ಅಂಕೋಲಾ : ಸಮಾಜಮುಖಿ ಕಾರ್ಯಗಳ ಮೂಲಕ, ಪರಿಸರ ಸ್ನೇಹಿಯಾಗಿ, ಮಾದರಿಯಾಗಿ ಗಣೇಶೋತ್ಸವ ಆಚರಿಸುವ ಸಮಿತಿಗಳಿಗೆ ಪ್ರಶಕ್ತ ಸಾಲಿನಿಂದ “ ಮಾದರಿ ಗಣೇಶೋತ್ಸವ ಅವಾರ್ಡ “ ನೀಡಲು ಅಂಕೋಲಾ ಪೊಲೀಸ್ ಠಾಣೆ ಮುಂದಾಗಿದೆ.

ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಬಿ. ಪ್ರಮೋದಕುಮಾರ ಹಾಗೂ ಪಿಎಸೈ ಶ್ರೀಧರ ಅವರ ಪರಿಕಲ್ಪನೆಯಲ್ಲಿ ಗಣೇಶೋತ್ಸವವು ಕಾನೂನು ಸುವ್ಯವಸ್ಥೆಯೊಂದಿಗೆ, ಸಮಾಜುಮುಖಿ ಕಾರ್ಯಗಳತ್ತ ಮುಖ ಮಾಡುವಂತೆ ಮಾಡುವ ಉದಾತ್ತ ಉದ್ದೇಶದೊಂದಿಗೆ, ಜಾಗೃತಿಯ ಧ್ಯೋತಕವಾಗಿ ಪ್ರಶಸ್ತಿ ಅನಾವರಣಗೊಳ್ಳಲಿದೆ.

ಅಚ್ಚುಕಟ್ಟಾಗಿ, ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸುವ ತಾಲೂಕಿನ ಸಾರ್ವಜನಿಕ ಶ್ರೀ ಗಣೇಶ ಸಮಿತಿಗಳಿಗೆ ಪ್ರಥಮ, ದ್ವೀತಿಯ ಹಾಗೂ ತೃತೀಯ ಬಹುಮಾನವಾಗಿ ಪಾರಿತೋಷಕ ಹಾಗೂ ನಗದು ಬಹುಮಾನವನ್ನು ನೀಡಲಾಗುವದು.

ಹಬ್ಬದ ದಿನದಂದು ರಾಸಾಯನಿಕ ಬಳಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜೆ ಮಾಡಿ ಹಳ್ಲ, ಕೆರೆಗಳಲ್ಲಿ ವಿರ್ಸಜಿಸುವ ನಾವು ಪರಿಸರದ ಮೇಲಾಗುವ ಹಾನಿಯ ಬಗ್ಗೆ ಚಿಂತಿಸುವದೆ ಇಲ್ಲ. ಭಕ್ತಿಯ ಹೆಸರಲ್ಲಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸುವದು ತಪ್ಪಲ್ಲ. ಆದರೆ ಅದು ಪರಿಸರಕ್ಕೆ ಮಾರಕವಾಗಬಾರದು ಎಂಬ ನಿಟ್ಟಿನಲ್ಲಿ ಪರಿಸರ ಸ್ನೇಹಿ ಗಣಪನ ವಿಗ್ರಹಗಳಿಗೆ ಒತ್ತು ನೀಡುವ ಸಮಿತಿಯು ಪ್ರಥಮ ಸುತ್ತಿನ ಆಯ್ಕೆ ಪ್ರಕ್ರಿಯೆಗೆ ಆಯ್ಕೆಯಾಗಲಿದೆ.

RELATED ARTICLES  ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು : ಇಬ್ಬರ ದುರ್ಮರಣ

ಗಣೇಶೋತ್ಸವದ ಸಂದರ್ಭದಲ್ಲಿ ಪಟಾಕಿ, ಅತಿಯಾದ ಡಿಜೆ ಸೌಂಡ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತ ಶಬ್ದ ಮಾಲಿನ್ಯ ಮಾಡುವ ಸಮಿತಿಗಳು ಈ ಪ್ರಶಸ್ತಿಯಿಂದ ದೂರವಾಗಲಿದೆ.

ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿರಲಿ :
ಗಣೇಶೋತ್ಸವದ ವೈಭವು ಕೋಮು ಸೌಹಾರ್ದತೆಯೊಂದಿಗೆ ಕಳೆ ಕಟ್ಟುವಂತಾಗಬೇಕು. ಜೊತೆಗೆ ಮೋಜು, ಮಸ್ತಿ ಮಾಡದೇ, ಶಾಂತಿಯುತವಾಗಿ, ಸಂಚಾರ ಸುವ್ಯವಸ್ಥೆಗೆ ಆದ್ಯತೆ ನೀಡಿ ಮಾದರಿಯಾಗಿ ಹೊರ ಹೊಮ್ಮುವ ಶ್ರೀ ಗಣೇಶನ ಸಮಿತಿಯು ಪ್ರಶಸ್ತಿಗೆ ಭಾಜನವಾಗಲಿದೆ.

RELATED ARTICLES  ‘ಫನ್ನಿ ಗೇಂಮ್ಸ್ ಡೇ' : ಸರಸ್ವತಿ ವಿದ್ಯಾ ಕೇಂದ್ರದಲ್ಲಿ ವಿಶೇಷವಾಗಿ ಸಂಯೋಜನೆ : ಉತ್ಸಾಹದಿಂದ ಭಾಗವಹಿಸಿದ ಮಕ್ಕಳು.

ಅತ್ಯುತ್ತಮವಾಗಿ ಗಣೇಶೋತ್ಸವ ಆಚರಿಸುವ ಸಮಿತಿಯನ್ನು ತಹಸೀಲ್ದಾರ ವಿವೇಕ ಶೇಣ್ವಿ ಹಾಗೂ ಅಂಕೋಲಾ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದ ಆಯ್ಕೆ ಸಮಿತಿಯು, ಮಾದರಿ ಗಣೇಶೊತ್ಸವ ಅವಾರ್ಡಗೆ ಅರ್ಹ ಸಮಿತಿಯನ್ನು ಗುರುತಿಸಲಿದೆ.

ತಾಲೂಕಿನಲ್ಲಿ ಗಣೇಶೋತ್ಸವದ ಆಚರಣೆ ಮಾದರಿಯಾಗಿ ಆಚರಿಸುವ ನಿಟಿನಲ್ಲಿ ಪ್ರಸಕ್ತ ಸಾಲಿನಿಂದ ಮಾದರಿ ಗಣೇಶೋತ್ಸವ ಅವಾರ್ಡ ನೀಡಲು ತಿರ್ಮಾನಿಸಿದ್ದೇವೆ. ಪರಿಸರ ಸ್ನೇಹಿಯಾಗಿ ಉತ್ಸಾಹ, ಸಂಭ್ರಮದಿಂದ ಹಬ್ಬ ಆಚರಿಸುವ ಸದಾಶಯದೊಂದಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುವದು ಎಂದು ಬಿ. ಪ್ರಮೋದಕುಮಾರ ಮಾಹಿತಿ ನೀಡಿದ್ದಾರೆ.