ಕುಮಟಾ: ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಅಂಕೋಲಾದ ಜಿ.ಸಿ.ಕಾಲೇಜಿನಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವಿಶ್ವಾಸ ಪೈ, ಪ್ರಣೀತ ಕಡ್ಲೆ ಮತ್ತು ಶ್ರೀಧರ ಭಟ್ಟ ಇವರು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರ ಸಾಧನೆಗೆ ಕೆನರಾ ಶಿಕ್ಷಣ ಸಂಸ್ಥೆ ಮತ್ತು ಚಿತ್ರಿಗಿ ಪ್ರೌಢಶಾಲೆ ಅಭಿನಂದಿಸಿದೆ.
ಶಟಲ್ ಬ್ಯಾಡ್ಮಿಂಟನ್, ಚೆಸ್ ಚಾಂಪಿಯನ್
ಚಿತ್ರಿಗಿ ಮಹಾತ್ಮಾ ಗಾಂಧಿಯ ವಿದ್ಯಾರ್ಥಿನಿಯರು ಇಲ್ಲಿಯ ಸಿ.ವಿ.ಎಸ್.ಕೆ. ಪ್ರೌಢಶಾಲೆಯಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದಕ್ಕೆ ಆಯ್ಕೆಯಾಗಿದ್ದಾರೆ. ತನುಜಾ ಡಿ.ಗೌಡ, ಸೌಂದರ್ಯ ಆರ್.ನಾಯ್ಕ, ಪಲ್ಲವಿ ಎನ್.ಹರಿಕಾಂತ, ಶ್ರೀರಶ್ಮಿ ಎಮ್.ಭಟ್ಟ ಮತ್ತು ಸ್ನೇಹಾ ಆರ್.ಶೇಟ್ ತಂಡದ ಸದಸ್ಯರಾಗಿದ್ದಾರೆ. ಅಂತೆಯೇ ಸುಪ್ರಸನ್ನ ವಿ.ಗುನಗ ಈತನು ಚದುರಂಗ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ಇವರ ಸಾಧನೆಗೆ ದೈಹಿಕ ಶಿಕ್ಷಕ ಲಕ್ಷ್ಮಣ ಅಂಬಿಗ, ಮುಖ್ಯ ಶಿಕ್ಷಕ ಎನ್.ಆರ್.ಗಜು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ಚರಣ್, ತನುಜಾ ವೀರಾಗ್ರಣಿಗಳು
ಗಾಂಧಿವನ ಕಡ್ಲೆಯಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದಲ್ಲಿ ಚಿತ್ರಿಗಿ ಮಹಾತ್ಮಾಗಾಂಧಿ ಪ್ರೌಢಶಾಲೆಯ ಚರಣ್ ಎಂ.ನಾಯ್ಕ 1500 ಮೀ ಮತ್ತು 200 ಮೀ ಓಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕರ ವೀರಾಗ್ರಣಿಯಾದರೆ, ತನುಜಾ ಡಿ.ಗೌಡ ಚಕ್ರ ಎಸೆತ, ಗುಂಡು ಎಸೆತ ಮತ್ತು 100 ಮೀ.ಓಟದಲ್ಲಿ ಪ್ರಥಮಸ್ಥಾನ ಪಡೆದು ಬಾಲಕೀಯರ ವೀರಾಗ್ರಣಿಯಾಗಿದ್ದಾಳೆ. ಅದರಂತೆ ಮುಂದಿನ ಹಂತಕ್ಕೆ ಪವನ್ ಎನ್. ನಾಯ್ಕ ಎತ್ತರ ಜಿಗಿತ, ಸಂಜಯ್ ಆರ್ ನಾಯ್ಕ 3000 ಮೀ, ವಿನೋದ ಎಲ್,.ಪಟಗಾರ 400 ಮೀ. ಸೌಮ್ಯ ನಾಯ್ಕ ಎತ್ತರ ಜಿಗಿತ, ರಕ್ಷಿತಾ ಪೂಜಾರಿ ಗುಂಡು ಎಸೆತ, ಯೋಗಿತಾ ಎಸ್.ಪಟಗಾರ ಉದ್ದ ಜಿಗಿತ ಹಾಗೂ ತನುಜಾ ಎಸ್. ನಾಯ್ಕ ನಡಿಗೆ ಸ್ಪರ್ಧೆಗಳಲ್ಲಿ ಆಯ್ಕೆಯಾಗಿರುತ್ತಾರೆ.