ಹೊನ್ನಾವರ: ಕೆಕ್ಕಾರ ವಲಯ ಮಟ್ಟ 2018 – 19ನೇ ಸಾಲಿನ ಶಾಲಾ ಮಕ್ಕಳ ಕ್ರೀಡಾ ಕೂಟವು ಇಂದು ಬೆಳಗ್ಗೆ 9 -30 ಕ್ಕೆ H.P.S ಸಂತೇಗುಳಿ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಉದ್ಘಾಟನೆಯನ್ನು ಜಿ.ಪಂ.ಸದಸ್ಯರಾದ ಶ್ರೀಮತಿ ಶ್ರೀಕಲಾ ಶಾಸ್ರೀಯವರು ದೀಪ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆಚಾಲನೆ ನೀಡಿದರು.
ವಿವಿಧ ಶಾಲೆಗಳಿಂದ ನೂರಾರು ಮಕ್ಕಳು ಈ ಕ್ರೀಡಾಕೂಟಕ್ಕೆ ಭಾಗವಹಿಸಿದ್ದರು.
ಶ್ರೀಮತಿ ಶ್ರೀಕಲಾ ಶಾಸ್ರೀಯವರು ಮಕ್ಕಳನ್ನು ಉದ್ದೇಶಿಸಿ “ಕ್ರೀಡೆಯನ್ನು ಉತ್ಸಾಹ ಮತ್ತು ಆರೋಗ್ಯಕ್ಕಾಗಿ ಆಡಬೇಕು ಎಂದರು”. ಅಲ್ಲದೇ, ನಗರಗಳಲ್ಲಿ ಬೆಳೆದ ಮಕ್ಕಳಿಗಿಂತ , ಹಳ್ಳಿಗಳಲ್ಲಿ ಬೆಳೆದ ಮಕ್ಕಳು ಸದೃಡವಾಗಿರುತ್ತರೆ. ಹಾಗಾಗಿ , ಹೆಚ್ಚಿನ ಕ್ರೀಡೆಗಳಲ್ಲಿ ಹಳ್ಳಿಯ ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ ಎಂದರು. ಇಲ್ಲಿ ಬಡವ – ಶ್ರೀಮಂತ ಎಂಬ ಭೇದ- ಭಾವ ತೋರದೆ ಎಲ್ಲರು ಸಮಾನ ಮನೋಭಾವದಿಂದ ಆಡಬೇಕು. ಇದರಿಂದ ಶ್ರಮವಹಿಸಿ ಅಭ್ಯಾಸ ಮಾಡಿದರೆ ಗುರಿ ತಲುಪಬಹುದು ಎಂದರು. ಮಕ್ಕಳಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಗುರಿ ತಲುಪಿ ಎಂದು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು.
ಈ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾದ ಶ್ರೀಮತಿ ಶ್ರೀಕಲಾ ಶಾಸ್ರೀ ಸಮಾನ ಕ್ರೀಡಾ ಪರಿವೀಕ್ಷಕರಾದ G.H.ನಾಯ್ಕ , ಶಂಕರ ಹರಿಕಾಂತ , ಅಧ್ಯಕ್ಷತೆಯಲ್ಲಿ ಸುರೇಶ ಶೆಟ್ಟಿ , ಶಿಕ್ಷಕ ಸಂಘದ ಅಧ್ಯಕ್ಷ N.S.ನಾಯ್ಕ ಮತ್ತು ತಿಮ್ಮಣ್ಣ ಹೆಗಡೆ ಉಪಸ್ಥಿತರಿದ್ದರು.