ಕುಮಟಾ:ದಿನ ಕಳೆದಂತೆ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಪ್ರಯಾಣಿಸುವ ಬಸ್ ಪ್ರಯಾಣಿಕರು ಜೀವವನ್ನು ಕೈಯ್ಯಲ್ಲಿ ಹಿಡಿದು ಓಡಾಡುವಂತ ಪರಿಸ್ಥಿತಿ ಕಮಟಾ ತಾಲೂಕಿನಲ್ಲಿ ಬರತೊಡಗಿದೆ. ಇದಕ್ಕೆ ಸಾಕ್ಷಿ ಈ ಘಟನೆ.

ಇಂದು ಬೆಳಿಗ್ಗೆ ಕುಮಟಾ ದಿಂದ ಕೋಡಕಣಿ ಹೊರಟ ಬಸ್ ನ ಹಿಂಬದಿ ಎರಡು ಟೈಯರ್ ಗಳು ಕಿತ್ತು ಹೊರಗೆ ಬಂದಿದ್ದು ಚಾಲಕನ ಕಾಳಜಿಯಿಂದ ಹದಿನಾರು ಜನ ಪ್ರಯಾಣಿಕರ ಪ್ರಾಣ ಉಳಿದಂತಾಗಿದೆ. ಎದುರಾಗಿದ್ದ ಭಾರೀ ಆಪತ್ತು ದೇವರ ದಯೆಯಿಂದ ತಪ್ಪಿತು ಎನ್ನುತ್ತಿದ್ದಾರೆ ಬಸ್ ಪ್ರಯಾಣಿಕರು.

RELATED ARTICLES  ದಿ|| ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭ: ಕಲಾಗಂಗೋತ್ರಿ ವತಿಯಿಂದ ಕಾರ್ಯಕ್ರಮ ಸಂಯೋಜನೆ

ಇಂತ ಘಟನೆ ಗಳು ಪದೇ ಪದೇ ಸಂಭವಿಸಿದ್ದರು ಅಧಿಕಾರಿಗಳು ಮೌನಕ್ಕೆ ಜಾರಿರುವುದು ಹಲವರು ಪ್ರಯಾಣಿಕರು ಪ್ರಶ್ನೆ ಮಾಡುವಂತಾಗಿದೆ.ಜನರ ಪ್ರಾಣದ ಜೊತೆ ಆಟವಾಡುತ್ತಿರುವಂತ, ಡಿಪೋ ಒಳಗೆ ಕೆಲಸ ಮಾಡುವ ಕೆಲಾಗಾರರ ಬಗ್ಗೆ ಕೆ ಎಸ್ ಆರ್ ಟಿ ಸಿ ಆಡಳಿತ ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಂಡು ಇಂತ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿ.

RELATED ARTICLES  ನಾಳೆ ಉತ್ತರಕನ್ನಡಕ್ಕೆ ಬರ್ತಾರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

sorce: UK Express