ಹೊನ್ನಾವರ:ರಾಜ್ಯದ ಚಾನೆಲ್ ವೊಂದರ ಹೆಸರು ಹೇಳಿಕೊಂಡು ಓಡಾಡುತ್ತಿದ್ದ ಯುವಕನನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾನು ಚಾನೆಲ್ ವೊಂದರ ವರದಿಗಾರನೆಂದು ಪಟ್ಟಣದಲ್ಲಿ ಓಡಾಡಿಕೊಂಡಿದ್ದ ಅಂಕೋಲಾ ಮೂಲದ ಲೂಯಿಸ್ ಎನ್ನುವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಿಎಸ್ಐ ಸಂತೋಷ್ ಕೈಕಿಣಿ ಅವರಿಗೆ ಕರೆ ಮಾಡಿದ್ದ ಲೂಯಿಸ್, ತನಗೂ ಹಾಗೂ ಇನ್ಯಾರದ್ದೋ ನಡುವೆ ಗಲಾಟೆ ನಡೆಯಲಿದೆ. ಕೂಡಲೇ ಸ್ತಳಕ್ಕಾಗಮಿಸುವಂತೆ ಗೇರುಸೊಪ್ಪ ವೃತ್ತಕ್ಕೆ ಕರೆಯಿಸಿಕೊಂಡಿದ್ದ. ಈ ವೇಳೆ ಯುವತಿಯೊಬ್ಬಳ ಜತೆ ಇದ್ದ ಲೂಯಿಸ್, ಪೊಲೀಸರು ಬರುತ್ತಿದ್ದಂತೆ ಯಾರಿಗೋ ಕರೆಮಾಡಿ ಅಸಭ್ಯವಾಗಿ ಬೈದಾಡುತ್ತಿದ್ದ ಎನ್ನಲಾಗಿದೆ.

RELATED ARTICLES  ಅಧಿಕಾರಿ ಮತ್ತು ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಎಚ್ಚರಿಕೆ

ಈ ವೇಳೆ ಪೊಲೀಸರು ಬೈಕ್ ನ ಡಾಕ್ಯುಮೆಂಟ್ ಗಳನ್ನು ಪರಿಶೀಲಿಸಿದಾಗ, ತಾನೊಬ್ಬ ಚಾನೆಲ್ ವರದಿಗಾರ. ನಾನು ಹೇಳಿದಂತೆ ನೀವು ನಡೆದುಕೊಳ್ಳಬೇಕು ಎಂದಿದ್ದಾನೆ. ಪೊಲೀಸರು ಈ ವೇಳೆ ಚಾನೆಲ್ ನ ಎಂಡಿಯವರೊಂದಿಗೆ ದೂರವಾಣಿ ಮೂಲಕ ಕರೆಮಾಡಿ ಮಾತನಾಡಿದ್ದಾರೆ ಆಗ ಈತ ವರದಿಗಾರ ಅಲ್ಲನೆಂಬ ಸತ್ಯ ತಿಳಿದು ಬಂದಿದೆ.

RELATED ARTICLES  ಎರಡು ದಿನಗಳ ಕಾಲ ಸಮುದ್ರದಲ್ಲಿ ಕರಾವಳಿ ಕಾವಲು ಪಡೆಯಿಂದ ಸಾಗರ ಕವಚ ಕಾರ್ಯಾಚರಣೆ

ಲೂಯಿಸ್ ನನ್ನು ವಶಕ್ಕೆ ಪಡೆದ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದರ ಕುರಿತಾಗಿ ಪ್ರಕರಣ ದಾಖಲಿಸಿಕೊಂಡು ಬೈಕ್ ಅನ್ನು ಸೀಸ್ ಮಾಡಿದ್ದಾರೆ.

ಎಷ್ಟೋ ಬಡಪಾಯಿ ಜನರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡು ಹಣವನ್ನು ಪಡೆದು ಈತನೆ ವಿದೇಶಕ್ಕೆ ಹಾರುತ್ತಿದ್ದ ಎನ್ನುವ ಮಾತುಗಳೂ ಇದೀಗ ಕೇಳಿ ಬರುತ್ತಿದೆ.