•ಎಂ ಎಸ್ ಶೋಭಿತ್ ಮೂಡ್ಕಣಿ

ಬೆಂಗಳೂರು: ಪ್ರತಿನಿತ್ಯ ದೇಶ ವಿದೇಶದ ವಿಶೇಷತೆಗಳನ್ನು ಕ್ರಿಯಾತ್ಮಕವಾಗಿ ಫೀಚರ್​​ ಮಾಡುವ ಗೂಗಲ್​ ಡೂಡಲ್​, ಇಂದು ಭಾರತದ ಶ್ರೇಷ್ಠ ಇಂಜಿಯರ್​ ಭಾರತ ರತ್ನ ಸರ್​ ಎಂ.ವಿಶ್ವೇಶ್ವರಯ್ಯ ಅವರ 157ನೇ ಜನ್ಮದಿನವನ್ನು ಸ್ಮರಿಸಿದೆ.

ದೇಶ ಕಂಡ ಅತ್ಯುತ್ತಮ ಇಂಜಿನಿಯರ್​ ಸರ್​.ವಿ.ವಿಶ್ವೇಶ್ವರಯ್ಯ ಅವರು ಹುಟ್ಟಿದ ದಿನವಾದ ಇಂದು (ಸೆ.15) ಗೂಗಲ್​ ತನ್ನ ಮುಖಪುಟದಲ್ಲಿ ಅವರ ಭಾವಚಿತ್ರವನ್ನು ಡೂಡಲ್​ಗೆ ಅಳವಡಿಸಿ ನಮನ ಸಲ್ಲಿಸಿದೆ. ಸರ್​.ಎಂ.ವಿಗೆ ಗೌರವ ಸಲ್ಲಿಸಲು ಅವರ ಹುಟ್ಟಿದ ದಿನವನ್ನು ದೇಶದಲ್ಲಿ ಇಂಜಿನಿಯರ್​ ದಿನ ಎಂದು ಆಚರಿಸಲಾಗುತ್ತಿದೆ.

RELATED ARTICLES  ಗೂಡಂಗಡಿಗೆ ನುಗ್ಗಿದ ಲಾರಿ - ಸಿನಿಮೀಯ ರೀತಿಯಲ್ಲಿ ಪಾರಾದ ಜನರು.

ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಸೆ.15 1861ರಂದು ಮುದ್ದೇನಹಳ್ಳಿಯಲ್ಲಿ ಜನಿಸಿದರು. ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಇಂಜಿನಿಯರಿಂಗ್​ ಪದವಿ ಪಡೆದು, ಮುಂಬೈ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್​ ಆಗಿ ವೃತ್ತಿಜೀವನ ಆರಂಭಿಸಿದರು. 1912-1918 ಅವಧಿಯಲ್ಲಿ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲಿ ಬ್ರಿಟಿಷ್​ ಸರ್ಕಾರ ಅವರಿಗೆ “ಸರ್​” ಎಂಬ ಪದವಿ ನೀಡಿ ಗೌರವಿಸಿತ್ತು. 1955ರಲ್ಲಿ ಭಾರತ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿತ್ತು.

RELATED ARTICLES  ಸಂಜೆ ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿ

ಈ ಹಿಂದೆ ನಟ ಸಾರ್ವಭೌಮ ಡಾ. ರಾಜ್‍ಕುಮಾರ್ ಅವರನ್ನು ಗೂಗಲ್ ತನ್ನ ಡೂಡಲ್‍ನಲ್ಲಿ ಪರಿಚಯಿಸಿತ್ತು. ಕುವೆಂಪು ಅವರೂ ಕೂಡ ಡೂಡಲ್‍ನಲ್ಲಿ ಕಾಣಿಸಿಕೊಂಡಿದ್ದರು.