ಗೋಕರ್ಣ:ಪ ಪೂ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರಮಠ, ಇವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಗಣೇಶ ಚೌತಿ ಉತ್ಸವ ಪ್ರಾರಂಭಗೊಂಡಿತು . ಮುಂಜಾನೆ ರಥಬೀದಿಯಲ್ಲಿ ಗಣಪತಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿಕೊಂಡು ವಾದ್ಯದೊಂದಿಗೆ ಕರೆತರಲಾಯಿತು .ವೇ ಶಿತಿಕಂಠ ಹಿರೇಭಟ್ ಪೂಜಾ ಕೈಂಕರ್ಯ ನೆರವೇರಿಸಿದರು .

RELATED ARTICLES  ಕುಮಟಾ : ಎಪ್ರಿಲ್ ೨೯ ಬುಧವಾರದಿಂದ ಅಡಕೆ ವ್ಯಾಪಾರ ಪ್ರಾರಂಭ..!

ಪ್ರತಿದಿನವೂ ವಿಶೇಷ ಪೂಜೆ, ನೈವೇದ್ಯ ಸಮರ್ಪಣೆ, ಮಂಗಳಾರತಿ , ಮೂರನೇದಿನ ದಂಡಾವಳಿಪೂಜೆ, ವಿದ್ವಜ್ಜನರಿಂದ ವೇದಸಭೆ ಜರುಗಲಿದೆ. ನಾಲ್ಕನೇದಿನದ ಪಲ್ಲಕ್ಕಿ ಮೆರವಣಿಗೆಯಲ್ಲಿ ಕೊಂಡೊಯ್ದು ಸಮುದ್ರದಲ್ಲಿ ಮೂರ್ತಿಯನ್ನು ವಿಸರ್ಜಿಸಲಾಗುವುದು. ಸರ್ವರಿಗೂ ಆತ್ಮೀಯ ಆಮಂತ್ರಣ .

RELATED ARTICLES  ಸುಗಮ ಸಂಗೀತ ಪರಿಷತ್ ಸುಗಮ ಸಂಗೀತವನ್ನು ಉಳಿಸಿಕೊಂಡು ಹೋಗಲು ಚಳುವಳಿ ರೂಪದಲ್ಲಿ ಕೆಲಸ ಮಾಡಿದೆ