ಗಣೇಶ ಹಬ್ಬವನ್ನು ಲೋಕಮಾನ್ಯ ತಿಲಕರು ಸಾರ್ವಜನಿಕ ಉತ್ಸವನ್ನಾಗಿ ಆಚರಿಸಲು ಕರೆ ನೀಡಿದ ಬಳಿಕ ಭಾರತದಾದ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಇದಕ್ಕೂ ಮುನ್ನ ಗೌರಿ ಗಣೇಶ ಹಬ್ಬ ಅಥವಾ ಗೌರಿಹಬ್ಬವನ್ನು ದಕ್ಷಿಣ ಭಾರತದಲ್ಲಿ ಮಾತ್ರ ವಿಶೇಷವಾಗಿ ಆಚರಿಸಲಾಗುತ್ತದೆ. ಈ ಹಬ್ಬ ವಿವಾಹಿತ ಸ್ತ್ರೀಯರಿಗೆ ಮೀಸಲಾಗಿದ್ದು ಸಾಮಾನ್ಯವಾಗಿ ಹಿಂದೂ ಕ್ಯಾಲೆಂಡರ ಪ್ರಕಾರ ಭಾದ್ರಪದ ಶುದ್ಧ ತೃತೀಯ ದಿನದಂದು (ಅಂದರೆ ಭಾದ್ರಪದ ಮಾಸದ ಮೊದಲ ಪಕ್ಷದ ಮೂರನೆಯ ದಿನ) ಆಚರಿಸಲಾಗುತ್ತದೆ. ಗೌರಿ ಹಬ್ಬದ ಮರುದಿನ, ಅಂದರೆ ಭಾದ್ರಪದ ಶುದ್ಧ ಚತುರ್ಥಿ (ಅಂದರೆ ಭಾದ್ರಪದ ಮಾಸದ ಮೊದಲ ಪಕ್ಷದ ನಾಲ್ಕನೆಯ ದಿನ) ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಗೌರಿಹಬ್ಬವನ್ನು ವಿವಾಹಿತ ಮಹಿಳೆಯರು ಆಚರಿಸುವ ಹಬ್ಬವಾಗಿದ್ದು ಈ ದಿನದಂದು ತಮ್ಮ ಪತಿಯರಿಗೆ ಹೆಚ್ಚಿನ ಆಯಸ್ಸು, ಸಂತಾನಭಾಗ್ಯ ಮತ್ತು ಕುಟುಂಬಕ್ಕೆ ಸಮೃದ್ಧಿಯನ್ನು ಬೇಡಿಕೊಳ್ಳುತ್ತಾರೆ. ಈ ಹಬ್ಬದ ಆಚರಣೆ ಮತ್ತು ವಿಧಿವಿಧಾನಗಳು ಹೆಚ್ಚೂ ಕಡಿಮೆ ವರಮಹಾಲಕ್ಷಿಯ ಹಬ್ಬದಂತೆಯೇ ಇದೆ.

