ಗೋಮಾಂಸ ಸೇವಿಸುವವರು, ತಾವು ಕುಡಿಯುತ್ತಿರುವ ಹಾಲಿನ ಕುರಿತಾಗಿ ಒಮ್ಮೆ ಚಿಂತಿಸಲಿ  ಎಂದು ಶ್ರೀ ಶ್ರೀ ರಾಘವೇಶ್ವರ ಶ್ರೀಗಳು ನುಡಿದರು.ಗೋಸಂರಕ್ಷಣಾ ಆಂದೋಲನ ಯಾವುದೇ ಪ್ರಾಣಿಯ ವಿರುದ್ಧವಲ್ಲ. ನಾವು ಗೋವಿನ ವಿಷಯದಲ್ಲಿ ಹೋರಾಟ ಮಾಡುತ್ತಿದ್ದು, ಬೇರೆಯವರು ಬೇರೆ ಪ್ರಾಣಿಗಳ ಕುರಿತು ಹೋರಾಟ ಕೈಗೊಂಡರೆ ಅದಕ್ಕೆ ನಮ್ಮ ಬೆಂಬಲವಿದೆ. ಎಲ್ಲವನ್ನೂ ನಾವೇ ಮಾಡುತ್ತೇವೆ ಎಂಬುದು ಸಾಧ್ಯವಿಲ್ಲ. ನಮ್ಮ ಹೃದಯಕ್ಕೆ ಯಾವುದು ಹತ್ತಿರವೋ ಆ ವಿಷಯದ ಕುರಿತು ನಾವು ಆಂದೋಲನ ಮಾಡಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಪದ್ಮನಾಭನಗರದ ಪುಟ್ಟಲಿಂಗಯ್ಯ ಸಭಾಂಗಣದಲ್ಲಿ ನಡೆದ ‘ಅಭಯಾಕ್ಷರ – ಹಾಲುಹಬ್ಬ’ ಕಾರ್ಯಕ್ರಮಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಗೋಮಾಂಸವನ್ನು ಸೇವಿಸುವವರು, ತಾವು ಕುಡಿಯುತ್ತಿರುವ ಹಾಲಿನ ಕುರಿತಾಗಿ ಒಮ್ಮೆ ಚಿಂತಿಸಿದರೂ ಸಾಕು, ತಾನೇತಾನಾಗಿ ಗೋಮಾಂಸ ಭಕ್ಷಣೆಯನ್ನು ನಿಲ್ಲಿಸುತ್ತಾರೆ.  ಗೋವು ಕೊಡುವ ಹಾಲು – ಮೂತ್ರ – ಗೋಮಯಗಳಿಗೆ ಹಲವು ರೂಪಗಳಿದ್ದು, ಮೈಮನಗಳನ್ನು ಶುದ್ಧಗೊಳಿಸುವುದರಿಂದ ಹಿಡಿದು, ಮನೆಯ ನೆಲದ ತನಕ ಶುದ್ಧೀಕರಿಸುವ ವರೆಗೆ ಅವುಗಳನ್ನು ಬಳಸಿಕೊಳ್ಳ ಬಹುದು ಎಂದರು. 

ಗೋವಿನ ನೋವಿನ ಜೊತೆಗೆ ನಾವಿದ್ದೇವೆ ಎಂದು ಸ್ಪಷ್ಟವಾಗಿ ಲಿಖಿತರೂಪದಲ್ಲಿ  ಹೇಳುವುದೇ ‘ಅಭಯಾಕ್ಷರ’ ವಾಗಿದೆ. ನಮಗೇನು ಬೇಕು ಎಂದು ಜನನಾಯನ ಬಳಿ ಹಕ್ಕೊತ್ತಾಯ ಮಂಡಿಸುವ ಹಕ್ಕು ಜನರಿಗೆ ಇದೆ. ಸಂವಿಧಾನದ ಮೇಲೆ ಪ್ರಮಾಣಮಾಡಿ ಅಧಿಕಾರ ಸ್ವೀಕರಿಸಿದ ಜನಪ್ರತಿನಿಧಿಗಳು ಸಂವಿಧಾನದ ಆಶಯವಾದ ಗೋಸಂರಕ್ಷಣೆಗೆ ಬದ್ಧರಾಗಬೇಕು ಎಂದರು.

