ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ)ವು ಆರ್ಥಿಕ ಅಧಿಕಾರಿ, ಡೈರೆಕ್ಟರ್ ಮತ್ತು ಉಪನ್ಯಾಸಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 10
ಹುದ್ದೆಗಳ ವಿವರ
1ಆರ್ಥಿಕ ಅಧಿಕಾರಿ ಹುದ್ದೆಗಳು – 04
2.ಡೈರೆಕ್ಟರ್ ಹುದ್ದೆಗಳು – 03
3.ಉಪನ್ಯಾಸಕ ಹುದ್ದೆಗಳು – 03

ವಿದ್ಯಾರ್ಹತೆ : ಕ್ರ ಸಂ 1ರ ಹುದ್ದೆಗೆ ಅರ್ಥಶಾಸ್ತ್ರ ಅಥವಾ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಕ್ರ.ಸಂ 2ರ ಹುದ್ದೆಗೆ ಟೆಕ್ಸಟೈಲ್ ವಿಷಯದಲ್ಲಿ ಪದವಿ, ಕ್ರ ಸಂ 3ರ ಹುದ್ದೆಗೆ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ ವಿಷಯದಲ್ಲಿ ಪದವಿ ಪಡೆದಿರಬೇಕು.

RELATED ARTICLES  ಉತ್ತರಕನ್ನಡದ ಹಲವೆಡೆ ಇಳೆಗೆ ತಂಪೆರೆದ ವರುಣ.

ವಯೋಮಿತಿ : ಕ್ರ ಸಂ 1ರ ಹುದ್ದೆಗೆ ಗರಿಷ್ಠ 30 ವರ್ಷ, 2ರ ಹುದ್ದೆಗೆ ಗರಿಷ್ಠ 50 ವರ್ಷ, ಕ್ರ ಸಂ 3 ಹುದ್ದೆಗೆ ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿಮಾಡಲಾಗಿದೆ. ಪ.ಜಾ, ಪ.ಪಂ ದವರಿಗೆ 5 ವರ್ಷ, ಹಿಂದುಳಿದ ವರ್ಗದವರಿಗೆ 3 ವರ್ಷಗಳ ವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

RELATED ARTICLES  ಡಿ. 29ರಂದು “ಭಜನಾ ಸಪ್ತಾಹ” ಕಾರ್ಯಕ್ರಮ

ಶುಲ್ಕ : ಪ.ಜಾ, ಪ.ಪಂ, ಪಿಎಚ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇತರ ಅಭ್ಯರ್ಥಿಗಳಿಗೆ 25 ರೂ ನಿಗದಿಗೊಳಿಸಲಾಗಿದೆ. ಶುಲ್ಕವನ್ನು ಎಸ್‍ಬಿಐ ಬ್ಯಾಂಕ್ ಮೂಲಕ ಪಾವತಿ ಮಾಡುವಂತೆ ಸೂಚಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-09-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.upsconline.nic.in ಗೆ ಭೇಟಿ ನೀಡಿ.