ಸೊರಬ : ಜೆಸಿಐ ಸೊರಬ ವೈಜಯಂತಿ ಹಾಗೂ ಜೆಸಿಐ ಸೊರಬ ಸಿಂಧೂರ ಮಹಿಳಾ ಘಟಕದಿಂದ ಜೇಸಿ ಸಪ್ತಾಹದ ಪ್ರಯುಕ್ತವಾಗಿ ಸೊರಬ ಪಟ್ಟಣದ ಯುಕೆ ಶೆಟ್ಟಿ ಡಾಟ್ ಯುಕೆ ಶೆಟ್ಟಿ ಆಸ್ಪತ್ರೆಯ ಆವರಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು .

ಈ ಕಾರ್ಯಕ್ರಮದಲ್ಲಿ ಜೇಸಿ ಸ್ವರ್ಗ ವೈಜಯಂತಿ ಅಧ್ಯಕ್ಷ ಪ್ರಶಾಂತ್ ದೊಡ್ಮನೆ ಮಾತನಾಡಿ ಜೇಸಿ ಸಂಸ್ಥೆಯ ಯುವಜನತೆಯ ಸಬಲೀಕರಣಕ್ಕೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದು ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವ ಹಲವಾರು ಪ್ರತಿಭೆಗಳನ್ನು ಗುರುತಿಸುವುದು ಜೇಸಿ ಸಂಸ್ಥೆಯ ಧ್ಯೇಯವಾಗಿದೆ ಹಾಗೆ ಈ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಡುವುದು ಜೆಸಿ ಸಂಸ್ಥೆಯ ಪ್ರಮುಖ ಕಾರ್ಯವಾಗಿದೆ ಈ ನಿಟ್ಟಿನಲ್ಲಿ ಜೆಸಿಐ ಸೊರಬ ವೈಜಯಂತಿ ಸಂಸ್ಥೆಯು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದು ಜೆಸಿಐ ಸೊರಬ ವೈಜಯಂತಿ ಕೆಲಸವನ್ನು ಮೆಚ್ಚಿ ಜೇಸಿ ಸಪ್ತಾಹದಲ್ಲಿ ರಾಷ್ಟ್ರಮಟ್ಟದಲ್ಲಿ ಎರಡನೆಯ ಸ್ಥಾನವನ್ನು ಪಡೆದಿದೆ ಎಂದರು .

RELATED ARTICLES  ಭಾರತ ಕ್ರಿಕೆಟಿಗ ಮುಹಮ್ಮದ್ ಶಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ.

ಜೆಸಿಐ ಸೊರಬ ಸಿಂಧೂರ ಮಹಿಳಾ ಘಟಕದ ಅಧ್ಯಕ್ಷೆ ಪೂಜಾ ಪ್ರಶಾಂತ್ ದೊಡ್ಡಮನೆ ಮಾತನಾಡಿ ಮಹಿಳೆಯರು ಸಾಕಷ್ಟು ಪ್ರತಿಭೆಗಳನ್ನು ಹೊಂದಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮನೆಯೊಳಗೆ ಇದ್ದು ತಮ್ಮ ತಮ್ಮ ಪ್ರತಿಭೆಯ ಬಗ್ಗೆ ಅರಿವು ಇರುವುದಿಲ್ಲ ಇಂತಹ ಮಹಿಳೆಯರನ್ನು ಗುರುತಿಸಿ ಅವರ ಪ್ರತಿಭೆಯನ್ನು ಹೊರ ಹಾಕುವ ಕೆಲಸವನ್ನು ಮಾಡಬೇಕಾಗಿದೆ ಎಂದರು .
ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ಯಶವಂತ್ , ನಿವೃತ್ತ ಶಿಕ್ಷಕರನ್ನು ಸುಶೀಲಮ್ಮ , ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರು ಶ್ರೀಮತಿ ಜೋಶಿ ,ಶೇಷಪ್ಪ ಮಾಸ್ಟರ್ , ಅಬಕಾಸ್ ಗ್ರಾಜುಯೆಟ್ ಸುಪ್ರೀತ್, ಅಂಗನವಾಡಿ ಸಹಾಯಕಿ ಯಾದ ದಿಲ್ಶಾದ್ ಮಹಮ್ಮದ್ ಹುಸೇನ್ ,ಸಮಾಜ ಸೇವಕಿ ಶೇಖರಮ್ಮ ದೇವಸ್ಥಾನದ ಅರ್ಚಕರಾದ ಮನೋಹರ್, ದೇವಸ್ಥಾನದ ಕೆಲಸಗಾರರಾದ ಬಸವರಾಜ ,ಸಂಗೀತ ಶಿಕ್ಷಕರಾದ ಪ್ರವೀಣ್ ಭಂಡಾರಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ನೆಮ್ಮದಿ ಶ್ರೀಧರ ಮತ್ತು ನಿವೇದಿತಾ ಶಶಿಕಾಂತ್ ಗೌಡ್ರು ಇವರನ್ನು ಗುರುತಿಸಿ ಸನ್ಮಾನಿಸಲಾಯಿತು .ಈ ಕಾರ್ಯಕ್ರಮದಲ್ಲಿ ಜೆಸಿಐ ಸೊರಬ ವೈಜಯಂತಿಯ ಕೃಷ್ಣಾನಂದ, ವಾಸುದೇವ್ ಬೆನ್ನೂರು ,ಸರಸ್ವತಿ ನಾವುಡ ,ಜಯಮಾಲಾ ,ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು .

RELATED ARTICLES  ಕಾಳಧನ ವಿರುದ್ಧ ಮೋದಿ ಶೂನ್ಯ ಕ್ರಿಯೆ, ದ್ರೋಹ: ಕಾಂಗ್ರೆಸ್‌