ಒಂದೇ ವ್ಯತ್ಯಾಸವೆಂದರೆ ಅಲ್ಲಿ ಗೌರಿಯ ಬದಲಿಗೆ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ದಕ್ಷಿಣ ಭಾರತದಾದ್ಯಂತ ವಿವಾಹಿತ ಮಹಿಳೆಯರು ಗೌರಿ ಹಬ್ಬವನ್ನು ತಪ್ಪದೇ, ಅತ್ಯಂತ ಸಡಗರ ಮತ್ತು ಸಂಭ್ರಮಗಳಿಂದ ಆಚರಿಸುತ್ತಾರೆ. ಈ ಹಬ್ಬದ ಬಗ್ಗೆ ಕೆಲವು ಉಪಯುಕ್ತ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಗೌರಿ ಗಣೇಶ ಹಬ್ಬದ ಹಿಂದಿನ ದಂತಕಥೆ ಗಣೇಶನ ಹುಟ್ಟಿನ ಬಗ್ಗೆ ವಿವಿಧ ಕಥೆಗಳಿದ್ದರೂ ಹೆಚ್ಚು ಜನಪ್ರಿಯವಾಗಿರುವ ಕಥೆ ಹೀಗಿದೆ: ಒಮ್ಮೆ ಕೈಲಾಸದಲ್ಲಿ ಪಾರ್ವತಿ ಒಂಟಿತನವನ್ನು ಅನುಭವಿಸುತ್ತಿದ್ದಳು. ತನ್ನ ಒಂಟಿತನವನ್ನು ಕಳೆಯಲು ಮಣ್ಣಿನಿಂದ ಚಿಕ್ಕ ಬಾಲಕನ ಪ್ರತಿಮೆಯೊಂದನ್ನು ಮಾಡಿ ಅದಕ್ಕೆ ಜೀವ ನೀಡಿದಳು. ಈ ಬಾಲಕನಿಗೆ ಗಣೇಶ ಎಂದು ನಾಮಕರಣ ಮಾಡಿ ತಾನು ಸ್ನಾನಕ್ಕೆ ಹೋದಾಗ ತನ್ನ ಸ್ನಾನಗೃಹದ ಬಾಗಿಲನ್ನು ಕಾವಲು ಕಾಯುವಂತೆ ಆಜ್ಞಾಪಿಸಿ ಒಳನಡೆದಳು. ಗೌರಿ ಗಣೇಶ ಹಬ್ಬದ ಹಿಂದಿನ ದಂತಕಥೆ ಈ ಸಮಯದಲ್ಲಿ ಕೈಲಾಸಕ್ಕೆ ಆಗಮಿಸಿದ ಶಿವ ಒಳಗಡಿಯಿಡಲು ಯತ್ನಿಸಿದಾಗ ಬಾಲಕ ಗಣೇಶ ಶಿವನನ್ನು ತಡೆಯುತ್ತಾನೆ. ತನ್ನ ಮಗನೇ ಎಂದು ಗೊತ್ತಿಲ್ಲದೆ ಕೋಪಾವಿಷ್ಠನಾದ ಶಿವ ಬಾಲಕನ ರುಂಡವನ್ನು ಸಂಹರಿಸುತ್ತಾನೆ. ಗೌರಿ ಗಣೇಶ ಹಬ್ಬದ ಹಿಂದಿನ ದಂತಕಥೆ ಬಳಿಕ ಸ್ನಾನ ಮುಗಿಸಿ ಹೊರಬಂದ ಪಾರ್ವತಿದೇವಿ ತನ್ನ ಮಗನ ಶವವನ್ನು ಕಂಡು ಅತ್ಯಂತ ದುಃಖಿತಳಾಗುತ್ತಾಳೆ. ದುಗುಡ ಮತೋ ಕೋಪಾವೇಶಗಳ ಭರದಲ್ಲಿ ಗಣೇಶನ ರುಂಡ ಎಲ್ಲಿಯೋ ಕಳೆದುಹೋಗುತ್ತದೆ. ಪಾರ್ವತಿಯನ್ನು ಶಾಂತಗೊಳಿಸಲು ಶಿವ ಬಾಲಕನಿಗೆ ಜೀವನೀಡುವ ವಾಗ್ದಾನ ನೀಡುತ್ತಾನೆ. ಆದರೆ ಕಳೆದ ರುಂಡ ಸಿಗದೇ ಇರುವ ಕಾರಣ ತನ್ನ ಬೆಂಬಲಿಗರಲ್ಲಿ ಕಾಡಿನ ಕಡೆಯಿಂದ ಯಾವ ಪ್ರಾಣಿ ಮೊದಲು ಬಂದಿತೋ ಅದನ್ನೇ ಗಣೇಶನಿಗೆ ಇರಿಸುವುದಾಗಿ ತಿಳಿಸುತ್ತಾನೆ. ಬಳಿಕ ಬಿಳಿಯ ಆನೆಯೊಂದು ಪ್ರಥಮವಾಗಿ ಪ್ರತ್ಯಕ್ಷವಾಗುತ್ತದೆ. ಅಂತೆಯೇ ಆನೆಯ ತಲೆಯನ್ನು ಬಾಲಕನ ಮುಂಡಕ್ಕೆ ಜೋಡಿಸಿ ಜೀವ ನೀಡಲಾಗುತ್ತದೆ. ಅಂತೆಯೇ ಗಣೇಶನ ಮುಂಡ ಮಾನವರಂತಿದ್ದರು ರುಂಡ ಮಾತ್ರ ಆನೆಯದ್ದಾದುದರಿಂದಲೇ ಗಜಮುಖನೆಂಬ ಹೆಸರು ಬಂದಿದೆ. ಗೌರಿ ಹಬ್ಬದ ಸಂಪ್ರದಾಯಗಳು ಈ ಹಬ್ಬದ ದಿನ ವಿವಾಹಿತ ಮಹಿಳೆಯರು ಬೆಳಿಗ್ಗೆಯೇ ಸ್ನಾನ ಮಾಡಿ ಹೊಸ ಮತ್ತು ಬೆಡಗಿನ ಉಡುಗೆ ಅಥವಾ ಸೀರೆಗಳನ್ನು ಉಟ್ಟು ತಯಾರಾಗುತ್ತಾರೆ. ತಮ್ಮ ಮನೆಯ ಚಿಕ್ಕ ಹೆಣ್ಣುಮಕ್ಕಳಿಗೂ ಹೊಸ ಹೊಸ ಬಟ್ಟೆ ತೊಡಿಸಿ ಸಿಂಗರಿಸಿ ಸಿದ್ಧಪಡಿಸುತ್ತಾರೆ. ಪ್ರಥಮ ವಿಧಿಯಾಗಿ ಜಲಗೌರಿ ಅಥವಾ ಅರಿಶಿನಗೌರಿಗೆ (ಅರಿಶಿನದಿಂದ ಮಾಡಿದ ಗೌರಿಯ ಮೂರ್ತಿ) ಪೂಜೆಯನ್ನು ಸಲ್ಲಿಸಲಾಗುತ್ತದೆ. ಬಳಿಕ ತಟ್ಟೆಯೊಂದರಲ್ಲಿ ಧಾನ್ಯಗಳನ್ನಿರಿಸಿ ಅದರ ಮೇಲೆ ಗೌರಿಯ ಪುಟ್ಟ ವಿಗ್ರಹವನ್ನಿರಿಸಲಾಗುತ್ತದೆ. ಗೌರಿ ಹಬ್ಬದ ಸಂಪ್ರದಾಯಗಳು ಆ ಬಳಿಕ ನಡೆಸುವ ಪೂಜೆಯನ್ನು ಅತ್ಯಂತ ಭಕ್ತಿಭಾವ, ಸ್ವಚ್ಛತೆ ಮತ್ತು ಮಂತ್ರಪಠಣಗಳಿಂದ ನಡೆಯುತ್ತದೆ. ವಿಗ್ರಹವನ್ನು ಬಾಳೆಕಂಭ ಮತ್ತು ಮಾವಿನ ತಳಿರು ತೋರಣದ ಮಂಟಪವೊಂದು ಸುತ್ತುವರೆದಿರುತ್ತದೆ. ಗೌರಿಯ ಮೂರ್ತಿಯನ್ನೂ ಸುಂದರವಾದ ಹೂವುಗಳು ಮತ್ತು ಹತ್ತಿಯ ಮಾಲೆಯಿಂದ ಅಲಂಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿವಾಹಿತ ಮಹಿಳೆಯರು ತಮ್ಮ ಮಣಿಕಟ್ಟುಗಳಿಗೆ ಹದಿನಾರು ಗಂಟುಗಳಿರುವ ದಾರವನ್ನು ಕಟ್ಟಿಕೊಳ್ಳುತ್ತಾರೆ. ‘ಗೌರಿದಾರ’ ಎಂದು ಕರೆಯಲಾಗುವ ಈ ದಾರ ದೇವಿಯ ಅನುಗ್ರಹ ಪಡೆಯಲು ನೆರವಾಗುತ್ತದೆ ಎಂದು ಇವರು ನಂಬುತ್ತಾರೆ.

