ಕುಮಟಾ : ತಾಲೂಕಿನ ಕೊಂಕಣ ಎಜ್ಯುಕೇಸನ್ ಟ್ರಸ್ಟನ ರಂಗಾದಾಸ ಶಾನಭಾಗ ಹೆಗಡೆಕರ ಬಾಲಮಂದಿರದಲ್ಲಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸುವ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು. ನರ್ಸರಿ ವಿದ್ಯಾರ್ಥಿಗಳು ಶ್ರೀಕೃಷ್ಣನ ವೇಷ ಭಾರತಮಾತೆಯ ಕುರಿತಾದ ನೃತ್ಯರೂಪಕ,ಓಬವ್ವನ ವೇಷ,ಭಕ್ತಗೀತೆ ಹಾಡಿದರೆ ಎಲ.ಕೆ.ಜಿ ವರ್ಗದವರು ರಾಧೆ ನೃತ್ಯ,ಹಾಡು, ಕಥೆ,ನೃತ್ಯ ತರಕಾರಿ ಮಾರುವ ವೇಷ,ಅನೇಕ ರೀತಿಯ ವೇಷಭೂಷಣಗಳಿಂದ ರಂಜಿಸಿದರು.
ಯು.ಕೆ.ಜಿ.ವಿದ್ಯಾರ್ಥಿಗಳು ನೀರಿನ ಪ್ರಾಮುಖ್ಯತೆ ತಿಳಿಸುವ ರೂಪಕ,ಕಿತ್ತೂರು ಚೆನ್ನಮ್ಮ, ಕಣಿ ಹಾಡು ಕಥೆ,ಚಿತ್ರಗೀತೆಯ ಮೂಲಕ ಎಲ್ಲರ ಪ್ರಶಂಸೆ ಗಳಿಸಿದರು. ಈ ಕಾರ್ಯಕ್ರಮದಲ್ಲಿ ಮಾತೆಯರು,ಪಾಲಕರು,ಶೈಕ್ಷಣಿಕ ಸಲಹೆಗಾರರು,ಮುಖ್ಯಧ್ಯಾಪಕರು,ಶಿಕ್ಷಕ ವೃಂದದವರು ಹಾಜರಿದ್ದರು.