ಯಲ್ಲಾಪುರ : ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸೆ.10 ರಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕರೆಯ ಮೆರೆಗೆ ಯಲ್ಲಾಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ.

ಪೆಟ್ರೋಲಿಯಂ ಉತ್ಪನ್ನಗಳ ದರ ಅತೀ ಏರಿಕೆ ಕಂಡ ಹಿನ್ನೆಲೆಯಲ್ಲಿ ಜನಸಾಮಾನ್ಯರು ತತ್ತರಿಸುವಂತಾಗಿದೆ. ಭವಿಷ್ಯದಲ್ಲಿ ಇನ್ನೂ ಏರಿಕೆ ಕಾಣುವ ಲಕ್ಷಣ ಕಂಡು ಬರುತ್ತಿದ್ದು. ಇದರಿಂದಾಗಿ ಸಾರಿಗೆ ದರ ಎರಿಕೆಯಾಗಿರುವುದಲ್ಲದೇ ವಾಣಿಜ್ಯ ವ್ಯವಹಾರಗಳು ತೀವ್ರವಾಗಿ ಏರು ಮುಖದಲ್ಲಿ ಸಾಗುವಂತಾಗಿ ದೇಶದ ಆರ್ಥಿಕ ಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಅಭಿಪ್ರಾಯಪಟ್ಟರು.

RELATED ARTICLES  ಅಶಕ್ತರ ಸಹಾಯಾರ್ಥ ಚಿಣ್ಣರ ಯಕ್ಷಗಾನ : ಕುಮಟಾದಲ್ಲಿ ಕಾರ್ಯಕ್ರಮ

ಇದರಿಂದುಂಟಾದ ಹಣದುಬ್ಬರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಬಂದ್‌ಗೆ ಕರೆ ನೀಡಲಾಗಿತ್ತು ಈ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ವಾಣಿಜ್ಯ ವ್ಯವಹಾರ ಸ್ಥಗಿತಗೊಳಿಸಿ, ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ, ಲಾರಿ, ಆಟೋ ಚಾಲಕರು ಸೇರಿದಂತೆ ಪ್ರತಿಯೊಬ್ಬರೂ ಬಂದ್ ಕರೆಗೆ ಬೆಂಬಲಿಸೂಚಿಸಿದ್ದಾರೆ ಎಂದರು.

RELATED ARTICLES  "ನೇತ್ರದಾನ ಕುರಿತು ಜಾಗೃತಿ"ಯಶಸ್ವಿಯಾದ ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯ ಕಾರ್ಯಕ್ರಮ.