ಕಾರವಾರ: ಸ್ಕಿಲ್ ಇಂಡಿಯಾ ಪರಿಕಲ್ಪನೆಯಲ್ಲಿ ಕದಂಬ ಫೌಂಡೇಷನ್ ವತಿಯಿಂದ ಕುಮಟಾದಲ್ಲಿ ಉದ್ಯೋಗ ಕೇಂದ್ರವನ್ನು ತಾಲೂಕು ಪಂಚಾಯತ ಕಛೇರಿ ಎದುರು ಕುಮಟಾದಲ್ಲಿ ಪ್ರಾರಂಭಿಸಲಾಗಿದೆ. ನಿರುದ್ಯೋಗ ಯುವಕ ಯುವತಿಯರು ಉದ್ಯೋಗ ಕೇಂದ್ರ ಕ್ಕೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ದಿನಕರ ಶೆಟ್ಟಿ ವಿನಂತಿಸಿದ್ದಾರೆ.
ಭಟ್ಕಳ: ಶಿರಾಲಿಯ ಜನತಾ ವಿದ್ಯಾಲಯದ ಹತ್ತಿರ ಕದಂಬ ಟ್ರಸ್ಟ್ ಕಛೇರಿಯಲ್ಲಿ ” ಸ್ಕಿಲ್ ಇಂಡಿಯಾ” ಪರಿಕಲ್ಪನೆ ಅಡಿಯಲ್ಲಿ ಉದ್ಯೋಗ ಮತ್ತು ಉದ್ಯೋಗ ತರಬೇತಿ ಕೇಂದ್ರವು ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಎಸಳೆ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು, ನಿರುದ್ಯೋಗಿ ಯುವಕ ಯುವತಿಯರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಸುನಿಲ್ ನಾಯ್ಕ ವಿನಂತಿಸಿದ್ದಾರೆ.