ಕುಮಟಾ : ಹಿಂದೆ ಶಾರದಾ ಶೆಟ್ಟಿಯವರು ಶಾಸಕರಾಗಿದ್ದಾಗ ಸಾರ್ವಜನಿಕರ ಅನುಕೂಲಕ್ಕಾಗಿ ಹಲವು ಇಲಾಖೆಗಳು ಒಂದೇ ಸೂರಿನಡಿ ಕೆಲಸ ಮಾಡುವ ಉದ್ದೇಶದಿಂದ ಮಿನಿ ವಿಧಾನಸೌಧದ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಮಣಕಿ ಗ್ರಾಮದ ಸರ್ವೆ ನಂಬರ್ ೭೪-ಬ ದಲ್ಲಿ ಅಂದರೆ ಡಯಟ್ ಆವಾರದಲ್ಲಿ ಮೂರು ಎಕರೆ ಜಾಗ ಮಂಜೂರಿ ಪಡೆದಿದ್ದರು. ಕಟ್ಟಡ ನಿರ್ಮಾಣಕ್ಕೆ ೧೨.೫೦ ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಿದ್ದರು .

ಇದೀಗ ಇಲ್ಲಿನ ಡಯಟ್ ಆವಾರದಲ್ಲಿ ಮಂಜೂರಾತಿ ಪಡೆದಿದ್ದ ಮೂರು ಎಕರೆ ಕ್ಷೇತ್ರದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿಯನ್ನು ಹತ್ತು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ತಿಳಿಸಿದ್ದಾರೆ .

RELATED ARTICLES  ವಿಜೃಂಭಣೆಯಿಂದ ನಡೆದ ”ಒಕ್ಕಲು ಉತ್ಸವ”

ಸತ್ವಾಧಾರ ನ್ಯೂಸ್ ನ ಜೊತೆಗೆ ಸಂತಸ ಹಂಚಿಕೊಂಡ ಶಾರದಾ ಶೆಟ್ಟಿ ಅವರು ನನ್ನ ಅಧಿಕಾರ ಅವಧಿಯ ಸಮಯದಲ್ಲಿ ಮಿನಿ ವಿಧಾನಸೌಧಕ್ಕೆ ಮೂರು ಎಕರೆ ಕ್ಷೇತ್ರವನ್ನು ಪಡೆದುಕೊಂಡು ಕಟ್ಟಡ ನಿರ್ಮಾಣಕ್ಕೆ ಅಂದಾಜು ವೆಚ್ಚದ ಪ್ರಸ್ತಾವನೆ ಕ್ರಿಯಾ ಯೋಜನೆಯನ್ನು ಸರ್ಕಾರದ ಮುಂದೆ ಸಲ್ಲಿಸಿದೆ .ಆದರೆ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ನೀಡಿದ ಸಲಹೆಯಂತೆ ಒಂದೇ ಸಲಕ್ಕೆ ಮೂರು ಮಹಡಿ ಕಟ್ಟಡದ ಬದಲು ಎರಡು ಮಹಡಿ ಕಟ್ಟಡ ನಿರ್ಮಾಣಕ್ಕೆ ಹತ್ತು ಕೋಟಿ ಅಂದಾಜು ವೆಚ್ಚದಲ್ಲಿ ಮರು ಪ್ರಸ್ತಾವನೆ ಸಲ್ಲಿಸಲಾಗಿತ್ತು .

ಇದೀಗ ಸರ್ಕಾರವು ನಮ್ಮ ಮರು ಪ್ರಸ್ತಾವನೆ ಪರಿಶೀಲಿಸಿ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ ಉಸ್ತುವಾರಿ ಸಚಿವರಾದ ದೇಶಪಾಂಡೆಯವರ ಸರಕಾರವೂ ನಮ್ಮೊಂದಿಗೆ ಸದಾ ಇದೆ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ತಿಳಿಸಿದ್ದಾರೆ .

RELATED ARTICLES  ಪ್ರವಾಸಕ್ಕೆ ಬಂದವನು ಸಮುದ್ರದಲ್ಲಿ ಕಣ್ಮರೆ..!

ಮಿನಿ ವಿಧಾನಸೌಧದಲ್ಲಿ ನೆಲಮಹಡಿ ಹೊರತುಪಡಿಸಿ ಎರಡು ಮಹಡಿಗಳಿದ್ದು ವಿವಿಧ ಇಲಾಖೆಗಳಿಗೆ ಕೊಠಡಿಗಳು ನೆಮ್ಮದಿ ಕೇಂದ್ರ ,ಸ್ಟ್ರಾಂಗ್ ರೂಮ್ ,ಮೀಟಿಂಗ್ ಹಾಲ್, ಮಳೆ ನೀರು ಕೊಯ್ಲು ,ಉದ್ಯಾನವನ, ಶೌಚಾಲಯ ಇತ್ಯಾದಿಗಳಿಗೆ ಆವರಣ ನಿರ್ಮಿಸಲಾಗುವುದು. ನನ್ನ ಶಾಸಕತ್ವದ ಅವಧಿಯಲ್ಲಿ ಮಾಡಲಾದ ಮಿನಿ ವಿಧಾನಸೌಧ ನಿರ್ಮಾಣದ ಪ್ರಯತ್ನವನ್ನು ಈಗಿನ ಸರಕಾರ ಅನುಮೋದಿಸಿದ್ದು ನಮ್ಮ ಪ್ರಯತ್ನಕ್ಕೆ ಸಂದ ಫಲವಾಗಿದ್ದು ಸಂತಸ ತಂದಿದೆ ಎಂದು ಶಾರದಾ ಶೆಟ್ಟಿ ತಿಳಿಸಿದರು .