ಕುಮಟಾ: ಡೆಂಗ್ಯೂ ಜ್ವರದ ಬಗ್ಗೆ ಜನರಲ್ಲಿ ಆತಂಕ ಮೂಡಿದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಅದನ್ನು ಬಾರದಂತೆ ತಡೆಗಟ್ಟಬಹುದೆಂದು ಹಿರಿಯ ಆರೋಗ್ಯ ತಪಾಸಣಾಧಿಕಾರಿ ದಿನೇಶ್ ನಾಯ್ಕ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಕಸ್ತೂರಬಾ ಇಕೋ ಕ್ಲಬ್ ಸಂಘಟನೆಯಲ್ಲಿ ನಡೆದ ತಾಲೂಕಾ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಡೆಂಗ್ಯೂ ಜ್ವರಕ್ಕೆ ಕಾರಣವಾದ ಅಂಶಗಳನ್ನು ಅದು ಹರಡದಂತೆ ವಹಿಸಬೇಕಾದ ಕಾಳಜಿಗಳನ್ನು ವಿದ್ಯಾರ್ಥಿ ವೃಂದಕ್ಕೆ ವಿಷದ ಪಡಿಸಿದರು. ಬ್ಲಾಕ್ ಹೆಲ್ತ್ ಎಜ್ಯುಕೇಟರ್ ಆದ ಆರ್.ಜಿ.ನಾಯ್ಕ ಸಾಂಕ್ರಾಮಿಕ ಕಾಯಿಲೆಗಳಿಂದ ಬರುವ ಕಾಯಿಲೆಗಳ ಸೂಕ್ತ ತಿಳುವಳಿಕೆ ನೀಡಿದರು. ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕ ಎನ್.ಆರ್.ಗಜು ವಹಿಸಿದ್ದರು. ಕ್ಲಬ್ ಸಂಚಾಲಕ ಕಿರಣ ಪ್ರಭು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಅನಿಲ್ ರೊಡ್ರಗೀಸ್ ವಂದಿಸಿದರು. ಬಿ.ಎಚ್.ಇ., ವೈಜಯಂತಿ ಗೋವೇಕರ, ಕಿರಿಯ ಆರೋಗ್ಯ ಸಹಾಯಕಿ ಶೋಭಾ, ಅಂಗನವಾಡಿ ಶಿಕ್ಷಕಿ ಶಿಲ್ಪಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಮಂಗನಕಾಯಿಲೆಗೆ ಸೂಕ್ತ ಪರಿಹಾರ ಕಲ್ಪಿಸಿ - ಮಹಾಸಭೆ ಆಗ್ರಹ