ಅಂಕೋಲಾ: ಪಟ್ಟಣದ ಅಂಬಾರಕೊಡ್ಲ ರಸ್ತೆಯಲ್ಲಿನ ಪೂಜಾ ಸ್ವೀಟ್ಸ್ ಎಂಡ್ ಬೇಕರಿಯಲ್ಲಿ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದ ಕಾರಣಕ್ಕೆ ಅಂದರೆ ಬೇಕರಿ ಬಂದ್ ಮಾಡದ್ದಕ್ಕೆ ಬೇಕರಿಯಲ್ಲಿದ್ದ ಒಂದು ಟ್ರೇ ಸ್ವೀಟ್ಸ್ ಅನ್ನು ಕಾಂಗ್ರೆಸ್ ನವರು ನೆಲಕ್ಕೆಸೆದು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.

RELATED ARTICLES  ಎಪ್ರಿಲ್ 15 ರಂದು ಶನಿವಾರ ಕುಮಟಾದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಕೊಂಕಣಿ ನಾಟಕ " ಗಾಂಟಿ " ಪ್ರದರ್ಶನ.

ಭಾರತ್ ಬಂದ್ ಹಿನ್ನೆಲೆಯಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿತ್ತಾದರೂ ಈ ಬೇಕರಿ ತೆರೆದಿತ್ತು ಎನ್ನಲಾಗಿದೆ. ಈ ವೇಳೆ ಸ್ಥಳಕ್ಕಾಗಮಿಸಿದ ಕಾಂಗ್ರೆಸ್ಸಿಗರು ಅಂಗಡಿಯನ್ನು ಬಂದ್ ಮಾಡಿ ಬೆಂಬಲ ನೀಡುವಂತೆ ಕೋರಿದ್ದಾರೆ.

ಇದಕ್ಕೆ ಒಪ್ಪದಿದ್ದಕ್ಕೆ ಕುಪಿತಗೊಂಡ ಕಾಂಗ್ರೆಸ್ಸಿಗರಲ್ಲೋರ್ವ, ಬೇಕರಿಯಲ್ಲಿಟ್ಟಿದ್ದ ಒಂದು ಟ್ರೇ, ಅಂದಾಜು ಮೂರು ಕೆಜಿಯ ಸ್ವೀಟ್ಸ್ ಅನ್ನು ರಸ್ತೆಗೆ ಎಸೆದಿದ್ದಾರೆ ಎನ್ನಲಾಗಿದೆ. ಪೋಲೀಸರ ಮಧ್ಯಸ್ಥಿಕೆಯಲ್ಲಿ ಅಂಗಡಿಯನ್ನು ಬಂದ್ ಮಾಡಲಾಗಿದೆ.
Screenshot 20180910 112946 1
ಪ್ರತಿಭಟನೆ ಹಾಗೂ ಮನವಿ ಸಲ್ಲಿಕೆ ಪ್ರಕ್ರಿಯೆ ಅಂಕೋಲಾದಲ್ಲಿ ನಡೆಯುತ್ತಿದ್ದು ಬಂದ್ ಗೆ ಬೆಂಬಲ ಸೂಚಿಸಿ ಬಂದ್ ಮಾಡಲಾಗಿದೆ.

RELATED ARTICLES  ಕುಮಟಾ ಬ್ಲಾಕ್ ಕಾಂಗ್ರೆಸ್ ನ ನೂತನ ಕಾರ್ಯಾಲಯ ಉದ್ಘಾಟನೆ