ಬೆಳ್ಳುಳ್ಳಿ ತಿಂದ್ರೆ ವಾಸನಬರುತ್ತೆ ಅಂತ ಮೂಗುಮುರಿಯುವವರೇ ಜಾಸ್ತಿ. ಆದ್ರೆ ಬೆಳ್ಳುಳ್ಳಿಯಿಂದ ನಮ್ಮ ಆರೋಗ್ಯಕ್ಕೆ ಹಲವಾರು ಉಪಯೋಗವಿದೆ. ನಿತ್ಯ ಹಸಿ ಎರಡು ಎಸೆಳು ಬೆಳ್ಳುಳ್ಳಿ ತಿನ್ನುವುದರಿಂದ ರಕ್ತ ಶುದ್ಧವಾಗುತ್ತದೆ. ಹಿಂದೆ ಹಿರಿಯರು ಮಕ್ಕಳಿಗೆ ಕೆಮ್ಮು ಬಂದ್ರೆ ಎಸೆಳು ಬೆಳ್ಳುಳ್ಳಿ ಜೊತೆಗೆ ಒಂದು ಹರಳು ಉಪ್ಪು ಸೇರಿಸಿಕೊಂಡು ತಿನ್ನಿ. ಬಾಯಿಗೆ ಕಾರವಾಗುತ್ತದೆ. ಆಗ ನೀರು ಕುಡಿಯಬೇಡೆ. ಹೀಗೆ ಮಾಡಿದ್ರೆ ಕೆಮ್ಮು ಶಮನವಾಗುತ್ತದೆ. ಬೆಳ್ಳುಳ್ಳಿಯಲ್ಲಿ ಉತ್ತಮ ಜೀರ್ಣಕಾರಿ ಅಂಶವಿದೆ. ಇದು ದೇಹವನ್ನು ಶಾಖವಾಗಿಡುತ್ತದೆ.
ಒಂದು ಟೀ ಚಮಚ ಬೆಳ್ಳುಳ್ಳಿಯ ರಸವನ್ನು ಅಷ್ಟೇ ಪ್ರಮಾಣದ ಜೇನು ತುಪ್ಪದೊಡನೆ ತೆಗೆದುಕೊಳ್ಳುವುದರಿಂದ ಜಂತು ಹುಳುಗಳು ಮಲದ ಮೂಲಕ ಹೊರಬೀಳುತ್ತವೆ. ಬಾಣಂತೀಯರಿಗೆ ನಿತ್ಯ ಅನ್ನದ ಜೊತೆಗೆ ನಾಲ್ಕು ಎಸೆಳುಬೆಳ್ಳುಳ್ಳಿ ತಿನ್ನುವುದರಿಂದ ಎದೆ ಹಾಲು ಜಾಸ್ತಿ ಆಗುತ್ತದೆ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಹಿರಿಯರ ಮಾತು.