ಶಿರಸಿ: ಶಿವರಾಮ ಹೆಬ್ಬಾರ್​ ಅವರು ಇಂದು ಕಾಂಗ್ರೆಸ್​ಗೆ ರಾಜೀನಾಮೆ ನೀಡುತ್ತಾರೆ. ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಆಂತರಿಕ ಸಭೆ ನಡೆಸಲಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್​ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಸುದ್ದಿಗಳು ಬಿರುಗಾಳಿಯಂತೆ ಹಬ್ಬುತ್ತಿದ್ದವು. ಆದರೆ ಇಂದು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ಶಾಸಕರು ಮಾಧ್ಯಮಗಳ ವರದಿಗಳಿಗೆ ಪದೇಪದೆ ಉತ್ತರ ಕೊಡಲಾಗದು. ನನಗೇ ಗೊತ್ತಿಲ್ಲದ ಹಲವು ಸಂಗತಿಗಳನ್ನು ಪ್ರಸಾರ ಮಾಡುತ್ತಿವೆ. ನನ್ನ ಊಹೆಗೂ ನಿಲುಕದ ವಿಚಾರಗಳು ಮಾಧ್ಯಮಗಳಲ್ಲಿ ಭಿತ್ತರಗೊಳ್ಳುತ್ತಿವೆ ಎಂದು ಹೇಳಿದರು. ಇದರಿಂದಾಗಿ ಗೊಂದಲಕ್ಕೆ ಅವರು ತೆರೆ ಎಳೆದರು.

RELATED ARTICLES  ಕೇಂದ್ರದ ಎಚ್‌ಯುಐಡಿ ಕಾಯ್ದೆ ವಾಪಸ್ ಪಡೆಯುವಂತೆ ಚಿನ್ನದ ವ್ಯಾಪಾರಸ್ಥರಿಂದ ಪ್ರತಿಭಟನೆ ಹಾಗೂ ಮನವಿ ಸಲ್ಲಿಕೆ

ಯಲ್ಲಾಪುರ ಶಾಸಕರು ಕಾಂಗ್ರೆಸ್​ಗೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಕಳೆದ ನಾಲ್ಕೈದು ದಿನಗಳಿಂದ ಹರಿದಾಡುತ್ತಿದೆ. ಆದರೆ ನಾನಂತೂ ಆ ಬಗ್ಗೆ ಯೋಚಿಸಿಲ್ಲ. ಈ ಕ್ಷಣದವರೆಗೆ ನಿರ್ಣಯ ಮಾಡಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಅವರೇ ಸ್ವತಃ​ ಹೇಳಿದ್ದಾರೆ.

ಈ ವಿಚಾರಗಳಿಗೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿದ ಶಾಸಕರು, ನನಗೆ ಬಿಜೆಪಿಗೆ ಸೇರುವಂತೆ ಅಭಿಮಾನಿಗಳು ಹೇಳಿದ್ದಾರೆ. ಒತ್ತಡ ತರುತ್ತಾರೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಇವೆಲ್ಲ ಸಾಮಾನ್ಯ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕ್ಷಣದವರೆಗೆ ರಾಜೀನಾಮೆ ಕೊಡುವ ಬಗ್ಗೆ ನಿರ್ಣಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES  ಹಿಂಸಾತ್ಮಕವಾಗಿ ತುಂಬಿಕೊಂಡು ಹೋರಿಯ ಸಾಗಾಟ : ಓರ್ವನ ಬಂಧನ

ಯಲ್ಲಾಪುರದ ಕಾಂಗ್ರೆಸ್​ ಶಾಸಕ ಶಿವರಾಮ ಹೆಬ್ಬಾರ್​ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದ್ದ ಬೆನ್ನಲ್ಲೇ ಅವರೂ ಕೂಡ ಎರಡೂ ಮೊಬೈಲ್​ಗಳನ್ನು ಸ್ವಿಚ್​ ಆಫ್​ ಮಾಡಿಕೊಂಡಿದ್ದರು. ಆದರೀಗ ಅವರು ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿರುವ ಮೂಲಕ ಗೊಂದಲ ಪರಿಹರಿಸಿದ್ದಾರೆ.