ಶಿರಸಿ: ದಾಯಿಮನೆ ಸಹಕಾರ ಸಂಘದಲ್ಲಿ 2.50 ಲಕ್ಷ ರೂ. ಬೆಳೆ ಸಾಲ ಮಾಡಿಕೊಂಡಿದ್ದ ಅಡಿಕೆ ಬೆಳೆಗಾರರೊಬ್ಬರು ಅಡಿಕೆ ಬೆಳೆಗೆ ಉಂಟಾಗಿರುವ ಕೊಳೆರೋಗದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ದಾಯಿಮನೆ ಗ್ರಾಮದಲ್ಲಿ ನಡೆದಿದೆ.

RELATED ARTICLES  ಮೋದಿಗೆ ಪತ್ರ ಬರೆದ ಆರ್.ವಿ ದೇಶಪಾಂಡೆ.: ಪತ್ರದಲ್ಲಿ ಏನಿದೆ ಗೊತ್ತೇ?

ಅವರು, ಎರಡು ಎಕರೆ ತೋಟದಲ್ಲಿ ಅಡಿಕೆ ಬೆಳೆ ಬೆಳೆದಿದ್ದರು. ಅದಕ್ಕೆ ಕೊಳೆ ರೋಗ ಬಂದು ಲಕ್ಷಾಂತರ ರೂಪಾಯಿ ನಷ್ಟ ಹೊಂದಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.

RELATED ARTICLES  ಸಮುದ್ರದಲ್ಲಿ ಬಿದ್ದು ನಾಪತ್ತೆಯಾದ ಯುವಕನ ಶವ ಪತ್ತೆ.

ಚಂದ್ರಶೇಖರ್ ನಾರಾಯಣ ಭಟ್ ಆತ್ಮಹತ್ಯೆ ಮಾಡಿಕೊಂಡ ರೈತ.ಇವರು ಮನೆಯ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಶಿರಸಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.