೆಂದು ಅಭಿಪ್ರಾಯಪಟ್ಟರು.

RELATED ARTICLES  ಜಿಲ್ಲೆಯ 11 ಕಡೆಗಳಲ್ಲಿ ಇಂದಿರಾ ಕ್ಯಾಂಟಿನ್! ನಡೆದಿದೆ ಯೋಜನೆ.

ಪಠ್ಯ ಕೇವಲ ಒಂದು ಸ್ಯಾಂಪಲ್, ಅದರಾಚೆ ಕಲಿಯುವುದೇ ದೊಡ್ಡದಿದೆ ಎಂದರು. ಶಾಲೆಯ ಶೈಕ್ಷಣಿಕ ಸಾಧನೆಯ ಸಂಗಡ ಪಠ್ಯೇತರ ಸಾಧನೆಗಳಿಗೆ ಸ್ಪಂದಿಸುವ ಶಿಕ್ಷಕವರ್ಗದವರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ಅಮುಪ ಪ್ರಕಾಶನದ ಪರವಾಗಿ ಪ್ರಕಾಶಕಿ ಪರವೀನ ಎ. ದರ್ಗಾ ಮತ್ತು ಸಾಹಿತಿ ಎ.ಎ.ದರ್ಗಾಅವರು ಸನದಿ, ಹಬ್ಬು ಮತ್ತು ಗಜು ಅವರನ್ನು ವಿಶೇಷವಾಗಿ ಸನ್ಮಾನಿಸಿದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ಲಕ್ಷ್ಮಣ ಅಂಬಿಗ ಅವರನ್ನು ವಿದ್ಯಾಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಎನ್.ಆರ್.ಗಜು ಸಾಹಿತ್ಯ ಸಮ್ಮೇಳನಕ್ಕೆ ಸಾಟಿಯಾದಂತಹ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಒದಗಿಸಿಕೊಟ್ಟ ಸಂತಸ ತನ್ನದೆಂದು ಅಭಿಪ್ರಾಯಪಟ್ಟರು.

RELATED ARTICLES  ಭಟ್ಕಳದಲ್ಲಿ ಯೋಗ ದಿನಕ್ಕೆ ಸಿದ್ಧತೆ

ಸಾಹಿತ್ಯಾಭಿಮಾನಿಗಳಾದ ಜಯದೇವ ಬಳಗಂಡಿ, ಸುರೇಶ ಭಟ್ಟ, ಸುರೇಶ ಬೈಲೂರು, ಹಿರಿಯ ಚಿಂತಕ ಶೇಷಗಿರಿ ಶಾನಭಾಗ, ಸಾಹಿತಿ ಶಾಂತರಸ ಅವರ ಅಳಿಯ ಕವಿ ರಾಜಶೇಖರ ಜಂಗಮಶೆಟ್ಟಿ, ಧಾರವಾಡದ ಗಾಯಕ ಶಂಕರ ಪುರೋಹಿತ, ಅಗಸೂರಿನ ಪಿಯೂ ಕಾಲೇಜಿನ ಪ್ರಾಚಾರ್ಯ ಐ.ಬಿ.ಪೂಜಾರ್ ವೇದಿಕೆಯಲ್ಲಿ ಯಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಿಕ್ಷಕಿ ನಾಗರತ್ನಾ ಸಂಗಡಿಗರು ಪ್ರಾರ್ಥಿಸಿದರು. ಬಿ.ಎ.ಸನದಿ ಸಾಹಿತ್ಯ ಸಂಘದ ಸಂಚಾಲಕ ಸುರೇಶ ಪೈ ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕ ಕಿರಣ ಪ್ರಭು ನಿರೂಪಿಸಿದರು. ಶಿಕ್ಷಕ ವಿ.ಎನ್.ಭಟ್ಟ ವಂದಿಸಿದರು.