ಬೆಂಗಳೂರು: ಸಂಸ್ಕೃತ ಭಾಷೆ ಕೇವಲ ಪಂಡಿತ, ಪುರೋ­ಹಿತರ ಭಾಷೆಯೆಂಬ ತಪ್ಪು ಕಲ್ಪನೆ­ಯಿದೆ. ಅಮೃತ ಕುಡಿದು ಅಮರ­ರಾದ ದೇವತೆ­ಗಳ ಭಾಷೆಯಾದ ಸಂಸ್ಕತ­ವನ್ನು ಸತ್ತ ಭಾಷೆ ಎಂದು ಜರಿಯು­ವವರ ನಿಲುವು ಬದಲಾಗಬೇಕು ಎಂಬ ಮಹತ್ವದ ಅಂಶಗಳನ್ನು ಒಳಗೊಂಡು ಎಲ್ಲರಲ್ಲಿ ಸಂಸ್ಕೃತ ಜಾಗ್ರತಿ ಮೂಡಿಸುವ ದೃಷ್ಟಿಯಿಂದ “ಸಂಸ್ಕೃತೋತ್ಸವ ೨೦೧೮” ನ್ನು ಹಮ್ಮಿಕೊಳ್ಳಲಾಗಿದೆ.

RELATED ARTICLES  ಕರಾವಳಿಯಲ್ಲಿ ಮತ್ತೆ ಭಾರೀ ಮಳೆ: ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹವಾಮಾನ ಇಲಾಖೆ ಸೂಚನೆ.

ಸಾಧನಾ ಪದವಿ ಕಾಲೇಜಿನಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಜ್ಞಾನ ವಿಜ್ಞಾನ ಕೇಂದ್ರದ ಪ್ರಮುಖರಾದ ವಿದ್ವಾನ್ ಜಗದೀಶ ಶರ್ಮಾ Scientific achievement of ancient India (ಆಧುನಿಕ ಜಗತ್ತಿನ ವಿಜ್ನಾನದ ಕೊಡುಗೆಗಳ ಬಗ್ಗೆ) ಉಪನ್ಯಾಸ ನೀಡಲಿದ್ದಾರೆ. ಕನ್ನಡಪ್ರಭ ದ ಲೇಖಕ ಗಿರೀಶ ರಾವ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಸುವರ್ಣ ನ್ಯೂಸ್ ನ ಸಂಪಾದಕ ಎಸ್.ಕೆ ಶರ್ಮಾ ಸುಂದರ ಅವರು ಮುಖ್ಯ ಅತಿಥಿಗಳಾಗಿ ಹಾಜರಿರುವರು. ಪ್ರಾಂಶುಪಾಲರಾದ ಸೀರಜ್ ಶರ್ಮಾ ಅಧ್ಯಕ್ಷರಾಗಿರುವರು.

RELATED ARTICLES  ಗುಜರಾತ್ ನಲ್ಲಿ ಮತ್ತೆ ಬಿಜೆಪಿ !! ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಛಿದ್ರ ಸಮೀಕ್ಷೆಯಿಂದ ಬಹಿರಂಗ

ಕಾರ್ಯಕ್ರಮಕ್ಕೆ ಎಲ್ಲರನ್ನೂ ಸಂಘಟಕರು ಆಮಂತ್ರಿಸಿದ್ದಾರೆ.