ಕುಮಟಾ: ತಾಲ್ಲೂಕಿನ ಕಡ್ಲೆಯ ಗಾಂಧಿವನ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ ಮತ್ತು ಹೊಲನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಕಾರದಲ್ಲಿ ನಡೆದ ತಾಲ್ಲೂಕಾ ಮಟ್ಟದ ಹದಿನಾಲ್ಕು ವರ್ಷ ವಯೋಮಿತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು .ಕ್ರೀಡಾಕೂಟವನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು .ಜಿ.ಪಂ‌ ಸದಸ್ಯ ರತ್ನಾಕರ ನಾಯ್ಕ ಹಾಗೂ ಗ್ರಾ.ಪಂ ಸದಸ್ಯ ರಾಘವೇಂದ್ರ ಪಟಗಾರ ಹಾಗೂ ಇನ್ನಿತರ ಪ್ರಮುಖರು ವೇದಿಕೆಯಲ್ಲಿದ್ದರು.

RELATED ARTICLES  ಸೇವಾ ನಿವೃತ್ತಿ ಹೊಂದಿದ ಪರಮೇಶ್ವರ ಗುನಗ ಅವರಿಗೆ ಬೀಳ್ಕೊಡುಗೆ.

ನಿನ್ನೆ ನಡೆದ ಈ ಕ್ರೀಡಾಕೂಟ ಅಚ್ಚುಕಟ್ಟುತನದಿಂದ ಕೂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು . ಹಾಗೂ ಇದೊಂದು ಮಾದರಿ ಕಾರ್ಯಕ್ರಮ ಎನಿಸಿತು.

ಶಿಕ್ಷಕರು ಹಾಗೂ ಖ್ಯಾತ ನಿರೂಪಕರಾದ ರವೀಂದ್ರ ಭಟ್ ಸೂರಿಯವರ ನೇತೃತ್ವದಲ್ಲಿ ತಾಲ್ಲೂಕಿನ ಕಡ್ಲೆಯ ಗಾಂಧಿವನದಲ್ಲಿ ಕ್ರೀಡಾಕೂಟ ಅಚ್ಚುಕಟ್ಟಾಗಿ ನಡೆದಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು .

ಅಲ್ಪ ಅವಧಿಯಲ್ಲಿಯೇ ತಮ್ಮ ಶಾಲೆಯಲ್ಲಿರುವ ಕೆಲವೇ ಕೆಲವು ಶಿಕ್ಷಕರ ಜೊತೆಗೂಡಿ ಹಾಗೂ ಮಕ್ಕಳ ಸಹಾಯ ಪಡೆದು ಕ್ರೀಡಾಂಗಣವನ್ನು ಸುವ್ಯವಸ್ಥಿತವಾಗಿ ಮಾಡುವ ಜೊತೆಗೆ ಕ್ರೀಡಾಕೂಟಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ ರವೀಂದ್ರ ಭಟ್ ಹಾಗೂ ಶಾಲಾ ಮುಖ್ಯ ಶಿಕ್ಷಕರು ಮತ್ತು ಇತರ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಎಲ್ಲಾ ಇತರ ಶಾಲಾ ಶಿಕ್ಷಕ ವೃಂದ ಅಭಿಪ್ರಾಯಪಟ್ಟರು.
FB IMG 1536501406502
ಹಗಲು ಇರುಳೆನ್ನದೆ ಎಲ್ಲ ಶಿಕ್ಷಕರು ಕೈಜೋಡಿಸಿ ಶ್ರೀ ರವೀಂದ್ರ ಭಟ್ ಸೂರಿಯವರ ನೇತೃತ್ವದಲ್ಲಿ ಕ್ರೀಡಾಂಗಣ ವ್ಯವಸ್ಥೆ ,ಊಟೋಪಚಾರ ,ತಿಂಡಿ ವ್ಯವಸ್ಥೆ ಹಾಗೂ ವೇದಿಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ಸಂಪನ್ನಗೊಳಿಸಿದ್ದು ಇತರ ಕ್ರೀಡಾಕೂಟಕ್ಕೆ ಮಾದರಿ ಎನಿಸಿತು.

RELATED ARTICLES  ಬಿಜೆಪಿ ಗೆಲುವಿಗೆ ಕಾರಣರಾದ ಕಾರ್ಯಕರ್ತರಿಗೆ ಸಂದಿತು ಅಭಿನಂದನೆ: ಶಾಸಕರಿಗೆ ಸಂದ ಗೌರವ