ಕುಮಟಾ: ಕಾರವಾರ, ಅಂಕೋಲಾ, ಯಲ್ಲಾಪುರದಲ್ಲಿ ಸೆ.17, ಸೆ.19, ಸೆ.21 ಹಾಗೂ ಸೆ.23, ಹಳಿಯಾಳ, ದಾಂಡೇಲಿಯಲ್ಲಿ ಸೆ.17, ಸೆ.18, ಸೆ.19, ಸೆ.20, ಸೆ.21 ಹಾಗೂ ಸೆ.23, ಶಿರಸಿಯಲ್ಲಿ ಸೆ.17, ಸೆ.18, ಸೆ.19, ಸೆ.20 ಹಾಗೂ ಸೆ.24, ಹೊನ್ನಾವರದಲ್ಲಿ ಸೆ.17, ಸೆ.19, ಸೆ.20 ಹಾಗೂ ಸೆ.21, ಸಿದ್ದಾಪುರದಲ್ಲಿ ಸೆ.16, ಸೆ.17, ಸೆ.19 ಹಾಗೂ ಸೆ.20, ಜೊಯಿಡಾದಲ್ಲಿ ಸೆ.19, ಸೆ.21 ಹಾಗೂ ಸೆ.23, ಮುಂಡಗೋಡದಲ್ಲಿ ಸೆ.17 ಹಾಗೂ ಸೆ.19 , ಮಂಕಿಯಲ್ಲಿ ಸೆ.14, ಸೆ.15 ಹಾಗೂ ಸೆ.17, ಮಲ್ಲಾಪುರದಲ್ಲಿ ಸೆ.17, ಸೆ.19, ಸೆ.21, ಕುಮಟಾ, ಭಟ್ಕಳದಲ್ಲಿ ಸೆ.17 ಹಾಗೂ ಮಂಚಿಕೇರಿಯಲ್ಲಿ ಸೆ.14ರಂದು ಮದ್ಯ ಮಾರಾಟ ಬಂದ್ ಮಾಡಲಾಗಿದೆ.
ಗಣೇಶನ ವಿಸರ್ಜನೆ ಹಾಗೂ ಮೊಹರಂ ನಿಮಿತ್ತ ಈ ಕ್ರಮ ಕೈಗೊಳ್ಳಲಾಗಿದ್ದು ಅಧಿಕೃತವಾಗಿ ಈ ವಿವರ ಹೊರ ಬಂದಿದೆ.
ಜಿಲ್ಲೆಯಲ್ಲಿ ಸೆ.13ರಿಂದ ಸೆ.24ರ ವರೆಗೆ ಗಣೇಶ ಚತುರ್ಥಿ ಹಬ್ಬದ ಆಚರಣೆ ಇರಲಿದೆ. ಇದರ ನಡುವೆ ಸೆ.21ರಂದು ಮೊಹರಂ ಹಬ್ಬವೂ ಇದೆ. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ನಿಗದಿಪಡಿಸಿದ ದಿನಾಂಕದಂದು ಮದ್ಯದ ಅಂಗಡಿಗಳನ್ನು ಮುಚ್ಚಬೇಕು. ಯಾವುದೇ ವಿಧದ ಮದ್ಯದ ಮಾರಾಟವನ್ನು ಈ ವೇಳೆ ನಿಷೇಧಿಸಿದೆ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.