ಕುಮಟಾ: ಇಂದು ತಾಲೂಕಿನ ರಾಮಕ್ಷತ್ರೀಯ ಸಭಾಭವನ ಮಿಜಾ೯ನ ಇಲ್ಲಿ ಒಟ್ಟು 87 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅಡಿಗೆ ಅನಿಲ ಸಿಲಿಂಡರ ಹಾಗೂ ಇತರ ಪರಿಕರಗಳನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಇವರು ವಿತರಿಸಿ ಮಾತನಾಡಿದರು.
ಈ ಯೋಜನೆಯು ಪ್ರಧಾನಮಂತ್ರಿಯವರ ಕನಸಿನ ಯೋಜನೆಯಾಗಿದ್ದು ತಾಯಂದಿರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಪರಿಸರ ಸ್ನೇಹಿ ಯೋಜನೆ ಆಗಿದ್ದು ಇದರಿಂದ ಪರಿಸರದ ರಕ್ಷಣೆ ಕೂಡಾ ಆಗಲಿದೆ ಎಂದು ತಿಳಿಸಿದರು. ಭಾ.ಜ.ಪ. ಪಕ್ಷದ ದುರೀಣರಾದ ಡಾ//.ಜಿ.ಜಿ.ಹೆಗಡೆಯವರು ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಯೋಜನೆಗಳನ್ನು ವಿವರಿಸಿದರು,
ಈ ಸಂದರ್ಭದಲ್ಲಿ ಮಿಜಾ೯ನ ಪಂಚಾಯತ ಗ್ರಾಮಪಂಚಾಯತ ಉಪಾಧ್ಯಕ್ಷರಾದ ಶ್ರೀ ನಾಗರಾಜ್ ನಾಯ್ಕ, ಭಾ.ಜ.ಪ ಪಕ್ಷದ ಕಾಯ೯ಕತ೯ರಾದ ಬಾಳಾ ಡಿಸೋಜಾ, ರೋಶನ್ ನಾಯ್ಕ, ಗಣೇಶ್ ಅಂಬಿಗ, ಶ್ರೀಮತಿ ಪ್ರೇಮಾರವರು ಉಪಸ್ಥಿತರಿದ್ದರು.