RELATED ARTICLES  ಪ್ರೇಮಲತಾ ದಂಪತಿಗಳ ಅರ್ಜಿ ವಜಾ: ರಾಮಚಂದ್ರಾಪುರ ಮಠಕ್ಕೆ ಮುನ್ನಡೆ.

ಹಾರೋಹಳ್ಳಿಯ ಹೋರಾಟ ಮಾದರಿಯಾಗಲಿ :

ಹಾರೋಹಳ್ಳಿ ಕಸಾಯಿಖಾನೆಯ ವಿಷಯವನ್ನು ಪ್ರಸ್ತಾಪಿಸಿದ ಶ್ರೀಗಳು, ಹಾರೋಹಳ್ಳಿಯ ಹೋರಾಟದಲ್ಲಿ ಶ್ರೀಮಠ ನೇತೃತ್ವವನ್ನು ವಹಿಸಿಕೊಂಡು, ಆ ಊರಿನ ಪ್ರತಿಯೊಬ್ಬರೂ ಸಹಿ ಮಾಡಿಸಿ ಸಂಬಂಧಿಸಿದವರಿಗೆ ಸಲ್ಲಿಸಲಾಯಿತು. ಅಂದಿನಿಂದ ಇಂದಿನವರೆಗೆ ಕಸಾಯಿಖಾನೆಯ ವಿಷಯದಲ್ಲಿ ಒಂದು ಹೆಜ್ಜೆಯನ್ನು ಮುಂದಿಡಲು ಅವರಿಗೆ ಆಗಲಿಲ್ಲ. ಇದೇ ಮಾದರಿಯನ್ನು  ನಾವು ನಾಡಿನಲ್ಲೆಲ್ಲ ಅನುಸರಿಸೋಣ ಎಂದು ಕಾರ್ಯಕರ್ತರಿಗೆ ಹೇಳಿದರು.

ಸುಳ್ಯಾದಲ್ಲಿ ಸುಮಾರು 70 ಗೋವುಗಳು ದಿಕ್ಕಿಲ್ಲದೆ ಇವೆ ಎಂಬ ಮಾಹಿತಿ ಸಭೆಗೆ ಆಗಮಿಸುವಾಗ ಬಂತು. ಸಂಬಂಧಿಸಿದವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಆ ಎಲ್ಲಾ ದಿಕ್ಕಿಲ್ಲದ ಗೋವುಗಳ ಹೊಣೆಯನ್ನು ಶ್ರೀಮಠ ವಹಿಸಿಕೊಳ್ಳುತ್ತದೆ ಎಂದು ಅದೇ  ಸಭೆಯಲ್ಲಿ  ಶ್ರೀಗಳು ಉದ್ಘೋಷಿಸಿದರು.

ಖ್ಯಾತ ಕಲಾವಿದರಾದ ಅರುಣ್ ಸಾಗರ್ ಅವರು ಮಾತನಾಡಿ, ಗೋಸಂರಕ್ಷಣೆಗಾಗಿ ರಾಘವೇಶ್ವರ ಶ್ರೀಗಳು  ನಡೆಸುತ್ತಿರುವುದು ಹೋರಾಟವಲ್ಲ, ಅನೇಕ ವರ್ಷಗಳಿಂದ ಅವರು ಈ ಕುರಿತು ಮಾಡುತ್ತಿರುವ ಕಾರ್ಯಗಳು ಆಂದೋಲನ ಸ್ವರೂಪದ್ದಾಗಿದೆ. ನಮ್ಮ ಮನೆಯಲ್ಲಿಯೂ 110 ಗೋವುಗಳಿತ್ತು, ಆ ಗೋವುಗಳ ಉತ್ಪನ್ನಗಳಿಂದಲೇ ನಾನು ಹೋಟೆಲ್ ನಡೆಸುತ್ತಿದ್ದೆ ಎಂದರು.

