ಪರಮಪೂಜ್ಯ ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅನುಗ್ರಹದೊಂದಿಗೆ ಮುಳ್ಳೆರಿಯಾ ಮಂಡಲದ ಪೆರಡಾಲ ವಲಯ ವಿದ್ಯಾರ್ಥಿವಾಹಿನಿಯ ಸಂಯೋಜನೆಯಲ್ಲಿ ಮುಳ್ಳೇರ್ಯ ಮಂಡಲದ 10ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ “ವ್ಯಕ್ತಿಯನ್ನು ಶಕ್ತಿಯಾಗಿಸೋಣ” ಒಂದು ದಿನದ ವಿಶೇಷ ಶಿಬಿರವು 16-7-2017 ಆದಿತ್ಯವಾರದಂದು ಶ್ರೀ ಭಾರತೀ ವಿದ್ಯಾಪೀಠ, ಬದಿಯಡ್ಕದಲ್ಲಿ ನಡೆಯಿತು. ಶ್ರೀ ವೆಂಕಟ್ರಮಣ ಭಟ್ ಪೆರ್ಮುಖ ದೀಪಬೆಳಗಿ ಉದ್ಘಾಟಿಸಿದರು. ಪೆರಡಾಲ ವಲಯಾಧ್ಯಕ್ಷ ಶ್ರೀ ಹರಿಪ್ರಸಾದ್ ಪೆರ್ಮುಖ ಧ್ವಜಾರೋಹಣ ನಡೆಸಿದರು. ವಲಯ ಕಾರ್ಯದರ್ಶಿ ಮುರಳಿ ಪಿ.ಕೆ. ಶಂಖನಾದ ನೆರವೇರಿಸಿದರು. ಗುರುವಂದನೆ ಮೂಲಕ ಶಿಬಿರ ಶುಭಾರಂಭಗೊಂಡಿತು.
ಶಿಬಿರದಲ್ಲಿ:
1) ಪ್ರಾಣಾಯಾಮ,ಏಕಾಗ್ರತೆ ಸಾಧನೆ- ಶಾರದಾ ಎಸ್ ಭಟ್ ಕಾಡಮನೆ
2) ಸಂಸ್ಕೃತಿ ಸ್ವಾಭಿಮಾನ- ಗೋವಿಂದ ಭಟ್ ಬಳ್ಳಮೂಲೆ
3) ಆಚಾರ ವಿಚಾರ ಆಹಾರ- ಬಾಲಕೃಷ್ಣ ಶರ್ಮ ಕುಂಬಳೆ 4)ನಾಯಕತ್ವ- ಸತ್ಯನಾರಾಯಣ ಶರ್ಮ ಪಂಜಿತಡ್ಕ
5) ಸಾಮಾಜಿಕ ಸಂಬಂಧ- ಡಾ. ಬೇಸೀ ಗೋಪಾಲಕೃಷ್ಣ ಭಟ್
ಸಂಪನ್ಮೂಲ ವ್ಯಕ್ತಿಗಳಾಗಿ ಅತ್ಯುತ್ತಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಮಕ್ಕಳಿಗೆ ತಲುಪಿಸುವಲ್ಲಿ ಯಶಸ್ವಿಯಾದರು. 34 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಜೆ 4.15ಕ್ಕೆ ಸಮಾರೋಪ ನಡೆಯಿತು. ಉಪಸ್ಥಿತಿ: ಮುಳ್ಳೆರಿಯಾ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ, ಸಂಸ್ಕಾರ ಪ್ರಧಾನ ನವನೀತಪ್ರಿಯ ಕೈಪಂಗಳ, ವಿವಿಧ ವಲಯಗಳ ವಿದ್ಯಾರ್ಥಿವಾಹಿನಿ ಪ್ರಧಾನರು, ಇತರ ವಿಭಾಗಗಳ ಪ್ರಧಾನರು.
ಶಿಬಿರದ ವಿಶೇಷತೆಗಳು:
ಪಾನೀಯ ವ್ಯವಸ್ಥೆ ಕಷಾಯ, ಹಲಸಿನ ಹಪ್ಪಳವನ್ನು ನೀಡಲಾಯಿತು. ಮಧ್ಯಾಹ್ನ ಊಟಕ್ಕೆ ಗಂಜಿಯೂಟದ ವ್ಯವಸ್ಥೆ ಮಾಡಲಾಗಿತ್ತು. ಆ ಮೂಲಕ ಸತ್ವ ಮಂಗಲ ಪರಿಕಲ್ಪನೆಗೆ ಪುಷ್ಟಿ ನೀಡಲಾಯಿತು.
ಶಿಬಿರ ಶುಲ್ಕ ಸಂಗ್ರಹಿಸಿಲ್ಲ. ಶಿಬಿರಾರ್ಥಿಗಳು ಮನಸಾರೆ ನೀಡಿದ ಮೊತ್ತವನ್ನು (ರೂ.2550/-) ಸಮಾರೋಪದಲ್ಲಿ ವಲಯ ವಿದ್ಯಾನಿಧಿಗೆ ಸಮರ್ಪಿಸಲಾಯಿತು.
ಜೀವಿಕಾ, ಸಂಸ್ಕಾರ, ಮಾತೃ ವಿಭಾಗಗಳ ಸಹಕಾರದೊಂದಿಗೆ ಶಿಬಿರ ಆಯೋಜಿಸಲಾಗಿತ್ತು.
?ವರದಿ: ಶ್ರೀಶ ಕುಮಾರ ಪಂಜಿತಡ್ಕ
ವಿದ್ಯಾರ್ಥಿವಾಹಿನಿ ಪೆರಡಾಲ ವಲಯ