RELATED ARTICLES  ಕೈಕೊಟ್ಟ ಇವಿಎಂ ಮಷಿನ್ : ಒಂದು ಗಂಟೆಗಳ ಕಾಲ ಮತದಾನ ಸ್ಥಗಿತ

ನಂತರದ ವಿಧಿ ವಿಧಾನ ಪೂಜೆಯ ಬಳಿಕ ವ್ರತವನ್ನು ಪಾಲಿಸುತ್ತಿರುವ ಮಹಿಳೆಯರು ಬಾಗಿನವನ್ನು ಅರ್ಪಿಸಲು ಬಾಗಿನದ ತಯಾರಿಗೆ ತೊಡಗುತ್ತಾರೆ. ಬಾಗಿನವೆಂದರೆ ಮಹಿಳೆಯ ಸೌಂದರ್ಯ ಪರಿಕರಗಳಾದ ಅರಿಶಿನ, ಕುಂಕುಮ, ಕಪ್ಪು ಬಳೆ, ಕಪ್ಪು ಮಣಿ, ಒಂದು ಬಾಚಣಿಗೆ, ಒಂದು ಚಿಕ್ಕ ಕನ್ನಡಿ, ಹಾಗು ಒಂದು ತೆಂಗಿನಕಾಯಿ, ರವಿಕೆಯ ಬಟ್ಟೆ, ವಿವಿಧ ಧಾನ್ಯಗಳು, ಅಕ್ಕಿ, ಬೇಳೆ, ಗೋಧಿ ಮತ್ತು ಬೆಲ್ಲವನ್ನು ಒಳಗೊಂಡಿರುವ ದೊಡ್ಡ ಹರಿವಾಣವಾಗಿದೆ. ವ್ರತವನ್ನು ಆಚರಿಸುವ ಓರ್ವ ಮಹಿಳೆಗೆ ಇಂತಹ ಐದು ಬಾಗಿನಗಳ ಅಗತ್ಯವಿದೆ. ಗೌರಿ ಹಬ್ಬದ ಮಹತ್ವ ಈ ಹಬ್ಬದ ದಿನದಂದು ಗೌರಿದೇವತೆಯನ್ನು ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ದೇವಿಯರಲ್ಲಿಯೇ ಅತಿ ಶಕ್ತಿಶಾಲಿಯಾದ ಆದಿಶಕ್ತಿಯ ಅವತಾರವೆಂದು ನಂಬಲಾಗಿರುವ ಗೌರಿದೇವಿಯನ್ನು ಭಕ್ತಿಭಾವದಿಂದ ಆರಾಧಿಸುವ ಮೂಲಕ ದೇವಿನ ಅನುಗ್ರಹವನ್ನು ಪಡೆಯಬಹುದು ಎಂದು ನಂಬಲಾಗಿದೆ. ತನ್ನ ಭಕ್ತರಿಗೆ ಧೈರ್ಯ ಮತ್ತು ಅತೀವವವಾದ ಸ್ಥೈರ್ಯವನ್ನು ನೀಡುವ ಮೂಲಕ ತನ್ನ ಭಕ್ತರನ್ನು ಸಬಲರನ್ನಾಗಿ ಮಾಡುವಳೆಂದು ಭಕ್ತರು ನಂಬುತ್ತಾರೆ

RELATED ARTICLES  ಬಿಜೆಪಿ ಅಭ್ಯರ್ಥಿ ಕಾಗೇರಿ ಗೆಲುವು.