ಎ.ಪಿ.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಕೃಷ್ಣಸ್ವಾಮಿಯವರು ಮಾತನಾಡಿ, ಗೋಮೂತ್ರ – ಗೋಮಯ ಎಲ್ಲವೂ ನಮಗೆ ಪವಿತ್ರ ವಸ್ತುವಾಗಿದೆ. ಆದರೆ ಕೆಲವು ಅವಿವೇಕಿಗಳು ಗೋವನ್ನು ಕೊಂದು ತಿನ್ನುವ ‘ಬೀಫ್ ಫೇಸ್ಟ್’ ಆಯೋಜಿಸಲು ಉದ್ಯುಕ್ತರಾಗಿದ್ದರು. ಅದಕ್ಕೆ ತಕ್ಕ ಪ್ರತ್ಯುತ್ತರವಾಗಿ ರಾಘವೇಶ್ವರ ಶ್ರೀಗಳು ‘ಮಿಲ್ಕ್ ಫೆಸ್ಟ್’ ಆಯೋಜಿಸಿ ಗೋವಿನ ಮಹತ್ವವನ್ನು ತಿಳಿಹೇಳುವ ಕಾರ್ಯ ಮಾಡುತ್ತಿದ್ದಾರೆ. ಗೋವಿನ ಮೂತ್ರ – ಸಗಣಿ ಎಲ್ಲವೂ ಆರ್ಥಿಕವಾಗಿ ಲಾಭದಾಯಕವಾಗಿದ್ದು, ನಾವದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

RELATED ARTICLES  ಬಸ್ ನಿಲ್ದಾಣದಲ್ಲಿ ಕೈಚೀಲದಲ್ಲಿ ಮಗು ಪತ್ತೆ : ನೋಡಿದ ಜನ ಕಂಗಾಲು..!

ಖ್ಯಾತ ಗಾಯಕರಾದ ಶಶಿಧರ ಕೋಟೆ, ಸಾಮಾಜಿಕ ಕಾರ್ಯಕರ್ತೆಯಾದ ಶಕುಂತಲಾ ಅಯ್ಯರ್, ಜ್ಯೋತಿ ಗ್ರೂಪ್ ನ ನರಸಿಂಹನ್ ಮುಂತಾದ ಗಣ್ಯರು ಉಪಸ್ಥಿತರಿದ್ದು, ಅಭಯಾಕ್ಷರಕ್ಕೆ ಸಹಿ ಹಾಕಿದರು. 
ಸಭೆಯಲ್ಲಿ ಮಾ ಗೋ ಪ್ರಾಡೆಕ್ಟ್ಸ್ ನ ಕ್ಷೀರಬಲ ತೈಲ ಎಂಬ ನೂತನ ಉತ್ಪನ್ನ  ಲೋಕಾರ್ಪಿತವಾಯಿತು, ಇದೇ ಸಂದರ್ಭದಲ್ಲಿ ಪದ್ಮನಾಭನಗರದಲ್ಲಿ ನಾಗರಿಕರಿಂದ ಸಂಗ್ರಹಿಸಿದ ಅಭಯಾಕ್ಷರ ಹಕ್ಕೊತ್ತಾಯದ ಪತ್ರಗಳನ್ನು ಸಾಂಕೇತಿಕವಾಗಿ ಶ್ರೀಗಳಿಗೆ ಸಮರ್ಪಿಸಲಾಯಿತು. ಗೋಸಂಬಂಧಿ ವಿವಿಧ ಪ್ರದರ್ಶಿನಿಗಳು, ಗವ್ಯೋತ್ಪನ್ನ – ಹಾಲಿನ ಸಿಹಿತಿಂಡಿ ಮುಂತಾದವುಗಳ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 

DSC04584

ಕಾರ್ಯಕ್ರಮದ ಕೊನೆಯಲ್ಲಿ, ರಾಘವೇಶ್ವರ ಶ್ರೀಗಳು, ಗೋಕಿಂಕರಿಗೆ ‘ಗೋದೀಕ್ಷೆ’ಯನ್ನು ನೀಡಿದರು. ಪದ್ಮನಾಭನಗರದ ನೂರಾರು ಗೋಪ್ರೇಮಿಗಳು ಗೋದೀಕ್ಷೆಯನ್ನು ಸ್ವೀಕರಿಸಿ, ಗೋಸೇವೆಗೆ ಸಿದ್ಧರಿರುವುದಾಗಿ ಪ್ರತಿಜ್ಞೆ ಮಾಡಿದರು.