ಕುಮಟಾ:- ತಾಲೂಕಿನ ದೀವಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಣಕೋಣದ ವಿದ್ಯಾರ್ಥಿಗಳು 37 ಬಹುಮಾನಗಳನ್ನು ಪಡೆದು ಅಪ್ರತಿಮ ಸಾಧನೆ ಮಾಡಿದ್ದಾರೆ.
ಕಿರಿಯರ ವಿಭಾಗದಲ್ಲಿ ಕಾವ್ಯಾ ಗೌಡ ಮರಾಠಿ ಕಂಠಪಾಠದಲ್ಲಿ ಪ್ರಥಮ, ಕೊಂಕಣಿ ಕಂಠಪಾಠದಲ್ಲಿ ದ್ವಿತಿಯ, ನಿಶಾ ಗೌಡ ಹಿಂದಿ ಕಂಠಪಾಠ ಮತ್ತು ಲಘು ಸಂಗೀತದಲ್ಲಿ ತೃತೀಯ, ವಿದ್ಯಾ ಗೌಡ ಉರ್ದು ಮತ್ತು ತಮಿಳು ಕಂಠಪಾಠದಲ್ಲಿ ಪ್ರಥಮ, ಪ್ರತೀಕ್ಷಾ ಗೌಡ ತುಳು ಕಂಠಪಾಠದಲ್ಲಿ ಪ್ರಥಮ, ಚೈತ್ರಾ ಅಂಬಿಗ ತೆಲಗು ಕಂಠಪಾಠದಲ್ಲಿ ಪ್ರಥಮ, ದೀಕ್ಷಾ ಅಂಬಿಗ ಸಂಸ್ಕøತ ಕಂಠಪಾಠದಲ್ಲಿ ಪ್ರಥಮ, ಸಂಜನಾ ಅಂಬಿಗ ಇಂಗ್ಲೀಷ್ ಕಂಠಪಾಠದಲ್ಲಿ ದ್ವಿತಿಯ, ವಿವೇಕ ಗೌಡ ಮಣ್ಣಿನ ಮಾದರಿ ತಯಾರಿಯಲ್ಲಿ ದ್ವಿತಿಯ, ಸಂಜಯ ಗೌಡ ಚಿತ್ರಕಲೆಯಲ್ಲಿ ಪ್ರಥಮ, ಕೋಲಾಟದಲ್ಲಿ ವಿದ್ಯಾ ಸಂಗಡಿಗರು ತೃತಿಯ, ಜಾನಪದ ನೃತ್ಯದಲ್ಲಿ ದೀಕ್ಷಿತಾ ಸಂಗಡಿಗರು ದ್ವಿತಿಯ, ಕವ್ವಾಲಿಯಲ್ಲಿ ಚೈತ್ರಾ ಸಂಗಡಿಗರು ದ್ವಿತಿಯ ಸ್ಥಾನ ಗಳಿಸಿದ್ದಾರೆ.
ಹಿರಿಯರ ವಿಭಾಗದಲ್ಲಿ ಪೂಜಾ ಗೌಡ ಮರಾಠಿ ಮತ್ತು ಕೊಂಕಣಿ ಕಂಠಪಾಠದಲ್ಲಿ ಪ್ರಥಮ, ಭಕ್ತಿಗೀತೆಯಲ್ಲಿ ತೃತಿಯ, ಗಾಯತ್ರಿ ಗೌಡ ಹಿಂದಿ ತುಳು ಕಂಠಪಾಠದಲ್ಲಿ ಪ್ರಥಮ, ವನಿತಾ ಅಂಬಿಗ ತೆಲಗು ಕಂಠಪಾಠದಲ್ಲಿ ಪ್ರಥಮ, ಕನ್ನಡ ಕಂಠಪಾಠದಲ್ಲಿ ದ್ವಿತಿಯ, ಪೂಜಾ ನಾಯ್ಕ ತಮಿಳು ಕಂಠಪಾಠದಲ್ಲಿ ಪ್ರಥಮ, ಲಘು ಸಂಗೀತ ಮತ್ತು ಅಭಿನಯ ಗೀತೆಯಲ್ಲಿ ತೃತಿಯ, ನಿತ್ಯಾನಂದ ಗೌಡ ಉರ್ದು ಕಂಠಪಾಠದಲ್ಲಿ ತೃತಿಯ, ನಿಖಿತಾ ಸಂಸ್ಕøತ ಕಂಠಪಾಠದಲ್ಲಿ ತೃತಿಯ, ಸಂದೀಪ ಅಂಬಿಗ ಚಿತ್ರಕಲೆಯಲ್ಲಿ ದ್ವಿತಿಯ, ವಿಘ್ನೇಶ ಅಂಬಿಗ ಮಣ್ಣಿನ ಮಾದರಿಯಲ್ಲಿ ಪ್ರಥಮ, ವಿಘ್ನೇಶ ನಾಯ್ಕ ಆಶುಭಾಷಣದಲ್ಲಿ ತೃತಿಯ, ಗೌತಮ ಗೌಡ ಛದ್ಮವೇಷದಲ್ಲಿ ದ್ವಿತಿಯ, ಚರಣ ಅಂಬಿಗ ಇಂಗ್ಲೀಷ್ ಕಂಠಪಾಠದಲ್ಲಿ ದ್ವಿತಿಯ, ಭವಾನಿ ಸಂಗಡಿಗರು ಜಾನಪದ ನೃತ್ಯದಲ್ಲಿ ಪ್ರಥಮ, ಚರಣ ಸಂಗಡಿಗರು ಕೋಲಾಟದಲ್ಲಿ ದ್ವಿತಿಯ, ಕವ್ವಾಲಿಯಲ್ಲಿ ಪೂಜಾ ಸಂಗಡಿಗರು ದ್ವಿತಿಯ, ನಿಖಿತಾ ಸಂಗಡಿಗರು ದೇಶಭಕಿಗೀತೆಯಲ್ಲಿ ದ್ವಿತಿಯ, ರಸ ಪ್ರಶ್ನೆಯಲ್ಲಿ ವಿಘ್ನೇಶ ಸಂಗಡಿಗರು ತೃತಿಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಮುಖ್ಯಶಿಕ್ಷಕಿ ಗೀತಾ ಶೆಟ್ಟಿ, ಸಹಶಿಕ್ಷಕಿಯರಾದ ಗಂಗು ಭಟ್ಟ , ಕಲ್ಪನಾ ಪಟಗಾರ, ಮರಿಯಾ ನರ್ಹೋನಾ ಮತ್ತು ದೀಪಾ ಗೌಡ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಾದೇವ ಗೌಡ ಮತ್ತು ಸದಸ್ಯರು ಪಾಲಕರು ಅಭಿನಂದಿಸಿದ್ದಾರೆ.