ಶಿರಸಿ ; ಟಿ.ಎಸ್.ಎಸ್.ಲಿ. ಸಂಘವು ಸದಸ್ಯರಿಗಾಗಿ ಈಗಾಗಲೇ ಸ್ವಂತ ಬ್ರಾಂಡ್‍ನಲ್ಲಿ ಅನೇಕ ಜೀವನಾವಶ್ಯಕಗಳನ್ನು ಬಿಡುಗಡೆ ಮಾಡಿದ್ದು, ಇದೀಗ “ಟಿ.ಎಸ್.ಎಸ್. ಮಕ್ಕಳ ಆಹಾರ” ಹಾಗೂ “ಟಿ.ಎಸ್.ಎಸ್. ಉಪ್ಪಿನಕಾಯಿ” ಯನ್ನು ದಿ:11.09.2018 ರಂದು ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಬಿಡುಗಡೆಗೊಳಿಸಿ ಮಾತನಾಡಿದ ಅವರು ಮಿಕ್ಸ್ ವೆಜ್ ಉಪ್ಪಿನಕಾಯಿ, ಲಿಂಬು ಉಪ್ಪಿನಕಾಯಿ, ಅಪ್ಪೆಮಿಡಿ ಉಪ್ಪಿನಕಾಯಿ, ವೈಟ್ ಲೆಮನ್ ಉಪ್ಪಿನಕಾಯಿ ಎಂಬ ನಾಲ್ಕು ವಿಧಗಳಲ್ಲಿ ಉಪ್ಪಿನಕಾಯಿ ದೊರೆಯಲಿದೆ ಎಂದರು ಹಾಗೂ ಟಿ.ಎಸ್.ಎಸ್. ಮಕ್ಕಳ ಆಹಾರವು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಹಾಗೂ ಅಶಕ್ತ ವೃದ್ದರಿಗೂ ಸಹ ಸಹಕಾರಿಯಾಗಲಿದ್ದು, ಸದಸ್ಯರು ಹಾಗೂ ಗ್ರಾಹಕರು ಹೆಚ್ಚಿನ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

RELATED ARTICLES  ನಿರ್ಗತಿಕರಿಗೆ ಸೂರಾಗಲಿದೆ ಸುಯೋಗ ಪೌಂಡೇಶನ್.

ಪ್ರಾರಂಭಿಕ ಕೊಡುಗೆಯಾಗಿ ಉಪ್ಪಿನಕಾಯಿ ಖರೀದಿಯ ಮೇಲೆ ದಿ:11.09.2018 ಹಾಗೂ 12.09.2018 ರಂದು ಶೇ.35% ರಷ್ಟು ರಿಯಾಯಿತಿ ಇರುವುದಾಗಿ ಟಿ.ಎಸ್.ಎಸ್.ಲಿ.,ಶಿರಸಿಯ ಅಧ್ಯಕ್ಷರಾದ ಶಾಂತಾರಾಮ ವೆಂ. ಹೆಗಡೆ, ಶೀಗೇಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

RELATED ARTICLES  ಕುಮಟಾದಲ್ಲಿ ಇಂದಿನಿಂದ ಹಾಫ್ ಡೇ ಲಾಕ್ ಡೌನ್ ಇಲ್ಲ : ಪೂರ್ತಿದಿನ ಅಂಗಡಿ ಮುಂಗಟ್ಟು ತೆರಯಲು ಅವಕಾಶ